ಗುರುವಾರ , ನವೆಂಬರ್ 21, 2019
20 °C

ಹಂದಿಗಳ ಕಾಟದಿಂದ ತತ್ತರಿಸಿದ ಜನತೆ

Published:
Updated:

ಆಲಮಟ್ಟಿ: ಗೊಳಸಂಗಿ ಗ್ರಾಮದ ಒಟ್ಟು ಜನಸಂಖ್ಯೆಗೆ ಸರಿಸಮನಾಗಿ ಬೆಳೆಯು ತ್ತಿರುವ ಹಂದಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಅನುಕೂಲಕ್ಕಿಂತ ಅನಾನು ಕೂಲವೇ ಹೆಚ್ಚಾಗಿ ಕಾಣುತ್ತದೆ. ಸಾರ್ವಜನಿಕರ ಬಯಲು ಬಹಿರ್ದೆಸೆ ಯನ್ನು ಮಾತ್ರ ಸ್ವಚ್ಛ ಗೊಳಿಸಲು ಸಹಕಾರಿ ಯಾಗುವ ಈ ಹಂದಿಗಳು ಬಾಕಿ ಸಂದರ್ಭಗಳಲ್ಲಿ ಇವುಗಳಿಂದ ತೊಂದರೆಯೇ ಅಧಿಕವಾಗುತ್ತಿದೆ.



ರೈತಾಪಿ ವರ್ಗ ತಂತಮ್ಮ ಹೊಲ- ಗದ್ದೆಗಳಲ್ಲಿ ಬಿತ್ತಿದ್ದ ಬೆಳೆಗಳು ಪೈರು ಕೊಡುವ ವೇಳೆ ದಿಢೀರೆಂದು ನುಗ್ಗಿ ಬರುವ ಈ ಹಂದಿಗಳು ಬೆಳೆದು ನಿಂತ ಬೆಳೆಯನ್ನೆಲ್ಲನಾಶ ಮಾಡಿ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡುತ್ತಿವೆ ಎಂದು ನೊಂದ ರೈತ ಮಹಾಂತೇಶ ಗುಡದಿನ್ನಿ ಅವರ ಅಳಲಾಗಿದೆ.ಅಲ್ಲದೇ ಸಾರ್ವಜನಿಕರು ತಂತಮ್ಮ ಮನೆ ಮುಂದೆ ಯಾವುದೇ ವಸ್ತು ಸಾಮಗ್ರಿ ಏನೇ ಆಗಲಿ ನಿರ್ಭಯವಾಗಿ ಇಡುವಂತಿಲ್ಲ. ಕೂಡಲೇ ಆ ಜಾಗದಲ್ಲಿ ಪ್ರತ್ಯಕ್ಷವಾಗುವ ಈ ಹಂದಿಗಳು ಅವುಗಳನ್ನೆಲ್ಲಾ ಮುಟ್ಟಿ-ತಟ್ಟಿ ಹೊಲಸು ಮಾಡುತ್ತವೆ.



ಚಿಕ್ಕಮಕ್ಕಳು ನಡುಬೀದಿಯಲ್ಲಿ ಏನಾದರೂ ತಿಂಡಿ- ತಿನಿಸನ್ನು ಹಿಡಿದು ತಿರುಗುವಂತಿಲ್ಲ, ತಕ್ಷಣ  ಮಗುವಿಗೆ ಮುತ್ತಿಗೆ ಹಾಕುವ ಈ ಹಂದಿಗಳ ಕಾಟದಿಂದ ಊರ ಮಂದಿಗೆ ಅಕ್ಷರಶಃ ಬೇಸರವಾಗಿದೆ ಎನ್ನುತ್ತಾರೆ ಡಿ.ಬಿ. ಕುಪ್ಪಸ್ತ.



ಗ್ರಾಮದ ಕೆಲವು ಬೀದಿಗಳಲ್ಲಿ ಮಹಿಳೆ ಯರು ಬಯಲು ಬಹಿರ್ದೆಸೆಗೆ ಹೋಗಬೇಕಾದರೆ ಹಂದಿಗಳಿಂದ ಕೈಯಲ್ಲಿ  ಕೋಲು ಹಿಡಿದುಕೊಂಡು ಹೋಗುವ ಸಂಗತಿ ಸಾಮಾನ್ಯ ಎನ್ನುವಂತಾಗಿದೆ. ಊರ ಮಂದಿಗೆ ಹೆಚ್ಚುತ್ತಿರುವ ಈ ಹಂದಿ ಕಾಟ ನಿಯಂತ್ರಿಸುವಲ್ಲಿ ಗ್ರಾ.ಪಂ ನವರು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಮುಂದಾಗಬೇಕಾಗಿದೆ.

ಪ್ರತಿಕ್ರಿಯಿಸಿ (+)