ಬುಧವಾರ, ಮೇ 25, 2022
29 °C

ಹಜ್ ಯಾತ್ರೆ: 5 ಭಾರತೀಯರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೆಡ್ಡಾ (ಐಎಎನ್‌ಎಸ್): ವಾರ್ಷಿಕ ಹಜ್ ಯಾತ್ರೆ ಕೈಗೊಂಡಿರುವ ಐವರು ಭಾರತೀಯ ಯಾತ್ರಿಕರು ಸೌದಿ ಅರೇಬಿಯಾದಲ್ಲಿ ಮೃತ ಪಟ್ಟಿದ್ದಾರೆ.ಈ ಪೈಕಿ ನಾಲ್ವರು ಭಾರತೀಯ ಹಜ್ ಸಮಿತಿಯಿಂದ ಬಂದಿದ್ದು ಮತ್ತೊಬ್ಬರು ಖಾಸಗಿ ಪ್ರವಾಸ ನಡೆಸುವ ಸಂಸ್ಥೆಯಿಂದ ಬಂದವರು ಎಂದು ಭಾರತೀಯ ದೂತಾವಾಸ ಕಚೇರಿ ಮಂಗಳವಾರ ಸಂಜೆ ತಿಳಿಸಿದೆ.ವಾರ್ಷಿಕ ಹಜ್ ಯಾತ್ರೆಗೆ ಭಾರತದಿಂದ ಇಲ್ಲಿಗೆ ಒಟ್ಟು 42,929 ಮಂದಿ ಬಂದಿದ್ದಾರೆ. ಇವರಲ್ಲಿ 7,852 ಮಂದಿ ಮೆಕ್ಕಾದಲ್ಲಿ ಇದ್ದು 35,073 ಮಂದಿ ಮದೀನಾದಲ್ಲಿ ಇದ್ದಾರೆ.ಮುಸ್ಲಿಮರ ಪವಿತ್ರ ನಗರವಾದ ಮೆಕ್ಕಾಗೆ ಜೀವಿತಾವಧಿಯಲ್ಲಿ ಒಮ್ಮೆ ಹಜ್ ಯಾತ್ರೆ ಕೈಗೊಳ್ಳುವುದು ಇಸ್ಲಾಂನಲ್ಲಿ ಅನಿವಾರ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.