ಗುರುವಾರ , ಮೇ 6, 2021
23 °C

ಹಡಗು ಡಿಕ್ಕಿ ಪ್ರಕರಣ: ತುರ್ತು ವಿಚಾರಣೆಗೆ ಸುಪ್ರೀಂ ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕಳೆದ ವರ್ಷದ ಜನವರಿಯಲ್ಲಿ ಭಾರತೀಯ ಯುದ್ಧ ನೌಕೆಗೆ ಡಿಕ್ಕಿ ಹೊಡೆದ ಸಿಪ್ರಸ್ ಹಡಗು ದೇಶದ ಜಲ ಪ್ರದೇಶದಿಂದ ಹೊರ ಹೋಗದಿರುವಂತೆ ತಡೆಯಬೇಕೆಂದು ಕೋರಿ ಕೇಂದ್ರವು ಶನಿವಾರ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದೆ.ಮನವಿಯ ತುರ್ತು ವಿಚಾರಣೆಗಾಗಿ ವಾರಾಂತ್ಯದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಸೇರಿದ  ನ್ಯಾಯಪೀಠವು,  ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ. ಅಲ್ಲದೆ ಈ ವಿಷಯದಲ್ಲಿ ಕೊನೇ ಗಳಿಗೆಯಲ್ಲಿ ಕೋರ್ಟ್‌ಗೆ ಮೊರೆ ಇಟ್ಟಿರುವುದಕ್ಕೆ ಕೇಂದ್ರಕ್ಕೆ ಛೀಮಾರಿ ಹಾಕಿದೆ.`ವಿದೇಶಿ ಹಡಗು ಹಾನಿಗೊಳಗಾದ ಭಾರತೀಯ ಯುದ್ಧನೌಕೆಗೆ 48 ಕೋಟಿ ರೂಪಾಯಿ ಪರಿಹಾರ ನೀಡಿ, ಭಾರತೀಯ ಜಲ ಪ್ರದೇಶದಿಂದ ತೆರಳಬಹುದು~ ಎಂದು ಬಾಂಬೆ ಹೈಕೋರ್ಟ್ ಆದೇಶ ನೀಡಿತ್ತು.

ಭಾರತೀಯ ಯುದ್ಧನೌಕೆಗೆ ಅಪಾರ ಹಾನಿ ಆಗಿದೆ. ಹಾಗಾಗಿ 1,058 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಕೇಂದ್ರವು ಕೋರಿದೆ.ಕಳೆದ ವರ್ಷ ಜನವರಿ 31ರಂದು ಮುಂಬೈ ಬಂದರಿನಲ್ಲಿ ಈ ಎರಡೂ ಹಡಗುಗಳು ಡಿಕ್ಕಿ ಹೊಡೆದಿದ್ದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.