ಹಡಗು ರಕ್ಷಣೆ: ಚೀನಿಯರಲ್ಲಿ ಆತಂಕ

7

ಹಡಗು ರಕ್ಷಣೆ: ಚೀನಿಯರಲ್ಲಿ ಆತಂಕ

Published:
Updated:

ಸಿಡ್ನಿ (ಎಎಫ್‌ಪಿ):  ಅಂಟಾರ್ಕ್ಟಿಕಾ ಹಿಮ ಸಾಗರದ ಮಧ್ಯೆ ಸಿಲುಕಿದ್ದ ಎಂ.ವಿ ಅಕಾಡೆಮಿಕ್‌ ಶೋಕಾಲ್‌ಸ್ಕಿಯ್‌ ಹಡಗಿ­ನಲ್ಲಿದ್ದ 52 ಪ್ರಯಾಣಿಕರನ್ನು ಸುರಕ್ಷಿತ­ವಾಗಿ ಸ್ಥಳಾಂತರಿಸಿದ್ದಕ್ಕೆ ಆಸ್ಟ್ರೇಲಿ­ಯಾದ ಅಧಿ­ಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ತಮ್ಮ ದೇಶದ ಹಡಗು ಹಿಮ­ದಲ್ಲಿ ಸಿಕ್ಕಿಕೊಂಡಿ­ರುವುದಕ್ಕೆ ಚೀನಿ ಅಧಿಕಾರಿಗಳ ಆತಂಕ ಹೆಚ್ಚಿಸಿದೆ.ರಷ್ಯಾದ ಎಂ.ವಿ ಅಕಾಡೆಮಿಕ್‌ ಶೋಕಾ­ಲ್‌ಸ್ಕಿಯ್‌ ಹಡಗಿನಲ್ಲಿ ವಿಜ್ಞಾನಿ­ಗಳು ಶೋಧ ಯಾತ್ರೆ ಕೈಗೊಂಡಿದ್ದರು. ಆದರೆ, ಡಿಸೆಂಬರ್‌ 24ರಂದು ಅಂಟಾ­ರ್ಕ್ಟಿಕಾ ಹಿಮಸಾಗರದಲ್ಲಿ ಆವರಿಸಿ­ಕೊಂಡಿದ್ದ ಭಾರಿ ಹಿಮದಲ್ಲಿ ಹಡುಗು ಸಿಲುಕಿಕೊಂಡಿತ್ತು.ಎಂಟು ದಿನಗಳ ಬಳಿಕ ಗುರುವಾರ ಚೀನಾದ ಹಡಗಿನ ಮೂಲಕ  ಹೆಲಿಕಾಪ್ಟರ್‌ಗಳು ಕಾರ್ಯಾಚರಣೆ ನಡೆಸಿ ಪ್ರಯಾಣಿಕರನ್ನು ಆಸ್ಟ್ರೇಲಿಯಾದ ‘ಅರೊರಾ ಆಸ್ಟ್ರಾಲಿಸ್‌’ ಹಡಗಿಗೆ ಸುರ­ಕ್ಷಿತವಾಗಿ ಕೊಂಡೊಯ್ಯಲಾಗಿತ್ತು.  ಆದರೆ, ಇದೀಗ ಚೀನಾದ ಹಡಗು ಹಿಮದಲ್ಲಿ ಸಿಲುಕಿಕೊಂಡಿದ್ದು, ಹಲವು ದಿನಗಳವರೆಗೆ ಹಡಗು ಪ್ರಯಾಣ ಬೆಳೆಸಲು ಸಾಧ್ಯವಾಗುವುದಿಲ್ಲ’ ಎಂದು ಅಧಿಕಾರಿಗಳು  ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry