ಸೋಮವಾರ, ಏಪ್ರಿಲ್ 12, 2021
27 °C

ಹಕ್ಕುಗಳ ಉದ್ದೇಶ ಅರ್ಥ ಮಾಡಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: `ಹಕ್ಕುಗಳ ಹಿಂದಿರುವ ಸದುದ್ದೇಶವನ್ನು ಅರ್ಥ ಮಾಡಿಕೊಂಡು ಚಲಾಯಿಸಬೇಕು. ಆಗ ಮಾತ್ರ ಅದರ ಉದ್ದೇಶ ಪರಿಪೂರ್ಣವಾಗುತ್ತದೆ. ಅಲ್ಲದೆ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ನಿಭಾಯಿಸಬೇಕು~ ಎಂದು ವೈಕುಂಠ ಬಾಳಿಗ ಕಾನೂನು ಮಹಾ ವಿದ್ಯಾಲಯದ ಪ್ರಾಚಾರ್ಯ ಪ್ರಕಾಶ್ ಕಣಿವೆ ಹೇಳಿದರು.ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗವು ಉಡುಪಿಯ ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಸಹಯೋಗ ದೊಂದಿಗೆ ಗುರುವಾರ ಏರ್ಪಡಿಸಿದ್ದ `ಹಕ್ಕು ಮತ್ತು ಅರಿವು~ ಅಧ್ಯಯನ ಕಮ್ಮಟದಲ್ಲಿ ಅವರು ಮಾತನಾಡಿದರು.`ಗೌರವಯುತವಾಗಿ ಮತ್ತು ನಿರ್ಭಯದಿಂದ ಸಮಾಜದಲ್ಲಿ ಜೀವಿಸಲು ಪ್ರತಿಯೊಬ್ಬರಿಗೂ ಇರುವ ಅಧಿಕಾರವನ್ನು ಹಕ್ಕು ಎಂದು ವ್ಯಾಖ್ಯಾನಿಸಬಹುದು. ಕೆಲವು ಹಕ್ಕುಗಳನ್ನು ಸಂವಿಧಾನ ನೀಡಿದ್ದು, ಅವುಗಳು ಮೂಲಭೂತ ಹಕ್ಕುಗ ಳಾಗಿವೆ. ಉಳಿದಂತೆ ಮಾನವ ಹಕ್ಕುಗಳೂ ಇವೆ. ಆದರೆ ಹೆಚ್ಚಿನ ಜನರಿಗೆ ಹಕ್ಕುಗಳ ಬಗ್ಗೆ ಸರಿಯಾದ ಅರಿವು ಇಲ್ಲ, ಇದು ವಿಷಾದನೀಯ. ಬರಿ ಪುಸ್ತಕದ ಮೂಲಕ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಿಲ್ಲ  ಎಂದರು.`ಸಮಾನತೆಯ ಹಕ್ಕು ಎಂದರೆ ಇಬ್ಬರು ವ್ಯಕ್ತಿಗಳ ಮಧ್ಯೆ ಮಾತ್ರ ಅಲ್ಲ, ಎರಡು ತಲೆಮಾರುಗಳ ಮಧ್ಯೆ ಸಹ ಇರಬೇಕು ಎಂದು ಅರ್ಥ. ನೈಸರ್ಗಿಕ ಸಂಪತ್ತು, ಶಿಲ್ಪಕಲೆ, ಸಾಹಿತ್ಯ ಇವುಗಳನ್ನು ನಾವು ಅನುಭವಿಸುವುದರ ಜೊತೆಗೆ ಮುಂದಿನ ಜನಾಂಗಕ್ಕೂ ನೀಡುವುದು ನಮ್ಮ ಕರ್ತವ್ಯವಾಗಿದೆ~ ಎಂದು ಅವರು ಹೇಳಿದರು.`ಬದುಕುವ ಹಕ್ಕು ಎಂದರೆ ಕೇವಲ ಜೀವನ ಮಾಡುವ ಹಕ್ಕು ಮಾತ್ರವಲ್ಲ. ಪರಿಶುದ್ಧ ಪರಿಸರದಲ್ಲಿ ಸೌಲಭ್ಯಗ ಳೊಂದಿಗೆ ಬಾಳುವ ಹಕ್ಕು ಎಂಬುದು ಒಳಾರ್ಥ. ಡೆಹ್ರಾಡೂನ್‌ನಲ್ಲಿ ನಡೆಯುತ್ತಿದ್ದ ಸುಣ್ಣದ ಕಲ್ಲಿನ ಗಣಿಗಾರಿಕೆಯಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಜನರು ಬದುಕು ದುಸ್ತರವಾಗಿತ್ತು.ಈ ಬಗ್ಗೆ ಸರ್ಕಾರೇತರ ಸಂಸ್ಥೆಯೊಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿತ್ತು. ಪತ್ರವನ್ನೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸಿದ ನ್ಯಾಯಮೂರ್ತಿಗಳು ಸಮಸ್ಯೆ ಪರಿಹರಿ ಸಲು ಸೂಚನೆ ನೀಡಿದರು. ಇಂತಹ ಅಂಶಗಳನ್ನು ಎಲ್ಲರೂ ಅರ್ಥ ಮಾಡಿ ಕೊಳ್ಳಬೇಕು~ ಎಂದು ಹೇಳಿದರು.

ವಿದ್ಯಾರ್ಥಿಗಳಾದ ಶ್ರೀಪ್ರಿಯ ಮತ್ತು ಪ್ರೀತಿ ಪ್ರಾರ್ಥನೆ ಮಾಡಿದರು.ಡಾ. ಜಿ. ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕ ಡಾ. ಎಂ. ಕಿರಣ್ ಸ್ವಾಗತಿಸಿದರು. ಎಂಜಿಎಂ ಕಾಲೇಜಿನ ರಾಜ್ಯ ಶಾಸ್ತ್ರ ಪ್ರಾಧ್ಯಾಪಕ ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಅಶ್ವತ್ಥಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ. ಭಾಸ್ಕರ್ ಶೆಟ್ಟಿ ವಂದನಾರ್ಪಣೆ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.