ಭಾನುವಾರ, ಜೂನ್ 13, 2021
29 °C

ಹಕ್ಕುಗಳ ಅರಿವಿಲ್ಲದ ನಗರ ಗ್ರಾಹಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |


ನವದೆಹಲಿ: ‘ಜಾಗೋ ಗ್ರಾಹಕ್ ಜಾಗೋ’­ದಂತಹ ಕಾರ್ಯಕ್ರಮದ ಮೂಲಕ ಸರ್ಕಾರ ಗ್ರಾಹಕರಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ನಗರ ಪ್ರದೇಶದ ಬಹುತೇಕ ಜನರಿಗೆ ಗ್ರಾಹಕರ ಹಕ್ಕಿನ ಅರಿವಿಲ್ಲ ಎಂಬುದು ಸಮೀಕ್ಷೆಯಿಂದ ಗೊತ್ತಾಗಿದೆ. 

 

ಚೀನಾದಿಂದ ಆಮದು ಮಾಡಿ­ಕೊಂಡ ಅವಧಿ ಮೀರಿದ ವಸ್ತು­ಗಳು, ತಪ್ಪು ಮಾಹಿತಿ ನೀಡುವ ಜಾಹೀ­ರಾತು­ಗಳು, ಆನ್‌­ಲೈನ್ ಮೂಲಕ ಮಾರಾಟ ಮಾಡು­ವಾಗ ಗೋಪ್ಯ ವೆಚ್ಚ­ಗಳನ್ನು ವಸೂಲು ಮಾಡುವುದು ಇವೇ ಮೊದ­ಲಾದ ರೀತಿಗಳಿಂದ ಗ್ರಾಹಕರನ್ನು ಮೋಸ­ಗೊಳಿಸಲಾಗುತ್ತಿದೆ ಎಂದು ಕೈಗಾರಿಕೆ ಮತ್ತು ವಾಣಿಜ್ಯೋದ್ಯಮಿಗಳ ಸಂಘಗಳ ಒಕ್ಕೂಟ ನಡೆಸಿದ ಸಮೀಕ್ಷೆ­ಯಿಂದ ಗೊತ್ತಾಗಿದೆ. ಅಹಮದಾ­ಬಾದ್‌, ಬೆಂಗ­ಳೂರು, ಭುವನೇಶ್ವರ, ಚಂಡೀಗಡ, ಚೆನ್ನೈ, ದೆಹಲಿ, ಹೈದರಾ­ಬಾದ್‌,  ಕೋಲ್ಕತ್ತ, ಕೊಚ್ಚಿ, ಮುಂಬೈ, ನಾಗ್ಪುರ, ಪುಣೆ ಮತ್ತು ತಿರುವನಂತಪುರದಲ್ಲಿ ಸುಮಾರು ನಾಲ್ಕು ಸಾವಿರ ಗ್ರಾಹಕರಿಂದ ಮಾಹಿತಿ ಸಂಗ್ರಹಿಸಲಾಗಿದೆ. 

 

ಶೇಕಡಾ 30ರಷ್ಟು ಜನರಿಗೆ ಗ್ರಾಹಕರ ಹಕ್ಕುಗಳ ಬಗ್ಗೆ ಅರಿವಿದ್ದು, ಉಳಿದವರಿಗೆ ಮೋಸ ಹೋದ ಮೇಲೆಯೇ ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಉಂಟಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.