ಮಂಗಳವಾರ, ಜುಲೈ 14, 2020
27 °C

ಹಜಾರೆಗೆ ಸೋನಿಯಾ ತೀಕ್ಷ್ಣ ಪ್ರತ್ಯುತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಜಾರೆಗೆ ಸೋನಿಯಾ ತೀಕ್ಷ್ಣ ಪ್ರತ್ಯುತ್ತರ

ನವದೆಹಲಿ (ಪಿಟಿಐ): ತಮ್ಮ ಹೆಸರಿಗೆ ಕಳಂಕ ಹಚ್ಚುವ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ನಾಯಕರ ವರ್ತನೆ ಬಗೆಗೆ ಸೋನಿಯಾ ಗಾಂಧಿ ಅವರಿಗೆ ಹಜಾರೆ ಅವರು ಬರೆದಿದ್ದ ಪತ್ರಕ್ಕೆ ಸೋನಿಯಾ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ತಾನು ತನ್ನ ಅಭಿಪ್ರಾಯಗಳನ್ನು ಈ ಹಿಂದಿನ ಪತ್ರದಲ್ಲಿಯೇ ತಿಳಿಸಿದ್ದೇನೆ ಎಂದಷ್ಟೇ ಸೋನಿಯಾ ಅವರು ತೀಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

~ನಿಮ್ಮ 9 ಜೂನ್ 2011ರ ಪತ್ರ ನನಗೆ ತಲುಪಿದೆ. ನಾನು ದೆಹಲಿಯಲ್ಲಿ ಇರದಿದ್ದುದರಿಂದ ಉತ್ತರಿಸಲಾಗಲಿಲ್ಲ~ ಎಂದು ಹೇಳಿರುವ ಸೋನಿಯಾ, ~ಯಾರ ವಿರುದ್ಧವೂ ಕಳಂಚ ಹಚ್ಚುವ ಪ್ರಚಾರಕ್ಕೆ ನಾನು ವಿರುದ್ಧವಾಗಿದ್ದೇನೆ~ ಎಂಬುದಾಗಿ ಬರೆದ ಎಪ್ರಿಲ್ 19ರ ಪತ್ರವನ್ನು ಉಲ್ಲೇಖಿಸಿ ಅದರಲ್ಲೇ ತನ್ನ ನಿಲುವನ್ನು ತಿಳಿಸಿರುವುದಾಗಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಮಾಧ್ಯಮ ವಿಭಾಗದ ಜನಾರ್ದನ ದ್ವಿವೇದಿ ಅವರು ಹಜಾರೆ ಅವರು ಆರ್ಎಸ್ಎಸ್ ಸಂಘಟನೆಯ ಮುಖವಾಡ ಎಂದು ಜರೆದಿದ್ದನ್ನು ಪ್ರಶ್ನಿಸಿದ್ದ ಹಜಾರೆ ಅವರು ಸೋನಿಯಾ ಅವರಿಗೆ ಈ ಆರೋಪವನ್ನು ಸಾಬೀತು ಮಾಡುವಂತೆ ಪತ್ರ ಬರೆದಿದ್ದರು.

ತಮ್ಮ ಹೆಸರಿಗೆ ಕಳಂಕ ಹಚ್ಚುವ ಇಂತಹ ಅಪಪ್ರಚಾರಗಳನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಯುಪಿಎ ಯ ಸಚಿವರು ಮಾಡುತ್ತಿರುವುದು ತಮಗೆ ತೀವ್ರ ನೋವನ್ನುಂಟು ಮಾಡಿದೆ ಎಂದು ಹಜಾರೆ ಪತ್ರದಲ್ಲಿ ತಿಳಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.