ಭಾನುವಾರ, ಏಪ್ರಿಲ್ 11, 2021
26 °C

ಹಂಪೆ ಗೋಪುರ ಬಿರುಕು: ತಜ್ಞರೊಂದಿಗೆ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂಪ್ಲಿ: ಹಂಪೆಯ ಗೋಪುರ ಬಿರುಕು ಬಿಟ್ಟ ವಿಷಯ ಮಾಧ್ಯಮಗಳಿಂದ ತಿಳಿದಿದ್ದು, ಹೆಚ್ಚಿನ ಅನಾಹುತಕ್ಕೆ ಅವಕಾಶ ನೀಡದೆ, ತಜ್ಞರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಆನಂದಸಿಂಗ್ ತಿಳಿಸಿದರು. ಅವರು ಸೋಮವಾರ ಸಿರಗುಪ್ಪಕ್ಕೆ ತೆರಳುತ್ತಿರುವಾಗ ಇದೇ ಪ್ರಥಮ ಬಾರಿಗೆ ಕಂಪ್ಲಿಗೆ ಭೇಟಿ ನೀಡಿ ಬಿಜೆಪಿ ಪದಾಧಿಕಾರಿಗಳೊಂದಿಗೆ ಮಾತನಾಡಿದರು. ಕೇಂದ್ರದಿಂದ ನಾಲ್ಕೈದು ದಿನಗಳಲ್ಲಿಯೇ ತಜ್ಞರ ತಂಡ ಆಗಮಿಸಿ ಹಂಪೆಯ ಗೋಪುರವನ್ನು ಪರಿಶೀಲಿಸಲಿದೆ ಎಂದರು.ಹಂಪೆಯು ರಾಷ್ಟ್ರದ ಹೆಮ್ಮೆಯಾಗಿದ್ದು ಜನತನದಿಂದ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಿದ್ದು, ನಿರ್ಲಕ್ಷ್ಯವಹಿಸುವುದಿಲ್ಲ. ಅಕ್ಕ ತಂಗಿಯರ ಗುಂಡು ನೈಸರ್ಗಿಕವಾಗಿ ಶಿಥಿಲಗೊಂಡಿದ್ದರೂ, ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ನಾಶವಾಗಿದೆ ಎಂದು ಆರೋಪಿಸಿದರು.ಕೇಂದ್ರದೊಂದಿಗೆ ರಾಜ್ಯ ಸರ್ಕಾರವೂ ಸ್ವಲ್ಪ ಕಾಳಜಿ ವಹಿಸಿದ್ದರೆ ಅಕ್ಕತಂಗಿಯರ ಗುಂಡುಗಳನ್ನು ರಕ್ಷಿಸಬಹುದಾಗಿತ್ತು. ಹಂಪೆಯ ಅಭಿವೃದ್ಧಿ ಮತ್ತು ಸಂರಕ್ಷಣೆಯತ್ತ  ಜವಾಬ್ದಾರಿಯುತ ಮತ್ತು ಸಕಾಲಿಕ ಕ್ರಮ ಕೈಗೊಳ್ಳಲಾಗುವುದು ಎಂದರು.ಹಂಪೆ, ಬೇಲೂರು, ಹಳೆಬೀಡು ಮೊದಲಾದ ಪ್ರವಾಸೋದ್ಯಮ ಸ್ಥಳಗಳ ಅಭಿವೃದ್ಧಿ ಕಾಮಗಾರಿಗಳು ಆಮೆಗತಿಯಲ್ಲಿದ್ದು, ಶೀಘ್ರವೇ ಪೂರೈಸಲಾಗುವುದು. ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಯೋಜನೆಗಳನ್ನು ರಾಜ್ಯಕ್ಕೆ ತರಲು ದೆಹಲಿಗೆ ತೆರಳಲಿದ್ದು, ಕೇಂದ್ರ ಸಚಿವ, ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಕರಾವಳಿ ಪ್ರವಾಸೋದ್ಯಮಕ್ಕೆ ವಿಶೇಷ ಆದ್ಯತೆ ನೀಡಲಾಗುವುದು ಎಂದರು.ಹುನರ್‌ಸೇ ರೋಜಗಾರ್ ಯೋಜನೆ ಜಾರಿ ಮಾಡಲಿದ್ದು, ನಿರುದ್ಯೋಗಿ ಯುವಕರಿಗೆ ಉದ್ಯೋಗಾವಾಕಾಶ ದೊರಕಲಿದೆ. ಶಿಕ್ಷಣ ವಂಚಿತ ಯುವಕರಿಗೆ ರಾಜ್ಯದ ಬಳ್ಳಾರಿ, ಮಂಗಳೂರು ಸೇರಿ ನಾಲ್ಕು ಕಡೆ 6 ವಾರ ತರಬೇತಿಯೊಂದಿಗೆ ರೂ 1500 ಮತ್ತು 8 ವಾರಗಳ ತರಬೇತಿಯೊಂದಿಗೆ ರೂ 2000 ಗೌರವಧನ ನೀಡಿ ತರಬೇತಿ ನೀಡಲು ಉದ್ದೆೀಶಿಸಿದೆ. ಇದರಿಂದ  ಹೋಟೆಲ್, ಲಾಡ್ಜ್‌ಗಳಲ್ಲಿ ಯುವಕರು ಉದ್ಯೋಗ ಪಡೆಯಲು ಸಾಧ್ಯವಾಗುವುದು ಎಂದು ವಿವರಿಸಿದರು.ಆ. 8ರಂದು ತುಂಗಭದ್ರಾ ಜಲಾಶಯದ ಐಸಿಸಿ ಸಭೆ ಕರೆಯಲಾಗಿದ್ದು, ಜಲಾಶಯಕ್ಕೆ ನೀರು ಹರಿವು ಹಚ್ಚಿದ್ದು, ನೀರು ಸಂಗ್ರಹಣೆಯಾಗುತ್ತಿದ್ದು, ಆ ದಿನವೇ ಕಾಲುವೆಗಳಿಗೆ ನೀರು ಹರಿಸಲಾಗುವುದೆಂದು ಭರವಸೆ ನೀಡಿದರು.

ತುಂಗಭದ್ರಾ ನದಿ ನೂತನ ಸೇತುವೆ ನಿರ್ಮಾಣ, ಡಿಪ್ಲೊಮಾ ಕಾಲೇಜು ಕಟ್ಟಡ ನಿರ್ಮಾಣ ಸೇರಿದಂತೆ ಸ್ಥಳಿಯ ಸಮಸ್ಯೆಗಳ ಬಗ್ಗೆ ಗಮನ ಸೆಳೆದಾಗ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.ಜಿ. ಲಿಂಗನಗೌಡ, ಅನಂತಸ್ವಾಮಿ, ಡಿ. ಶ್ರಿಧರ ಶೆಟ್ಟಿ, ಜಿ.ರಾಜರಾವ್, ಎಸ್.ನಂದೆಪ್ಪ, ಬಿ. ಈರಪ್ಪ, ಸಜ್ಜೇದ ಸಿದ್ಧಲಿಂಗಪ್ಪ, ಬಿ. ಸಿದ್ದಪ್ಪ, ಕರೆಕಲ್ ಮನೋಹರ, ನೆನಗಡಲೆ ಗಣೇಶ್, ಪಿ. ಬ್ರಹ್ಮಯ್ಯ, ಬಳ್ಳಾರಿ ನಿರಂಜನಗುಪ್ತ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.