ಹಡಗಲಿ: ಎಂಪಿಪಿ ಪ್ರಸಾದ ಭವನ ಉದ್ಘಾಟನೆ

7

ಹಡಗಲಿ: ಎಂಪಿಪಿ ಪ್ರಸಾದ ಭವನ ಉದ್ಘಾಟನೆ

Published:
Updated:

ಹೂವಿನಹಡಗಲಿ: ಅಭಿವೃದ್ಧಿ ಕಾರ್ಯ ಗಳಿಂದ ರಾಜಕಾರಣಿ ಸಾಮರ್ಥ್ಯವನ್ನು ಅಳೆಯಲಿಕ್ಕಾಗು ವುದಿಲ್ಲ ಸಂವಿಧಾನದ ಮೌಲ್ಯ, ಉದ್ದೆೀಶ, ಆಶಯಗಳನ್ನು ಸಮರ್ಪಕ ವಾಗಿ ಅರ್ಥೈಸಿಕೊಂಡು ಜವಾಬ್ದಾರಿ ಯುತ ನಡವಳಿಕೆ ರೂಢಿಸಿಕೊಂಡಾಗ ಒಬ್ಬ ಸಮರ್ಥ ರಾಜಕಾರಣಿ ಆಗುತ್ತಾನೆಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಧೀಕ್ಷಕ ಎಂ.ಎಂ.ಶಿವಪ್ರಕಾಶ್ ಹೇಳಿದರು.ಪಟ್ಟಣದ ಗವಿಮಠದಲ್ಲಿ ಈಚೆಗೆ ನೂತನವಾಗಿ ನಿರ್ಮಿಸಿರುವ ಶ್ರೀಮತಿ ಎಂ.ಪಿ.ರುದ್ರಾಂಬಾ ಎಂ.ಪಿ.ಪ್ರಕಾಶ್ ಪ್ರಸಾದ ಭವನದ ಉದ್ಘಾಟನಾ ಕಾಯಕ್ರಮದಲ್ಲಿ  ಮಾತನಾಡಿದರು.ಓದುವ ಹವ್ಯಾಸ ಅದ್ಭುತವಾಗಿತ್ತು ಸಾಯುವ ಸಮಯದಲ್ಲಿಯೂ ಓದುತ್ತಾ ತೃಪ್ತಿ ಮೂಲಕ ಜೀವನ ಮುಕ್ತಿಯನ್ನು ಹೊಂದಿದವರು ಎಂ.ಪಿ.ಪ್ರಕಾಶ್ ಎಂದರು. ಎಂ.ಪಿ.ಪ್ರಕಾಶ್ ಕೇವಲ ಕುಟುಂಬಕ್ಕೆ ಮಾತ್ರ ಸೀಮಿತವಾದವರಲ್ಲ ಸರ್ವರಿಗೂ ಸಹೃದಯಿಗಳಾಗಿದ್ದರು ಎಂದರು.ರಂಗಭಾರತಿ ಕಾರ್ಯಾಧ್ಯಕ್ಷ ಎಂ.ಪಿ.ರವೀಂದ್ರ ಮಾತನಾಡಿ ಪ್ರತಿ ಯೊಂದು ಕ್ಷೇತ್ರಗಳನ್ನು ಅರಿತವರಾಗಿದ್ದು ಮತ್ತು ಸರ್ವರನ್ನೂ  ಗೌರವದಿಂದ ಪ್ರೀತಿಸುತ್ತಿದ್ದರು ಎಂದರು.ಪ್ರೊ.ಶಾಂತಮೂರ್ತಿ ಬಿ. ಕುಲಕರ್ಣಿ ಮಾತನಾಡಿ ಎಂ.ಪಿ.ಪ್ರಕಾಶ್ ದಣಿವರಿಯದ ಓದುಗಾರ, ಸರ್ವ ತೋಮುಖ ಅಭಿವೃದ್ಧಿಯ ಹರಿಕಾರ ರಾಗಿದ್ದರು ಎಂದರು.ಗವಿಮಠದ ಹಿರಿಶಾಂತವೀರ ಸ್ವಾಮೀಜಿ ಸಮಾರಂಭದ ನೇತೃತ್ವವಹಿಸಿ ಮಾತನಾಡಿದರು.

ಹೊಸಪೇಟೆಯ ಕೊಟ್ಟೂರು ಸ್ವಾಮಿಮಠದ ಜಗದ್ಗುರು ಸಂಗನಬಸವ ಸ್ವಾಮೀಜಿ ಮಾತನಾಡಿ ಎಂ.ಪಿ.ರವೀಂದ್ರ ಅವರು, ಪ್ರಕಾಶರ ಕನಸುಗಳನ್ನು ನನಸು ಮಾಡಲು ಮುಂದಾಗಬೇಕು ಎಂದರು.ಸ್ವಾಮಿಗಳು ರಾಜಕೀಯ ಪ್ರವೇಶಿಸ ಬಾರದು, ತಪ್ಪು ಮಾಡಿದವರಿಗೆ ಬುದ್ಧಿ ಹೇಳಬೇಕು ಎಂದ ಅವರು ಮೌಲ್ಯವನ್ನು ಕಳೆದುಕೊಂಡ ರಾಜಕೀಯ ವ್ಯವಸ್ಥೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು.ಲಿಂಗನಾಯ್ಕನ ಹಳ್ಳಿಯ ಚನ್ನವೀರ ಸ್ವಾಮೀಜಿ, ಮಾನಿಹಳ್ಳಿ ಮಳೆ ಯೋಗೀಶ್ವರ ಸ್ವಾಮೀಜಿ, ಗುಡ್ಡದ ಆನ್ವೇರಿ ಶ್ರೀಗಳು, ಅಗಡಿ ಶ್ರೀಗಳು ಉಪಸ್ಥಿತರಿದ್ದರು. ಶಿಕ್ಷಕ ಕೆ.ಶರಣಬಸಪ್ಪ ಸ್ವಾಗತಿಸಿದರು. ಶಿಕ್ಷಕ ಎಸ್.ದ್ವಾರಕೇಶರೆಡ್ಡಿ ನಿರೂಪಿಸಿದರು. ಸವಿತಾ ಕುಂಬಾರಶೆಟ್ರು ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry