ಸೋಮವಾರ, ಸೆಪ್ಟೆಂಬರ್ 16, 2019
22 °C

ಹಜಾರೆಗೆ ಝಡ್ ಶ್ರೇಣಿ ಭದ್ರತೆ

Published:
Updated:

ಮುಂಬೈ  (ಪಿಟಿಐ): ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರಿಗೆ `ಝಡ್~ ಶ್ರೇಣಿಯ ಭದ್ರತೆ ಒದಗಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.`ಮೂರು ದಿನಗಳ ಹಿಂದೆಯೇ ಅವರಿಗೆ `ಝಡ್~ ಶ್ರೇಣಿ ಭದ್ರತೆ ನೀಡಲಾಗಿದೆ~ ಎಂದು ಅಹ್ಮದ್ ನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣ ಪ್ರಕಾಶ್ ತಿಳಿಸಿದ್ದಾರೆ.ಅಣ್ಣಾ ಅವರು ಭದ್ರತೆಯನ್ನು ನಿರಾಕರಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ, `ಅವರು ನಿರಾಕರಿಸಿದ್ದಾರೆ ಎನ್ನುವುದು ಸುಳ್ಳು. ಆದರೆ ಭದ್ರತೆಯ ಅಗತ್ಯವಿಲ್ಲ ಎಂದು ಹೇಳಿದ್ದರು  ಎಂದು ಹೇಳಿದ್ದಾಗಿ ಕೃಷ್ಣ ಪ್ರಕಾಶ್ ತಿಳಿಸಿದ್ದಾರೆ.

 ಈ ಮೊದಲು ಅಣ್ಣಾ ಭದ್ರತೆಗೆ ಇಬ್ಬರನ್ನು ನಿಯೋಜಿಸಲಾಗಿತ್ತು.ಇದೀಗ `ಝಡ್~ ಶ್ರೇಣಿ ಭದ್ರತೆ ಒದಗಿಸಿರುವುದರಿಂದ ನಾಲ್ವರು ಭದ್ರತಾ ಸಿಬ್ಬಂದಿ ಹಾಗೂ ಇಬ್ಬರು ವೈಯಕ್ತಿಕ ಭದ್ರತಾ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

 

Post Comments (+)