ಬುಧವಾರ, ನವೆಂಬರ್ 20, 2019
20 °C

ಹಂತಕ ಬುದ್ಧಿವಂತ ವಿದ್ಯಾರ್ಥಿ

Published:
Updated:

ಡೆನ್ವರ್ (ಎಪಿ):  ಇಲ್ಲಿನ ಚಿತ್ರಮಂದಿರವೊಂದರಲ್ಲಿ ಯದ್ವಾತದ್ವಾ ಗುಂಡು ಹಾರಿಸಿ 12 ಜನರ ಸಾವಿಗೆ ಕಾರಣನಾದ ಜೇಮ್ಸ ಹೋಮ್ಸ ಮಿತವಾಗಿ ಮಾತನಾಡುವ ಬುದ್ಧಿವಂತ ವಿದ್ಯಾರ್ಥಿಯಾಗಿದ್ದ ಎಂದು ನೆರೆಹೊರೆಯವರು ಹೇಳಿದ್ದಾರೆ. ಸಾನ್ ಡಿಯಾಗೊದಲ್ಲಿ ಉತ್ತಮ ಗುಣಮಟ್ಟದ ವಸತಿ ಸಂಕೀರ್ಣದಲ್ಲಿ ಜೇಮ್ಸ ಪಾಲಕರು ಇದ್ದಾರೆ. ಜೇಮ್ಸನ ತಾಯಿ ಅರ‌್ಲೇನ್ ನರ್ಸ್ ವೃತ್ತಿಯಲ್ಲಿದ್ದು, ತಂದೆ ರಾಬರ್ಟ್ ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ವ್ಯವಸ್ಥಾಪಕ.

`ನಾಚಿಕೆ ಸ್ವಭಾವದ ಈ ಹುಡುಗ ಒಂಟಿಯಾಗಿದ್ದ. ಪುಸ್ತಕದ ಹುಳುವಾಗಿದ್ದ. ಫುಟ್‌ಬಾಲ್ ಜತೆ ಕ್ರಾಸ್ ಕಂಟ್ರಿ ಓಟದಲ್ಲಿ ಪಾಲ್ಗೊಳ್ಳುತ್ತಿದ್ದ.

 

ಧಾರ್ಮಿಕ ಮನೋಭಾವದ ಈ ಕುಟುಂಬದ ಸದಸ್ಯರು ನಿಯಮಿತವಾಗಿ ಚರ್ಚ್‌ಗೆ ಹೋಗುತ್ತಿದ್ದರು~ ಎಂದು ಈತನನ್ನು ಬಾಲ್ಯದಿಂದ ನೋಡಿದ್ದ ನೆರೆ ಮನೆಯ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.ಎರಡು ವರ್ಷಗಳ ಹಿಂದೆ ಕ್ಯಾಲಿಫೋರ್ನಿಯಾದ ರಿವರ್‌ಸೈಡ್ ವಿಶ್ವವಿದ್ಯಾಲಯದಿಂದ ನರವಿಜ್ಞಾನದಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಪದವಿ ಪಡೆದಿದ್ದ. ಆದರೆ, ಉದ್ಯೋಗ ಪಡೆಯುವಲ್ಲಿ ಆತ ವಿಫಲನಾಗಿದ್ದ.ಅವನ ಈವರೆಗಿನ ಬದುಕು ಅವಲೋಕಿಸಿದಾಗ ಜೇಮ್ಸ ಕಳಂಕರಹಿತ, ಅತೀವ ಬುದ್ಧಿಮತ್ತೆಯ ಯುವಕನಂತೆ ಕಾಣುತ್ತಾನೆ. ಆತನಿಗೆ ಪೊಲೀಸರ ಕುರಿತು, ವ್ಯವಸ್ಥೆ ಬಗ್ಗೆ ದ್ವೇಷವಿತ್ತು ಎಂಬುದು ಮೇಲ್ನೋಟಕ್ಕೆ ಕಾಣುವುದಿಲ್ಲ.ಸಾಮಾಜಿಕ ತಾಣಗಳಿಂದ ಹೊರಗೆ:  ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ ಹಂತಕ ಹೋಮ್ಸ ಫೇಸ್‌ಬುಕ್, ಲಿಂಕ್ಡ್‌ಇನ್, ಮೈಸ್ಪೇಸ್, ಟ್ವಿಟರ್ ಅಥವಾ ಮತ್ಯಾವುದೇ ಜಾಲತಾಣಗಳಲ್ಲಿ ಕಾಣುತ್ತಿಲ್ಲ. ಒಂದೇ ಆತ ಜಾಲತಾಣಗಳ ಸದಸ್ಯನಾಗಿಲ್ಲ ಅಥವಾ ಬೇಕೆಂದೇ ತನ್ನ ಗುರುತು ಅಳಿಸಿಹಾಕಿದ್ದಾನೆ ಎಂದು ಪೊಲೀಸರು ಅಭಿಪ್ರಾಯ ಪಟ್ಟಿದ್ದಾರೆ.ಈ ಕೃತ್ಯ ಎಸಗುವಲ್ಲಿ ಜೇಮ್ಸಗೆ ಯಾರೂ ನೆರವು ನೀಡಿರಲಿಲ್ಲ. ಪತ್ರಿಕಾ ವರದಿಗಳಲ್ಲಿ ಹೇಳಿದಂತೆ ಇಲ್ಲಿ ಎರಡನೇ ವ್ಯಕ್ತಿಯ ಕೈವಾಡ ಇಲ್ಲ ಎಂದೂ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಜೇಮ್ಸ ಮನೆಯಲ್ಲಿ ಶೋಧ

ವಾಷಿಂಗ್ಟನ್ (ಪಿಟಿಐ):
ಜೇಮ್ಸ ಹೋಮ್ಸನ ಹಿಂಸಾಕೃತ್ಯಕ್ಕೆ ಕಾರಣ ಹುಡುಕುವ ಉದ್ದೇಶದಿಂದ ಆತನ ಮನೆಯನ್ನು ಪ್ರವೇಶಿಸಿದ ಪೊಲೀಸರು ಅಲ್ಲಿ ಸಂಗ್ರಹಿಸಿಟ್ಟಿದ್ದ ಸ್ಫೋಟಕ ವಸ್ತುಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ.ಡೆನ್ವರ್‌ನಲ್ಲಿರುವ ಆತನ ಒಂದು ಕೋಣೆಯ ಅಪಾರ್ಟ್‌ಮೆಂಟ್‌ನಲ್ಲಿ ಕನಿಷ್ಠ 30 ಸ್ಫೋಟಕ ಸಲಕರಣೆಗಳು ಸಿಕ್ಕಿವೆ. ರಾಸಾಯನಿಕಗಳು, ಸ್ಫೋಟಕ ವಸ್ತುಗಳಿದ್ದ ಹಲವು ಜಾಡಿಗಳು ದೊರಕಿವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.`ನಾಲ್ಕು ತಿಂಗಳಿನಿಂದ ಜೇಮ್ಸ ಮನೆ ಹಾಗೂ ಕಚೇರಿ ವಿಳಾಸಕ್ಕೆ ಹಲವು ಸಾಮಗ್ರಿಗಳನ್ನು ತರಿಸಿಕೊಳ್ಳುತ್ತಿದ್ದ.

`ತನ್ನ ಅಪಾರ್ಟ್‌ಮೆಂಟ್‌ಗೆ ಯಾರೇ ಪ್ರವೇಶಿಸಲಿ ಅವರನ್ನು ಕೊಲ್ಲುವ ಉದ್ದೇಶವನ್ನೂ ಹೊಂದಿದ್ದ~ ಎಂದು ಔರೋರಾ ಪೊಲೀಸ್ ಮುಖ್ಯಸ್ಥ ಡೇನಿಯಲ್ ಓಟ್ಸ್ ಹೇಳಿದ್ದಾರೆ.ತಾನಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಸ್ಫೋಟಕಗಳೇ ತುಂಬಿವೆ ಎಂದು ಜೇಮ್ಸ ಹೇಳಿರುವುದರಿಂದ ಇಡೀ ಅಪಾರ್ಟ್‌ಮೆಂಟ್ ಸಂಕೀರ್ಣವನ್ನು ಪೊಲೀಸರು ತೆರವುಗೊಳಿಸಿದ್ದಾರೆ.  

ಪ್ರತಿಕ್ರಿಯಿಸಿ (+)