ಹಂದಿಗಳ ಹಾವಳಿ: ಸ್ವಚ್ಛತೆ ಮರೀಚಿಕೆ

7

ಹಂದಿಗಳ ಹಾವಳಿ: ಸ್ವಚ್ಛತೆ ಮರೀಚಿಕೆ

Published:
Updated:

ಬೆಳಗಾವಿ: ನಗರದಲ್ಲಿ ಹಂದಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಹುತೇಕ ಬೀದಿಗಳಲ್ಲಿ ರಾಜಾರೋಷ ವಾಗಿ ಹಂದಿಗಳ ಓಡಾಟ ನಿತ್ಯ ಕಾಣ ಬಹುದು. ನಗರದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಪಾಲಿಕೆಯವರು 10,000 ಹಂದಿಗಳಿವೆ ಎಂದು ಹೇಳು ತ್ತಿದ್ದರೂ, ಅವುಗಳ ಸಂಖ್ಯೆ ಹೆಚ್ಚಿರುವು ದನ್ನು ಅಲ್ಲಗಳೆಯುವಂತಿಲ್ಲ.ನಗರದ ಜನರ ಆರೋಗ್ಯದ ಮೇಲೂ ಇದು ಪರಿಣಾಮ ಬೀರು ತ್ತಿದೆ. ಮಹಾನಗರ ಪಾಲಿಕೆಯವರು ಸ್ವಚ್ಛತೆಗಾಗಿ ಮೇಲಿಂದ ಮೇಲೆ ಕ್ರಮ ತೆಗೆದುಕೊಳ್ಳುತ್ತಿದ್ದರೂ ಹಂದಿಗಳನ್ನು ನಿಯಂತ್ರಿಸುವಲ್ಲಿ ಸಫಲವಾಗಿಲ್ಲ. ನಗರದಲ್ಲಿರುವ ಕಸದ ತೊಟ್ಟಿಗಳ ಸಮೀಪ ಹಂದಿಗಳ ಗುಂಪು ಇದ್ದೇ ಇರುತ್ತದೆ. ಹಂದಿಗಳ ಹಾವಳಿಯಿಂದ ರಸ್ತೆಗಳು ಕಸದ ರಾಶಿ ಯನ್ನು ಮೆತ್ತಿಕೊಂಡಿವೆ. ಕಸದ ರಾಶಿ ಯಿಂದ ನಗರದಾದ್ಯಂತ ದುರ್ವಾಸನೆ ಬೀರಿದೆ.ನಗರದ ರುಕ್ಮಿಣಿ ನಗರ, ಕುವೆಂಪು ನಗರ, ಹನುಮಾನ ನಗರ, ಮಹಾಂ ತೇಶ ನಗರ, ರಾಮ ನಗರ, ಶಿವಬಸವ ನಗರ, ಸದಾಶಿವನಗರ, ರೈಲ್ವೆ ಕಾಲೊನಿ, ಅಶೊಕ ನಗರ, ಗ್ಯಾಂಗವಾಡಿ, ಗಾಂಧಿನಗರ, ರಾಮ ತೀರ್ಥ ನಗರ, ಆಟೋ ನಗರ, ವಂಟ ಮೂರಿ ಕಾಲೊನಿ, ಮಾಳಮಾರುತಿ ಬಡಾವಣೆ, ಟಿಳಕವಾಡಿ, ವಡಗಾವಿ, ಶಹಾಪುರ, ಭಾಗ್ಯನಗರ, ಅನಗೋಳ, ಹಿಂದವಾಡಿ ಸೇರಿದಂತೆ ಎಲ್ಲ ಕಡೆ ಗಳಲ್ಲೂ ಹಂದಿಗಳ ಹಾವಳಿ ಹೆಚ್ಚಾ ಗಿದೆ. ಇಲ್ಲಿನ ನಿವಾಸಿಗಳು ಅನೇಕ ಆರೋಗ್ಯದ ಸಮಸ್ಯೆಗಳನ್ನು ಎದುರಿ ಸುತ್ತಿದ್ದಾರೆ. ಹಂದಿಗಳು ರಸ್ತೆ ಮೇಲೆ ಬೇಕಾಬಿಟ್ಟಿ ಓಡಾಡುತ್ತಿರುವುದರಿಂದ ಅಪಘಾತಗಳು ಸಾಮಾನ್ಯವಾಗಿವೆ. ಅನೇಕರು ಕೈ, ಕಾಲು ಮುರಿದುಕೊಂಡ ಉದಾಹರಣೆಗಳಿವೆ. ಆದರೆ, ಹಂದಿ ಗಳನ್ನು ಬೇರೆ ಕಡೆಗೆ ಸ್ಥಳಾಂತರಿಸುವ ಗೋಜಿಗೆ ಪಾಲಿಕೆ  ಮುಂದಾಗಿಲ್ಲ.‘ಹಂದಿಗಳ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಪಾಲಿಕೆಯವರಿಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಆದರೆ, ಏನೂ ಪ್ರಯೋಜನವಾಗಿಲ್ಲ. ಹಂದಿಗಳಿಂದ ರಸ್ತೆಗಳು ಕಸದ ಗೂಡಾಗಿವೆ. ಈ ಸ್ಥಿತಿಗೆ ಜನರು ಸಹ ಕಾರಣ. ಕಸದ ತೊಟ್ಟಿಗಳಲ್ಲಿ ಕಸ ಹಾಕದೇ, ಅದರ ಪಕ್ಕಕ್ಕೆ ಎಸೆಯುವುದರಿಂದ ಈ ಪರಿಸ್ಥಿತಿ ನಿರ್ಮಾಣವಾಗುತ್ತಿದೆ’ ಎನ್ನುತ್ತಾರೆ ಹನುಮಾನ ನಗರದ ನಿವಾಸಿ ಡಿ.ಬಿ. ಪಾಟೀಲ ಅವರು. ಹಂದಿಗಳ ಮಾಲೀಕರಿಗೆ ಪಾಲಿಕೆ ಯವರು ಅವುಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಲು ನೋಟೀಸು ನೀಡಿ ದ್ದಾರೆ. ಆದರೆ, ಈ ನೋಟೀಸ್‌ನಿಂದ ಹಂದಿಗಳ ನಿಯಂತ್ರಣ ಆಗಿಲ್ಲ. ಕೆಲವು ಮಾಲೀಕರು ಪಾಲಿಕೆ ವ್ಯಾಪ್ತಿಯಲ್ಲಿಯೇ ಬರುವ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹಂದಿಗಳನ್ನು ಸ್ಥಳಾಂತರಿಸಿದ್ದಾರೆ, ಹಂದಿಗಳನ್ನು ನಗರದಿಂದ ಹೊರಹಾಕುವದನ್ನು ಕೈಬಿಡು ವಂತೆ ರಾಜಕೀಯ ಒತ್ತಡ ಸಹ ಇದೆ ಎಂಬ ಮಾತು ಕೇಳುಬರುತ್ತಿದೆ. ಹಂದಿ ಗಳ ಮಾಲೀಕರು ಜನಪ್ರತಿನಿಧಿಗಳನ್ನು ಭೇಟಿ ಮಾಡಿ, ಅಧಿಕಾರಿಗಳ ಮೇಲೆ ಒತ್ತಡ ಹೇರುವಂತೆ ಮಾಡುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದರು. ಹಂದಿಗಳ ನಿಯಂತ್ರಣಕ್ಕಾಗಿ ಮಹಾನಗರ ಪಾಲಿಕೆಯಲ್ಲಿ ಎರಡು ತಿಂಗಳ ಹಿಂದೆ ಪಶು     ಅಧಿಕಾರಿ ಯೊಬ್ಬರನ್ನು ನಿಯೋಜಿಸಲಾಗಿದೆ. ಅಧಿಕಾರಿ ಗಳು ಹಂದಿಗಳ ಮಾಲೀಕರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದು, ಮಾಲೀಕರು ನ್ಯಾಯಾಲಯಕ್ಕೆ ದಂಡ ಭರಿಸಿ ಮತ್ತದೇ ಕೆಲಸ ಮಾಡು ತ್ತಿದ್ದಾರೆ.‘ಅನೇಕ ಕಟ್ಟುನಿಟ್ಟಿನ ಕ್ರಮ ತೆಗೆದು ಕೊಂಡಿದ್ದರಿಂದ ಹಂದಿಗಳ ಸಂಖ್ಯೆ ಕಡಿಮೆಯಾಗಿದೆ. ಸದ್ಯ ನಗರದಲ್ಲಿ 10, 000 ಹಂದಿಗಳಿವೆ. ಇವುಗಳನ್ನು ಸಹ ನಗರದಿಂದ ಹೊರಹಾಕಲು ಕ್ರಮ ತೆಗೆ ದುಕೊಳ್ಳಲಾಗುತ್ತಿದೆ’ ಎಂದು ಪಶು ಅಧಿಕಾರಿ ಶಶಿಧರ ನಾಡಗೌಡ ಹೇಳುತ್ತಾರೆ.‘ಹಂದಿಗಳನ್ನು ನಗರದಿಂದ ಹೊರ ಹಾಕುವಲ್ಲಿ ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ. ಗಣೇಶ ಉತ್ಸವ ಬಂದಿದ್ದರಿಂದ ಹಂದಿಗಳನ್ನು ಹೊರ ಹಾಕುವ ಕಾರ್ಯಾಚರಣೆ ಮುಂದೂ ಡಲಾಗಿತ್ತು. ಈಗಾಗಲೇ ಮಾಲೀಕರಿಗೆ ತಮ್ಮ ಹಂದಿಗಳನ್ನು ಬೇರೆ ಕಡೆಗೆ ಸ್ಥಳಾಂತರಿಸುವಂತೆ ಮೂರು ತಿಂಗಳ ಗಡುವು ನೀಡಲಾಗಿದೆ’ ಎಂದು ಪಾಲಿಕೆಯ ಆರೋಗ್ಯ ಅಧಿಕಾರಿ ಸತೀಶ ಪೋತದಾರ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry