ಹಗಲು ದರೋಡೆ ನಿಲ್ಲಿಸಿ

7

ಹಗಲು ದರೋಡೆ ನಿಲ್ಲಿಸಿ

Published:
Updated:

ಯಾದಗಿರಿ ಹೊಸ ಜಿಲ್ಲೆಯಾಗಿ ಎರಡೂವರೆ ವರ್ಷ ಕಳೆಯಿತು. ಈಗಲೂ ಜಿಲ್ಲೆ ಮೂಲ ಸೌಕರ್ಯಗಳಿಲ್ಲದೇ ಸೊರಗುತ್ತಿದೆ.ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪಟ್ಟಣ ಹಾಗೂ ಜಿಲ್ಲೆಯಾದ್ಯಾಂತ ಅಪರಾಧ, ಕೊಲೆ, ದರೋಡೆ ಪ್ರಕರಣಗಳು ನಿರಾತಂಕವಾಗಿ ನಡೆದಿವೆ.  ಆಡಳಿತ ವ್ಯವಸ್ಥೆ ಕಣ್ಮುಚ್ಚಿ  ಕುಳಿತಿದೆ. ಇತ್ತೀಚಿನ ದಿನಗಳಲ್ಲಿ ಹಗಲು ಹೊತ್ತಿನಲ್ಲಿ ಮನೆಗಳ ದರೋಡೆ ಸಾಮಾನ್ಯವಾಗಿಬಿಟ್ಟಿದೆ.ಪಟ್ಟಣದಲ್ಲಿ ಒಂದೇ ಪೊಲೀಸ್ ಠಾಣೆ ಇದೆ. ಅಪರಾಧ ತಡೆಯಲು ವಿಫಲವಾಗಿದೆ. ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಜನಸಂಖ್ಯೆಗೆ ಅನು­ಗು­ಣವಾಗಿ ಸಿಬ್ಬಂದಿ ಇಲ್ಲದಿರುವುದು ಸಮಸ್ಯೆ­ಯಾಗಿ ಪರಿಣಮಿಸಿದೆ. ಬೇಗನೇ ಜಿಲ್ಲೆಗೆ ಎಲ್ಲ ಸೌಲಭ್ಯಗಳನ್ನು ಒದಗಿಸಿ ನಿರಾತಂಕ ಜೀವನ ನಡೆಸಲು ಸರ್ಕಾರ ಅನುವು ಮಾಡಿಕೊಡಬೇಕು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry