ಹಜಾರೆ ತಮ್ಮ ನಡುವೆ ಯಾವುದೇ ಬಿರುಕಿಲ್ಲ- ಲೋಕಾಯುಕ್ತ

ಶನಿವಾರ, ಜೂಲೈ 20, 2019
22 °C

ಹಜಾರೆ ತಮ್ಮ ನಡುವೆ ಯಾವುದೇ ಬಿರುಕಿಲ್ಲ- ಲೋಕಾಯುಕ್ತ

Published:
Updated:

ಮಂಗಳೂರು (ಐಎಎನ್ಎಸ್): ತಮಗೂ ಅಣ್ಣಾ ಹಜಾರೆ ಅವರಿಗೂ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ ಎಂದಿರುವ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ತಾವು ಮಂಗಳವಾರ ನಡೆಯಲಿರುವ ಕರಡು ರಚನಾ ಸಭೆಯಲ್ಲಿ ಭಾಗವಹಿಸುವುದಾಗಿ ಭಾನುವಾರ ತಿಳಿಸಿದ್ದಾರೆ.

ತಮಗೆ ಪೂರ್ವನಿಗದಿತ ಕಾರ್ಯಕ್ರಮ ಇರುವುದರಿಂದ ಸೋಮವಾರ ನಡೆಯಲಿರುವ ಕರಡು ರಚನಾ ಸಭೆಯಲ್ಲಿ ಪಾಲ್ಗೊಳ್ಳುವುದು ಸಾಧ್ಯವಿಲ್ಲ ಎಂದಿರುವ ಅವರು ಮಂಗಳವಾರದ ಸಭೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.

ಹಜಾರೆ ಅವರು ಆಗಸ್ಟ್ 16 ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವ ನಿರ್ಧಾರಕ್ಕೆ ತಾವು ಕೇವಲ ಸಲಹೆಯನ್ನಷ್ಟೇ ನೀಡಿದ್ದೇನೆ. ಉಪವಾಸಕ್ಕಿಂತ ಪ್ರವಾಸ ಮಾಡಿ ಜನತೆಗೆ ವಿಷಯ ಮುಟ್ಟಿಸಬೇಕೆಂದು. ಅಷ್ಟೆ ಹೊರತು ತಮಗೂ ಹಜಾರೆ ಅವರಿಗೂ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಅವರು ತಿಳಿಸಿದರು. ಅಲ್ಲದೆ ಒಂದು ವೇಳೆ ಹಜಾರೆ ಅವರು ಉಪವಾಸ ಕುಳಿತಲ್ಲಿ ತಾವು ಸಂಪೂರ್ಣ ಬೆಂಬಲ ನೀಡುವುದಾಗಿಯೂ ಘೋಷಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry