ಮಂಗಳವಾರ, ಜೂನ್ 22, 2021
22 °C

ಹಗರಿಬೊಮ್ಮನಹಳ್ಳಿ: 22 ಅತೀ ಸೂಕ್ಷ್ಮ ಮತಗಟ್ಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಗರಿಬೊಮ್ಮನಹಳ್ಳಿ: ವಿಧಾನ ಸಭಾ ಕ್ಷೇತ್ರವ್ಯಾಪ್ತಿಯಲ್ಲಿ ನಡೆದ ಇತ್ತೀಚಿನ ಘಟನೆಗಳು ಮತ್ತು  ಪೊಲೀಸ್ ಇಲಾಖೆಯ ವರದಿ ಆಧರಿಸಿ  ಒಟ್ಟು 230 ಮತಗಟ್ಟೆಗಳಲ್ಲಿ 22 ಅತೀ ಸೂಕ್ಷ್ಮ,33 ಸೂಕ್ಷ್ಮ ಹಾಗೂ 175 ಸಾಮಾನ್ಯ ಮತಗಟ್ಟೆಗಳೆಂದು ಪರಿಗಣಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ನಾರಾಯಣ ಗೌಡ ಹೇಳಿದರು.ತಾಲೂಕು ಪಂಚಾಯ್ತಿ ಸಭಾಂಗಣ­ದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ­ಯಲ್ಲಿ ನಡೆದ ಹಗರಿ­ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.ಹಗರಿಬೊಮ್ಮನಹಳ್ಳಿ ಹೋಬಳಿ­ಯಲ್ಲಿ 64, ತಂಬ್ರಹಳ್ಳಿ ಹೋಬಳಿಯಲ್ಲಿ 34, ಕೋಗಳಿ ಹೋಬಳಿಯಲ್ಲಿ 42, ಮರಿಯಮ್ಮನಹಳ್ಳಿ ಹೋಬಳಿಯಲ್ಲಿ 41, ಕೊಟ್ಟೂರು ಹೋಬಳಿಯ 49 ಮತಗಟ್ಟೆಗಳಿವೆ.ನೀತಿ ಸಂಹಿತೆ ಕುರಿತಂತೆ ತಾಲ್ಲೂಕು, ಹೋಬಳಿ, ಗ್ರಾಮ ಪಂಚಾಯ್ತಿ ಮಟ್ಟದ ಸಮಿತಿ ರಚಿಸಿ ದಿನದ 24 ಗಂಟೆಗಳಲ್ಲೂ ನೀತಿಸಂಹಿತೆ ಉಲ್ಲಂಘನೆ ಯಾಗದಂತೆ ಕಂದಾಯ, ತಾಲ್ಲೂಕು ಪಂಚಾಯ್ತಿ, ಪೊಲೀಸ್, ಗೃಹ ರಕ್ಷಕದಳದ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಯಾವುದೇ ಗ್ರಾಮದಲ್ಲಿ ಪರವಾನಗಿ ಇಲ್ಲದೆ ಕರಪತ್ರ ಹಂಚುವುದು, ಮೈಕ್, ವಾಹನ ಬಳಸಿದಲ್ಲಿ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಎಂದರು.ಸಿಪಿಐ ಮಲ್ಲೇಶ್ ದೊಡ್ಡಮನಿ, ಚುನಾವಣೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪ್ಯಾರಾ ಮಿಲಿಟರಿ ಪಡೆ ನಿಯೋಜಿಸಲಾಗುತ್ತದೆ. ಚುನಾ­ವಣೆಯ ಸಿಬ್ಬಂದಿ ನಿರ್ಭಯದಿಂದ ಕಾರ್ಯನಿರ್ವಹಿಸಲು ಪೊಲೀಸ್ ರಕ್ಷಣೆ ನೀಡಲಾಗುವುದು, ಕ್ಷೇತ್ರದ ಗಡಿಭಾಗಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ ಎಂದರು.ತಹಾಶೀಲ್ದಾರ್ ಏಜಾಜ್ ಬೇಗ್ 22 ಜನ ಸೆಕ್ಟರಲ್ ಅಧಿಕಾರಿಗಳನ್ನು ನೇಮಿಸಿ ಮತಗಟ್ಟೆಗಳನ್ನು ಹಂಚಿಕೆ ಮಾಡಲಾಗಿದೆ ಎಂದರು.ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಂ.ಎಸ್ ವೀರಯ್ಯ, ಅಬಕಾರಿ ಇಲಾಖೆಯ ಖಾಜಾ ಹುಸೇನ್ ಮಾತನಾಡಿದರು.ಲೋಕೋಪ­ಯೋಗಿ ಇಲಾಖೆಯ ಎಇಇ ಗುರುಬಸಪ್ಪ, ಜಿ.ಪಂ.ಎಇಇ ಆರ್.ಪ್ರಭು, ಬಿಇಒ ರಾಮನಗೌಡ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ದ್ಯಾಮಪ್ಪ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಪರಮೇಶ್ವರ,ಕೃಷಿ ಇಲಾಖೆಯ ನಾಗರಾಜ್ , ಕೊಟ್ಟೂರು , ಮರಿಯಮ್ಮನಹಳ್ಳಿ ಹೋಬಳಿಯ ಕಂದಾಯ ಅಧಿಕಾರಿಗಳು, ಕ್ಷೇತ್ರ­ವ್ಯಾಪ್ತಿಯ ಪಿಡಿಒ, ಗ್ರಾ.ಪಂ. ಕಾರ್ಯದರ್ಶಿಗಳು, ಗ್ರಾಮ ಲೆಕ್ಕಾಧಿ­ಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಯೋಜನಾಧಿಕಾರಿ ಅನ್ನದಾನಯ್ಯ ನಿರ್ವಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.