ಗುರುವಾರ , ಜೂಲೈ 2, 2020
22 °C

ಹಜಾರೆ ಬಳಗದ ಪ್ರಮುಖ ಪ್ರಸ್ತಾವಗಳಿಗೂ ಸರ್ಕಾರಿ ಕರಡು ಕೊಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಜಾರೆ ಬಳಗದ ಪ್ರಮುಖ ಪ್ರಸ್ತಾವಗಳಿಗೂ ಸರ್ಕಾರಿ ಕರಡು ಕೊಕ್

ನವದೆಹಲಿ (ಪಿಟಿಐ): ದೂರವಾಣಿ ಮೇಲೆ ಕಣ್ಗಾವಲು,  ವಿದೇಶೀ ನ್ಯಾಯಾಲಯಗಳಿಗೆ ಅಗತ್ಯ ಮಾಹಿತಿ ನೆರವಿಗಾಗಿ ಅಧಿಕೃತ ಪತ್ರ ರವಾನೆ ಮತ್ತು ಭ್ರಷ್ಟಾಚಾರ ಅವಕಾಶಗಳನ್ನು ಕಡಿಮೆಗೊಳಿಸುವ ಸಲುವಾಗಿ ಕೆಲಸದ ಬದಲಾವಣೆ ಅಧಿಕಾರ ನೀಡಿಕೆಯಂತಹ ಪ್ರಸ್ತಾವಗಳನ್ನು ಅಣ್ಣಾ ಹಜಾರೆ ಬಳಗ ತಮ್ಮ ಜನಲೋಕಪಾಲ ಮಸೂದೆ ಕರಡಿನಲ್ಲಿ ಮಂಡಿಸಿದ್ದು, ಸರ್ಕಾರಿ ಕರಡು ಮಸೂದೆ ಈ ಪ್ರಸ್ತಾವಗಳನ್ನು ಸಂಪೂರ್ಣವಾಗಿ ಕೈಬಿಟ್ಟಿದೆ.ಲೋಕಪಾಲ ಮಸೂದೆ ರಚನೆಗಾಗಿ ರೂಪಿಸಿದ ಜಂಟಿ ಸಮಿತಿಗೆ  ಹಜಾರೆ ಬಳಗ ಸಲ್ಲಿಸಿದ ಪ್ರಸ್ತಾವಗಳಲ್ಲಿ ಅಗತ್ಯ ಸೂಕ್ತ ತನಿಖೆಗಾಗಿ ಆಧುನಿಕ  ಉಪಕರಣ ಹೊಂದುವ ಹಾಗೂ ಎಲ್ಲ ಸಂಸತ್ ಸದಸ್ಯರು ಘೋಷಿಸಿದ ಆಸ್ತಿಪಾಸ್ತಿಯ ತನಿಖೆ ನಡೆಸುವ  ಅಧಿಕಾರ ಉದ್ದೇಶಿತ ಲೋಕಪಾಲ ಸಂಸ್ಥೆಗೆ ಇರಬೇಕು ಎಂಬ ಪ್ರಸ್ತಾವಗಳೂ ಸೇರಿವೆ.ಜನ ಲೋಕಪಾಲ ಮಸೂದೆಯಂತೆ ಲೋಕಪಾಲ ಸಂಸ್ಥೆಯ ಪೀಠವನ್ನು ಭಾರತೀಯ ಟೆಲಿಗ್ರಾಫ್ ಕಾಯ್ದೆಯ ಸೆಕ್ಷನ್ 5ರ ಅಡಿಯಲ್ಲಿ ರಚಿತವಾದ ನಿಯೋಜಿತ ಪ್ರಾಧಿಕಾರ ಎಂಬುದಾಗಿ ಪರಿಗಣಿಸಬೇಕು. ಇದಕ್ಕೆ ಮಾಹಿತಿ ಸಂದೇಶಗಳು ಅಥವಾ ದೂರವಾಣಿ, ಇಂಟರ್ ನೆಟ್ ಮತ್ತು ಬೇರಾವುದೇ ಮಾಧ್ಯಮದ ಮೂಲಕ ರವಾನೆಯಾಗುವ ಧ್ವನಿಯ ಮೇಲೆ ಕಣ್ಣಿಡುವ ಅಧಿಕಾರ ಇರಬೇಕು ಎಂಬ ಪ್ರಸ್ತಾವವನ್ನು ಹಜಾರೆ ಬಳಗ ಮುಂದಿಟ್ಟಿದೆ. ಆದರೆ ಸರ್ಕಾರಿ ಕರಡು ಈ ಬಗ್ಗೆ ಪ್ರಸ್ತಾಪ ಕೂಡಾ ಮಾಡಿಲ್ಲ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.