ಗುರುವಾರ , ಮೇ 6, 2021
33 °C

ಹಂದಿ ರೋಗ: ಮೊದಲ ವೈರಸ್ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಜ್ವಾಲ್ (ಪಿಟಿಐ): ಹಂದಿಗಳಲ್ಲಿ ಶ್ವಾಸಕೋಶ ಹಾಗೂ ಸಂತಾನೋತ್ಪತ್ತಿ ವ್ಯವಸ್ಥೆಗೆ ಧಕ್ಕೆ ತಂದೊಡ್ಡುವ ವೈರಾಣುವನ್ನು (ವೈರಸ್) ಮೊತ್ತ ಮೊದಲ ಬಾರಿಗೆ ಭಾರತದಲ್ಲಿ ಪತ್ತೆ ಹಚ್ಚಲಾಗಿದೆ.ಮಿಜೋರಾಂನ ಹಂದಿ ಸಾಕಣೆ ಕೇಂದ್ರದಲ್ಲಿ ರೋಗದಿಂದ ಬಳಲುತ್ತಿದ್ದ ಹಂದಿಗಳ ಆಯ್ದ ಕೋಶಗಳನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಅಲ್ಲಿಂದ ಬಂದಿರುವ ವರದಿಯು ಈ ಅಂಶವನ್ನು ದೃಢಪಡಿಸಿದೆ.`ಆರ್ಟಿವೈರಸ್' ಎಂಬ ಈ ವೈರಾಣು ಹಂದಿಗಳಲ್ಲಿ ಶ್ವಾಸಕೋಶ ಹಾಗೂ ಸಂತಾನೋತ್ಪತ್ತಿ ವ್ಯವಸ್ಥೆಗೆ ಹಾನಿ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಮಿಜೋರಾಂನ ಪಶುಸಂಗೋಪನಾ ಇಲಾಖೆಯ ನಿರ್ದೇಶಕ ಡಾ. ಎಲ್.ಬಿ.ಸೈಲೊ ತಿಳಿಸಿದ್ದಾರೆ.ಮ್ಯಾನ್ಮಾರ್ ಸೇರಿದಂತೆ ಏಷ್ಯಾದ ಕೆಲವು ದೇಶಗಳಲ್ಲಿ ಈ ವೈರಸ್ ಕಾಣಿಸಿಕೊಂಡಿತ್ತಾದರೂ ಭಾರತದಲ್ಲಿ  ಪ್ರಥಮ ಬಾರಿಗೆ ಈಗ ಪತ್ತೆಯಾಗಿದೆ. ಹಂದಿ ಸಾಕಣೆ ಕೇಂದ್ರದಲ್ಲಿ ನೂರಾರು ಸಂಖ್ಯೆಯಲ್ಲಿ ಹಂದಿಗಳ ಸಾವು ವರದಿಯಾದ ಹಿನ್ನೆಲೆಯಲ್ಲಿ ಇಲಾಖೆಯು ತಪಾಸಣೆಗೆ ಮುಂದಾಗಿತ್ತು. ಈಗ ಪ್ರಯೋಗಾಲಯದ ವರದಿ ಬಂದಿದ್ದು, ಮ್ಯಾನ್ಮಾರ್‌ನಿಂದ ಹಂದಿ ಆಮದು ನಿಷೇಧಿಸಿ ಮೇ ತಿಂಗಳಲ್ಲಿ ಹೊರಡಿಸಿದ ಆದೇಶವನ್ನು ಇನ್ನಷ್ಟು ಅವಧಿವರೆಗೆ ಮುಂದುವರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.