ಹಜಾರೆಗೆ 25 ಲಕ್ಷ ರೂ ಗ್ರಾಮೀಣಾಭಿವೃದ್ಧಿ ಪ್ರಶಸ್ತಿ

7

ಹಜಾರೆಗೆ 25 ಲಕ್ಷ ರೂ ಗ್ರಾಮೀಣಾಭಿವೃದ್ಧಿ ಪ್ರಶಸ್ತಿ

Published:
Updated:

 

 

ಮುಂಬೈ, (ಪಿಟಿಐ):  ದೆಹಲಿ ಮೂಲದ ಪ್ರತಿಷ್ಠಾನವೊಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ಅವರಿಗೆ 25 ಲಕ್ಷ ರೂಪಾಯಿ ಪುರಸ್ಕಾರದ ಪ್ರಶಸ್ತಿ ನೀಡಿ ಗೌರವಿಸಲಿದೆ.

ಸೀತಾರಾಮ ಜಿಂದಾಲ್ ಪ್ರತಿಷ್ಠಾನವು  ಇದೇ ತಿಂಗಳು 23ರಂದು ನವದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಲಿದೆ ಎಂದು  ರಾಳೆಗಣಸಿದ್ಧಿ ಗ್ರಾಮದಲ್ಲಿರುವ ಹಜಾರೆ ಅವರ ನಿಕಟವರ್ತಿ ದತ್ತಾ ಅವಾರಿ ಈ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಆ ಸಮಾರಂಭದ ಒಂದು ದಿನ ಮೊದಲೇ ಫೆ. 22 ರಂದು ದೆಹಲಿಯಲ್ಲಿ ಆಯೋಜಿಸಲಾಗಿರುವ ಅಣ್ಣಾ ತಂಡದ ಕೋರ್ ಸಮಿತಿಯ ಸಭೆಯಲ್ಲೂ ಹಜಾರೆ ಅವರು ಪಾಲ್ಗೊಳ್ಳುವರೆಂದು ಅವಾರಿ ಅವರು ತಿಳಿಸಿದ್ದಾರೆ.

ಹಜಾರೆ ಅವರಿಗೆ ಕಫ. ಬೆನ್ನುನೋವು ಮತ್ತು ಕಾಲು, ಕೈಗಳಲ್ಲಿ ಬಾವು ಕಾಣಿಸಿಕೊಂಡಿತ್ತು. ಅದಕ್ಕಾಗಿ ಬೆಂಗಳೂರಿನ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅಣ್ನಾ ಹಜಾರೆ ಅವರು ಕೋರ್ ಸಮಿತಿಯ ಸದಸ್ಯ ಅರವಿಂದ ಕ್ರೇಜ್ರಿವಾಲ್ ಅವರೊಂದಿಗೆ ಶನಿವಾರ ತಮ್ಮ ರಾಳೆಗಣಸಿದ್ಧಿ ಗ್ರಾಮಕ್ಕೆ  ಹಿಂತಿರುಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry