ಹಕ್ಕುಸ್ವಾಮ್ಯ ಮಸೂದೆಗೆ ಅಸ್ತು

7

ಹಕ್ಕುಸ್ವಾಮ್ಯ ಮಸೂದೆಗೆ ಅಸ್ತು

Published:
Updated:

ನವದೆಹಲಿ (ಪಿಟಿಐ):  ಬರಹಗಾರರು ಮತ್ತು ಕವಿಗಳು ದೀರ್ಘ ಕಾಲದಿಂದ ಕಾಯುತ್ತಿದ್ದ ಹಕ್ಕುಸ್ವಾಮ್ಯ ಮಸೂದೆ 2010ಕ್ಕೆ ರಾಜ್ಯಸಭೆ ಗುರುವಾರ ಸಂಜೆ ಅನುಮೋದನೆ ನೀಡಿದೆ.ಬರಹಗಾರರು ಹಾಗೂ ಗೀತ ರಚನೆಕಾರರಿಗೆ ರಾಯಧನ ನೀಡದೆ ಅವರ ಹಾಡುಗಳು, ಬರಹಗಳನ್ನು ಸಂಗೀತ ಕಂಪೆನಿಗಳು ಹಾಗೂ ಸಿನಿಮಾ ನಿರ್ಮಾಪಕರು ಬಳಸುವುದನ್ನು ಈ ಮಸೂದೆ ತಡೆಯಲಿದೆ.ಕೀಟನಾಶಕ ತಡೆ: ಕೃಷಿ ಹಾಗೂ ಪ್ರಾಣಿಜನ್ಯ ಉತ್ಪನ್ನಗಳ ಆಮದು ಸೇರಿದಂತೆ ವಿದೇಶಿ ಕೀಟನಾಶಕಗಳ ಪ್ರಮಾಣ ತಡೆಗಟ್ಟಲು ರಾಷ್ಟ್ರೀಯ ಕೃಷಿ ಜೀವ ವೈವಿಧ್ಯ ಸಂಸ್ಥೆ ಸ್ಥಾಪನೆ ಕುರಿತ ಮಸೂದೆಗೂ ಸಂಪುಟ ಅನುಮತಿ ನೀಡಿದೆ.ಕೃಷಿ, ಪ್ರಾಣಿಜನ್ಯ  ಉತ್ಪನ್ನಗಳ ಆಮದಿಗೆ ಕಠಿಣ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಜೀವವೈವಿಧ್ಯ ಕಾಪಾಡುವಲ್ಲಿ ಈ ಹೊಸ ಮಸೂದೆಯಲ್ಲಿ ಅವಕಾಶಗಳಿವೆ ಎಂದು ಮೂಲಗಳು ತಿಳಿಸಿವೆ.ಅನಿಲ ಖರೀದಿಗೆ ಒಪ್ಪಿಗೆ: ತುರ್ಕ್‌ಮೇನಿಸ್ತಾನದಿಂದ ಆಫ್ಘಾನಿಸ್ತಾನ- ಪಾಕಿಸ್ತಾನ ಮಾರ್ಗವಾಗಿ ನೈಸರ್ಗಿಕ ಅನಿಲ ಖರೀದಿಸುವ ಒಪ್ಪಂದಕ್ಕೆ ಭಾರತ ಮುಂದಿನ ವಾರ ಸಹಿ ಹಾಕಲಿದೆ. ಇದಕ್ಕೆ ಸಂಪುಟ ಸಮ್ಮತಿ ನೀಡಿದೆ.ಲೋಕಪಾಲ ಚರ್ಚೆ: ಬಹು ಚರ್ಚಿತ ಲೋಕಪಾಲ ಮಸೂದೆಯು ಸೋಮವಾರ ಅಥವಾ ಮಂಗಳವಾರ ರಾಜ್ಯಸಭೆಯಲ್ಲಿ ಚರ್ಚೆಗೆ ಬರಲಿದೆ. ಲೋಕಾಯುಕ್ತರ ನೇಮಕ, ಸಿಬಿಐ ಮುಖ್ಯಸ್ಥರ ನೇಮಕಾತಿಯಲ್ಲಿ ಪಾರದರ್ಶಕತೆ ಕಾಪಾಡುವಂತಹ ವಿವಾದಾತ್ಮಕ ವಿಷಯಗಳಲ್ಲಿ ಒಮ್ಮತಾಭಿಪ್ರಾಯ ಮೂಡಿಸಲು ಸರ್ಕಾರ ವಿರೋಧ ಪಕ್ಷಗಳೊಂದಿಗೆ ಈಗಾಗಲೇ ಮಾತುಕತೆ ನಡೆಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry