ಮಂಗಳವಾರ, ಏಪ್ರಿಲ್ 20, 2021
24 °C

ಹಟ್ಟಿ: ಸಂಭ್ರಮದ ಈದ್ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಟ್ಟಿ ಚಿನ್ನದ ಗಣಿ: ಈದ್-ಉಲ್-ಫಿತರ್ ಹಬ್ಬದ ಅಂಗವಾಗಿ ಪ್ರಯುಕ್ತ ಮುಸ್ಲಿಂ ಬಾಂಧವರು ಸೋಮವಾರ ಈದ್ಗಾ ಮೈದಾನದಲ್ಲಿ ಈದ್ ನಮಾಜ್ ಮತ್ತು ಕುತ್ಬಾ ನೆರವೇರಿಸಿ ಸಡಗರ ಸಂಭ್ರಮದಿಂದ ಹಬ್ಬ ಆಚರಿಸಲಾಯಿತು. ಪ್ರಾರ್ಥನೆಯ ನಂತರ ಹಟ್ಟಿ ಚಿನ್ನದ ಗಣಿ ಕಂಪೆನಿ ರಂಜಾನ್ ಮಾಸ ಪೂರ್ತಿ ನೀಡಿದ ಸಹಕಾರಕ್ಕೆ ಪ್ರಧಾನ ವ್ಯವಸ್ಥಾಪಕ ಎ. ಆರ್. ವಾಲ್ಮೀಕಿ, ಉಪ ಪ್ರಧಾನ ವ್ಯವಸ್ಥಾಪಕ ಬಸವರಾಜ ದೊಡ್ಡಮನಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಬಂದೋಬಸ್ತ್ ಮಾಡಿದಕ್ಕೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರಕಾಶ ಮಾಳಿ ಹಾಗೂ ಸಿಬ್ಬಂದಿಗೆ ಅಂಜುಮನ್ ಬೈತುಲ್ ಮಾಲ್ ಕಮಿಟಿವತಿಯಿಂದ ಕಾರ್ಯದರ್ಶಿ ಸೈಯದ್ ಅಬ್ಬಾಸ್ ಅಲಿ ಸಮಸ್ತ ಮುಸ್ಲಿಂ ಬಾಂಧವರ ಪರವಾಗಿ ಅಭಿನಂಧಿಸಿದರು. ಮಳೆಗಾಗಿ ವಿಶೇಷ ಪ್ರಾರ್ಥನೆ ಮಾಡಲಾಯಿತು.ಕಮಿಟಿಯ ಪದಾಧಿಕಾರಿಗಳು ಹಾಜಿ ಅಬ್ದುಲ್ ರಹೀಮ್ ಖಾಜಿ, ಸಹಾಯಕ ಕಾರ್ಯದರ್ಶಿ ಜೈನುದ್ದೀನ್, ಅಹ್ಮದ್ ಬಾಬಾ, ಮೆಹರ್ ಅಲಿ,  ಸೈಯದ್ ಜಿಲಾನಿ, ಮಹ್ಮದ್ ಅಮೀರ ಅಲಿ ಇದ್ದರು. ಆಫಿಜ್ ಸದರ್-ಎ-ಆಲಂ ಈದ್ ನಮಾಜಿನ ಇಮಾಮ್ ಆಗಿದ್ದರು. ಸಹಾಯಕ ಆಫಿಜ್ ಜಲಾಲುದ್ದೀನ್ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.