ಹಜಾರೆ ಪರ ಮುಂದುವರಿದ ಧರಣಿ, ಜಾಥಾ

7

ಹಜಾರೆ ಪರ ಮುಂದುವರಿದ ಧರಣಿ, ಜಾಥಾ

Published:
Updated:
ಹಜಾರೆ ಪರ ಮುಂದುವರಿದ ಧರಣಿ, ಜಾಥಾ

ಕೊಳ್ಳೇಗಾಲ: ಭ್ರಷ್ಟಾಚಾರ ವಿರುದ್ಧ ಹಜಾರೆ ಹಮ್ಮಿಕೊಂಡಿರುವ ಉಪವಾಸ ಸತ್ಯಾಗ್ರಹ ಬೆಂಬಲಿಸಿ ತಾಲ್ಲೂಕಿನ ಹನೂರು ಪಟ್ಟಣದಲ್ಲಿ ಸೋಮವಾರ ವರ್ತಕರು, ವಿದ್ಯಾರ್ಥಿಗಳು ಶಾಲಾ- ಕಾಲೇಜು ಬಹಿಷ್ಕರಿಸಿ ಹಾಗೂ ವ್ಯಾಪಾರಿಗಳು ವಹಿವಾಟು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು, ವ್ಯಾಪಾರಸ್ಥರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡರು. ಹಜಾರೆ ಪರ ಘೋಷಣೆಗಳನ್ನು ಮೊಳಗಿಸಿದರು. ಪಟ್ಟಣದ ಕ್ರೀಡಾಂಗಣದ ಬಳಿ ವ್ಯಾಪಾರಸ್ಥರು, ವಿದ್ಯಾರ್ಥಿಗಳು ಸೇರಿ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದರು.ಪ್ರಮುಖ ಬೀದಿಗಳಲ್ಲಿ  ಘೋಷಣೆ ಕೂಗುತ್ತಾ ಸಾಗಿದ ಮೆರವಣಿಗೆ ಬಸ್ ನಿಲ್ದಾಣ ತಲುಪಿತು. ಅಲ್ಲಿ ಕೆಲಕಾಲ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಪ್ರತಿಭಟನಾ ಮೆರವಣಿಗೆ ಮುಂದುವರೆದು ಹೆಚ್ಚುವರಿ ತಹಶೀಲ್ದಾರ್ ಕಚೇರಿ ತಲುಪಿ ಉಪ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.ಹನೂರು ವರ್ತಕರ ಸಂಘದ ಜಯಪ್ರಕಾಶ್ ಗುಪ್ತ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮೋಡಿ ಕೃಷ್ಣಪ್ಪ, ಪಟ್ಟಣ ಪಂಚಾಯಿತಿ ನಾಮ ನಿರ್ದೇಶಿತ ಸದಸ್ಯ ಪುಟ್ಟರಾಜು ಮುಖಂಡ ಬಸವಣ್ಣ, ಬಸವರಾಜು, ಕೃಷ್ಣಕುಮಾರ್, ರಮೇಶ್ ನಾಯ್ಡು, ಪಾಂಡುರಂಗ ನಾಯ್ಡು, ಬಾಲರಾಜ ನಾಯ್ಡು, ನಂಜಪ್ಪ, ವೆಂಕಟಸ್ವಾಮಿ, ಪ್ರಸಾದ್, ಮಂಗಲ ರಾಜಶೇಖರ್, ಕಣ್ಣೂರು ಬಸವರಾಜಪ್ಪ, ವೆಂಕಟರಾಜು, ಮಾಯಣ್ಣ, ನಟರಾಜೇಗೌಡ, ಮಣಗಳ್ಳಿ ಕೃಷ್ಣಕುಮಾರ್, ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಆಹೋರಾತ್ರಿ ಧರಣಿ ಅಂತ್ಯ

`ಭ್ರಷ್ಟಾಚಾರ ಸಾಕು ಜನಲೋಕಪಾಲ ಮಸೂದೆ ಬೇಕು~ ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ಕಳೆದ 3 ದಿನಗಳಿಂದ ನಡೆಸಿಕೊಂಡು ಬಂದಿದ್ದ ಆಹೋರಾತ್ರಿ ಧರಣಿ ಭಜನಾ ಕಾರ್ಯಕ್ರಮಕ್ಕೆ ಸೋಮವಾರ ತೆರೆ ಎಳೆದರು.ತಹಶೀಲ್ದಾರ್ ಸುರೇಶ್‌ಕುಮಾರ್ ಅವರಿಗೆ ಹಜಾರೆ ಹೋರಟಕ್ಕೆ ಬೆಂಬಲ ಸೂಚಿಸಿ ಮತ್ತು ಜನಲೋಕಪಾಲ ಮಸೂದೆ ಜಾರಿಗೊಳಿಸುವ ಬಗ್ಗೆ ರಾಜ್ಯಪಾಲರಿಗೆ ತಲುಪಿಸುವ ಮನವಿ ಸಲ್ಲಿಸಿದ ರೈತ ಮುಖಂಡರು ಆಹೋರಾತ್ರಿ ಭಜನಾ ಮೇಳ ಕಾರ್ಯಕ್ರಮಕ್ಕೆ ಅಂತ್ಯ ಹಾಡಿದರು.ಮಸೂದೆ ಜಾರಿಯಾಗುವ ವರೆಗೂ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ವತಿಯಿಂದ ವಿನೂತನ ಪ್ರತಿಭಟನೆ ನಿರಂತರವಾಗಿ ನಡೆಯಲಿದೆ ಎಂದು ರೈತ ಮುಖಂಡರು ತಿಳಿಸಿದರು.ರೈತ ಸಂಘದ ಎಸ್. ಷಣ್ಮುಖಸ್ವಾಮಿ, ಪಿ. ಶಿವಕುಮಾರಸ್ವಾಮಿ, ಅಣಗಳ್ಳಿ ಬಸವರಾಜು, ರಾಮಕೃಷ್ಣ, ಕುಣಗಳ್ಳಿ ರಂಗಸ್ವಾಮಿ. ಎಲ್. ಸಿದ್ದರಾಜು ಇತರರು ಇದ್ದರು.ಯಳಂದೂರು ವರದಿ: ಪಟ್ಟಣದ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಅಣ್ಣಾ ಪರ ಸೋಮವಾರ ಧರಣಿ ನಡೆಸಿದರು. ಕೇಂದ್ರ ಸರ್ಕಾರ ಜನಲೋಕಪಾಲ ಮಸೂದೆ ಜಾರಿಗೆ ಕೇಂದ್ರ ವಿಳಂಬ ಮಾಡುತ್ತಿದೆ. ಜನಲೋಕಪಾಲ ಮಸೂದೆಯನ್ನು ಕೇವಲ ಪೂಳ್ಳು ಮಸೂದೆಯಾಗಿ ಮಾಡಲು ಸರ್ಕಾರ ಹೊರಟಿದೆ ಎಂದು ಆರೋಪಿಸಿ ಘೋಷಣೆ ಕೂಗಿದರು.ಮಂಡಲದ ಅಧ್ಯಕ್ಷ ವೇದಮೂರ್ತಿ, ನಗರ ಅಧ್ಯಕ್ಷ ಮಹೇಶ್, ಪಟ್ಟಣ ಪಂಚಾಯಿತಿ ಸದಸ್ಯ ಸೋಮನಾಯಕ, ಮದ್ದೂರು ಶ್ರೀಕಂಠ, ಕಂಠಪ್ಪ, ರೇವಣ್ಣ, ರಾಜೇಂದ್ರ, ಚಾಮರಾಜು, ಸೈಯದ್ ಷಫೀಕ್, ಗುರುವೆಂಕಟರಾಮು ಇತರರು ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry