ಮಂಗಳವಾರ, ಮೇ 11, 2021
27 °C

ಸ್ವ-ಉದ್ಯೋಗ ಕೈಗೊಳ್ಳಲು ಮಹಿಳೆಯರಿಗೆ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಕೇಶ್ವರ: ಮಹಿಳೆಯರು ತಮ್ಮ ಬಿಡುವಿನ ವೇಳೆಯಲ್ಲಿ ಸ್ವ-ಉದ್ಯೋಗ ಮಾಡಿ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ತಾಲ್ಲೂಕು ಕೈಗಾರಿಕಾ ವಿಸ್ತರಣಾಧಿಕಾರಿ ಆರ್.ಬಿ. ಮದಿಹಳ್ಳಿ ಕರೆ ನೀಡಿದರು.

 ಸಂಕೇಶ್ವರದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ.ಜಿ.ಪ. ಬೆಳಗಾವಿ ಹಾಗೂ ಸಂಕೇಶ್ವರದ ವನಿತಾ ಯುವತಿ ಸಂಘಗಳು  ಏರ್ಪಡಿಸಿದ್ದ ಉದ್ಯಮ ಶೀಲತಾ ತರಬೇತಿ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಗೃಹ ಉದ್ಯೋಗ ಕೈಗೊಳ್ಳಲು ಮಹಿಳೆಯರಿಗೆ ಸಾಕಷ್ಟು ಅವಕಾಶಗಳಿವೆ.  ಪಾತ್ರೆ ತೊಳೆಯುವ ಪುಡಿ, ಶೀಗೆಕಾಯಿ ಶಾಂಪೂ, ಹಲ್ಲು ಪುಡಿ, ಸ್ನಾನದ ಸಾಬೂನು, ಸ್ನೋ ಪೌಡರ್, ಕೊಬ್ಬರಿ ಮತ್ತು ಹರ್ಬಲ್ ಹೇರ್ ಆಯಿಲ್, ಸುಗಂಧ ಎಣ್ಣೆ, ಕುಂಕುಮ, ಚಂದನ ಅಗರಬತ್ತಿ, ಕೊಬ್ಬರಿ ಮಿಠಾಯಿ, ಮಾವಿನ ಹಣ್ಣಿನ ಸಾಸ್, ಚಾಕಲೇಟ್, ಅಡಿಕೆ ಪುಡಿ, ಬಾದಾಮಿ ಮಾಲ್ಟ್ ಪುಡಿ, ಬೇಕರಿ ಪದಾರ್ಥಗಳು, ಕೇಕ್, ವಿಕ್ಸ್ , ವ್ಯಾಸಲಿನ್, ಮೇಣ ಬತ್ತಿ, ಚಾಕ್‌ಪೀಸ್,  ಇವೇ ಮುಂತಾದ ಪದಾರ್ಥಗಳನ್ನು ಮನೆಯಲ್ಲಿ ತಯಾರಿಸಿ ಮಾರಾಟ ಮಾಡಬಹುದು ಎಂದರು. ಇದಕ್ಕೆಲ್ಲ ಕೈಗಾರಿಕಾ ಇಲಾಖೆ  ತರಬೇತಿ, ಸಬ್ಸಿಡಿ, ಮಾರಾಟ ಮಳಿಗೆಯ ವ್ಯವಸ್ಥೆಯ ಮೂಲಕ ಎಲ್ಲ ರೀತಿಯ ಸಹಾಯ   ನೀಡಲಾಗುತ್ತದೆ ಎಂದರು.ಕಾರ್ಪೊರೇಶನ್ ಬ್ಯಾಂಕಿನ ವ್ಯವಸ್ಥಾಪಕ ನಟರಾಜನ್   ಮಾತನಾಡಿ, ತಮ್ಮ ಬ್ಯಾಂಕ್ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲು ಎಲ್ಲ ನೆರವು ನೀಡುತ್ತಿದೆ ಎಂದರು.ಭಾರತೀಯ ಸ್ಟೇಟ್ ಬ್ಯಾಂಕಿನ ವ್ಯವಸ್ಥಾಪಕ ಆರ್.ಎಚ್. ವರವಟೆ ಅವರು ಬ್ಯಾಂಕಿನ ಸಾಲ ತೆಗೆದುಕೊಳ್ಳಲು ಬೇಕಾಗುವ ದಾಖಲೆ ಪತ್ರಗಳ ವಿವರ ನೀಡಿ ಈಗಿನಿಂದಲೇ ಯಾವು ದಾದರೊಂದು ಬ್ಯಾಂಕಿನಲ್ಲಿ ಖಾತೆ ಪ್ರಾರಂಭಿಸಿ ವ್ಯವಹಾರ ನಿರ್ವಹಣೆ ಮಾಡಬೇಕು ಎಂದರು.ಸನಕೆ  ಮಾತನಾಡಿ, ಮಹಿಳೆಯಲ್ಲಿ ಇರುವ ಛಲವನ್ನು ಉತ್ಪಾದಕತೆಯಲ್ಲಿ ರೂಪಾಂತರಿಸಿ ಆದಾಯವನ್ನು ವೃದ್ಧಿಸಿಕೊಳ್ಳಬೇಕು ಎಂದರು.ಪ್ರಾರಂಭದಲ್ಲಿ ವನಿತಾ ಯುವತಿ ಸಂಘದ ಅಧ್ಯಕ್ಷೆ  ಸುಜಾತಾ ಮಂಜರಗಿ ಸ್ವಾಗತಿಸಿದರು. ಕೊನೆಯಲ್ಲಿ ಶ್ರೀಮತಿ ಜಯಶ್ರಿ ಪೋತದಾರ ವಂದಿಸಿದರು. ಕು.ರೇಷ್ಮಾ ಅಕ್ಕೊಳಿ ಕಾರ್ಯಕ್ರಮ ನಿರ್ವಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.