ಹಡಗು ಬೆರಗು

7

ಹಡಗು ಬೆರಗು

Published:
Updated:
ಹಡಗು ಬೆರಗು

ಹಡಗನ್ನು ಎಷ್ಟು ವರ್ಷ ಬಳಸಬಹುದು?

ಹಡಗಿನ ಬಾಳಿಕೆಯು ಅದನ್ನು ತಯಾರಿಸಲು ಉಪಯೋಗಿಸಿದ ವಸ್ತುಗಳು ಹಾಗೂ ಅದರ ನಿರ್ವಹಣೆಯನ್ನು ಅಲವಂಬಿಸಿರುತ್ತದೆ. 1950 ಹಾಗೂ 60ರ ದಶಕದಲ್ಲಿ 20-25 ವರ್ಷ ಹಡಗುಗಳನ್ನು ಬಳಸುತ್ತಿದ್ದರು.ಸಾಮಾನ್ಯವಾಗಿ ಸಾಗರದಲ್ಲಿ ಚಲಿಸುವ ಬೃಹತ್ ಹಡಗುಗಳು 20ರಿಂದ 30 ವರ್ಷ ಬಾಳಿಕೆ ಬರುತ್ತವೆ. ಪ್ಲೈವುಡ್ ಅಥವಾ ಫೈಬರ್‌ಗ್ಲಾಸ್‌ನಿಂದ ತಯಾರಿಸಿದ ಹಡಗನ್ನು 40 ವರ್ಷ ಉಪಯೋಗಿಸಬಹುದು. ಗಟ್ಟಿಮುಟ್ಟಾದ ಮರದಿಂದ ಮಾಡಿದ ಹಡಗಿನ ಆಯುಸ್ಸು ಇನ್ನೂ ಹೆಚ್ಚು. ಆದರೆ, ಅದನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕು.

ಬಳಕೆಗೆ ಯೋಗ್ಯವಲ್ಲ ಎಂಬಂಥ ಹಡಗುಗಳು ಮುಂದೇನಾಗುತ್ತವೆ?

ಅಂಥ ಹಡಗುಗಳನ್ನು ಒಡೆಯಲೆಂದೇ ಇರುವ ವಿಶಾಲವಾದ ಮೈದಾನಕ್ಕೆ ಸಾಗಿಸುತ್ತಾರೆ. ಅದನ್ನು `ಶಿಪ್ ಬ್ರೇಕಿಂಗ್ ಯಾರ್ಡ್~ ಎಂದು ಕರೆಯುತ್ತಾರೆ.ಅಲ್ಲಿ ಹಡಗಿನ ಭಾಗಗಳನ್ನು ಪ್ರತ್ಯೇಕಗೊಳಿಸುತ್ತಾರೆ. ಮರು ಉಪಯೋಗಕ್ಕೆ ಬರುವಂಥವನ್ನು ಹೆಕ್ಕುತ್ತಾರೆ. ಉಳಿದೆಲ್ಲವೂ ತ್ಯಾಜ್ಯ.ಹಡಗನ್ನು ಒಡೆಯುವ ಕ್ರಿಯೆಯ ಕಷ್ಟಗಳೇನು?

ಹಳೆಯ ಹಡಗುಗಳಲ್ಲಿ `ಆಸ್ಬೆಸ್ಟಾಸ್~ ಹಾಗೂ `ಪಾಲಿಕ್ಲೋರಿನೇಟೆಡ್ ಬೈ ಫೀನೈಲ್ಸ್~ (ಪಿಸಿಬೀಸ್) ಅಂಶ ಇರುತ್ತದೆ. ಜೀವಕ್ಕೆ ಹಾನಿಕಾರಕ ಎಂಬ ಕಾರಣಕ್ಕೆ ಅಭಿವೃದ್ಧಿಶೀಲ ರಾಷ್ಟ್ರಗಳು ಈ ರಾಸಾಯನಿಕಗಳನ್ನು ನಿಷೇಧಿಸಿವೆ.ಹಾಗಾಗಿ ಹಡಗಿನ ಭಾಗಗಳನ್ನು ಬೇರ್ಪಡಿಸುವುದು ಪರಸರಕ್ಕೆ ಮಾರಕವಾಗುವ ಸಾಧ್ಯತೆಯಷ್ಟೇ ಅಲ್ಲದೆ ಆ ಕೆಲಸ ಮಾಡುವ ಕಾರ್ಮಿಕರ ಆರೋಗ್ಯದ ಮೇಲೂ ಪರಿಣಾಮಬೀರುವ ಅಪಾಯವೂ ಇದೆ.ಹಡಗು ಒಡೆಯುವ ವಿಶ್ವದ ಅತಿ ದೊಡ್ಡ ಯಾರ್ಡ್‌ಗಳು ಎಲ್ಲಿವೆ?

ಭಾರತದ ಅಲಂಗ್, ಪಾಕಿಸ್ತಾನದ ಗಡಾನಿ, ಬಾಂಗ್ಲಾದೇಶದ ಚಿತ್ತಗಾಂಗ್ ಹಾಗೂ ಟರ್ಕಿಯ ಅಲಿಯಾಗಾದಲ್ಲಿ ಹಡಗು ಒಡೆಯುವ ಅತಿ ದೊಡ್ಡ ಯಾರ್ಡ್‌ಗಳಿವೆ.ಹಳೆಯ ಹಡಗುಗಳನ್ನು ವಿಲೇವಾರಿ ಮಾಡಲು ಬೇರೇನಾದರೂ ವ್ಯವಸ್ಥೆ ಇದೆಯೇ?

ಹೌದು. ಶುಚಿಗೊಳಿಸಿದ ಹಳೆಯ ಹಡಗುಗಳನ್ನು ನೀರಿನಲ್ಲಿ ಮುಳುಗಿಸುತ್ತಾರೆ. ಜಲಚರಗಳಿಗೆ ಅದು ನೆಲೆದಾಣವಾಗಬಲ್ಲದು. ಕೆಲವೆಡೆ  ಹಳೆ ಹಡಗುಗಳನ್ನು ಮ್ಯೂಸಿಯಂ ಆಗಿ ಪರಿವರ್ತಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry