ಹಕ್ಕುಚ್ಯುತಿ: ಹಾಜರಿಗೆ ಸೂಚನೆ

7

ಹಕ್ಕುಚ್ಯುತಿ: ಹಾಜರಿಗೆ ಸೂಚನೆ

Published:
Updated:

ಬೆಳಗಾವಿ: ಶಾಸಕರಾದ ಅಭಯ ಪಾಟೀಲ ಹಾಗೂ ಎಸ್.ಬಿ.ಘಾಟಗೆ ಅವರು ತರುಣ ಭಾರತ ಮರಾಠಿ ದಿನಪತ್ರಿಕೆ ಸಂಪಾದಕರ ವಿರುದ್ಧ ನೀಡಿರುವ ಹಕ್ಕುಚ್ಯುತಿ ಸೂಚನೆ ಹಿನ್ನೆಲೆಯಲ್ಲಿ, ಮೇ 29 ರಂದು ವಿಧಾನಸೌಧದಲ್ಲಿ ನಡೆಯಲಿರುವ ಹಕ್ಕು ಭಾದ್ಯತಾ ಸಮಿತಿ ಸಭೆಗೆ ಹಾಜರಾಗಲು ಪತ್ರಿಕೆಯ ಸಂಪಾದಕರಿಗೆ ಸೂಚಿಸಲಾಗಿದೆ.ಕಳೆದ ಮೂರು ವರ್ಷಗಳಿಂದ ಈ ಪತ್ರಿಕೆಯಲ್ಲಿ ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದರೊಂದಿಗೆ, ಕಾರ್ಯನಿರ್ವಹಿಸಲು ಅಡ್ಡಿ ಉಂಟು ಮಾಡಲಾಗುತ್ತಿದೆ ಎಂದು ಈ ಇಬ್ಬರು ಶಾಸಕರು ಪತ್ರಿಕೆಯ ಸಂಪಾದಕರ ವಿರುದ್ಧ ಹಕ್ಕುಚ್ಯುತಿ ಸೂಚನೆ ನೀಡಿದ್ದರು.ಇದನ್ನು ಪರಿಶೀಲಿಸಿ ವರದಿ ಸಲ್ಲಿಸಲು ವಿಧಾನಸಭಾಧ್ಯಕ್ಷರು ಹಕ್ಕು ಬಾಧ್ಯತಾ ಸಮಿತಿಗೆ ವಹಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry