ಹಂಸ ಹಾರುತಿದೆ

7

ಹಂಸ ಹಾರುತಿದೆ

Published:
Updated:

ಪತ್ರವೇನಾದರೂ ಬರಬಹುದೆ?

ಪತ್ರಕಾರ ನನ್ನೆಡೆಗೆ ನೋಡದೇ

ರಸ್ತೆಯಲ್ಲಿ ಹಾಗೆ ಹೋಗಿಯೇಬಿಟ್ಟ.

ಒಬ್ಬ ಸುಂದರಿಯಾದರೂ ನನ್ನ ಕಡೆ

ದೃಷ್ಟಿ ಬೀರಬಹುದೇ?

ಅಗಣಿತ ಚೆಲುವೆಯರು ನನ್ನನ್ನು ಕೇರು ಮಾಡದೇ

ರಸ್ತೆಯಲ್ಲಿ ಸಾಗಿಯೇಬಿಟ್ಟರು.

ಅದೃಷ್ಟದ ಕೋಟಿ ಕೋಟಿ ಕೈಗಳಲ್ಲಿ

ಒಂದಾದರೂ ನೆರವಾಗಬಹುದೇ?

ಎಲ್ಲ ಕೈಗಳೂ ಅದೃಶ್ಯವಾದವು.

ಬಾಲ್ಯದಿಂದ ಮುಪ್ಪಿನವರೆಗೂ

ಹೀಗೇ ನಿರೀಕ್ಷೆಗಳ ಅಂಗಳದಲ್ಲಿ

ಆಸೆಯ ಕಣ್ಣಗಲಿಸಿ

ಯಾವ ಬರವಿಗಾಗಿ ಕಾದೆ?

ಕಂಬನಿಯ ಸರೋವರದ ಮುಂದೆ ನಿಂತು

ದುಃಖದ ಹಂಸ ಹಾರುವುದ ನೋಡುತ್ತಿರುವೆ

ಅದೂರ ಗಗನದ ನೀಲದಲ್ಲಿ

ಶೂನ್ಯದೊಂದು ಚುಕ್ಕಿ ಮೂಡುತ್ತಿದೆ

ಕಪ್ಪಾನು ಕಪ್ಪು ರಂಧ್ರದಲ್ಲಿ ಲೀನವಾಗುತ್ತಿದೆ

ಚಂದದ ಹಂಸ:

ಇನ್ನು ಮುಂದೆ ಶಬ್ದವಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry