ಹಡಿನಬಾಳ ಶಾಲೆಗೆ ಶತಮಾನೋತ್ಸವ ಸಂಭ್ರಮ

7

ಹಡಿನಬಾಳ ಶಾಲೆಗೆ ಶತಮಾನೋತ್ಸವ ಸಂಭ್ರಮ

Published:
Updated:

ಹೊನ್ನಾವರ: ಪರತಂತ್ರದ ಕಾರಣ ದಾಸ್ಯದ ಕತ್ತಲೆಯಲ್ಲಿ ಮುಳುಗಿದ್ದ ಕಾಲದಲ್ಲಿ ಜ್ಞಾನದ ದೀವಿಗೆಯನ್ನು ಹೊತ್ತು 1910ರ ದಶಕದಲ್ಲಿ  ಅಸ್ತಿತ್ವಕ್ಕೆ ಬಂದಿದ್ದ ಹಡಿನಬಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೀಗ ಶತಮಾನೋತ್ಸವದ ಸಂಭ್ರಮದಲ್ಲಿದೆ.ಊರಿನ ಶಂಭುಲಿಂಗೇಶ್ವರ ದೇವಸ್ಥಾನದಲ್ಲೇ ತನ್ನ ಪ್ರಥಮ ನೆಲೆ ಕಂಡುಕೊಂಡಿದ್ದ ಶಾಲೆಗೆ ನಂತರದಲ್ಲಿ ಮೂರ್ತಿ ಹೆಗಡೆ ಹಾಗೂ ಹವ್ಯಕ ಸಂಘಕ್ಕೆ ಸೇರಿದ್ದ ಜಾಗ ಸಿಕ್ಕಿತು. ಶಾಲಾ ಆವರಣ ಹಾಗೂ ಬಾವಿ ನಿರ್ಮಾಣಕ್ಕೆ ಸಾವಿತ್ರಿ ಗೋವಿಂದ ಶೆಟ್ಟಿ ಮತ್ತು ಬೇತಾಳ ಶೆಟ್ಟಿ ಎಂಬುವವರು ತಮ್ಮ ಜಾಗ ನೀಡಿದರು. ಎಲ್ಲ ಜಾತಿ-–--ವರ್ಗಗಳಿಗೆ ಸೇರಿದ ಮಕ್ಕಳಿಗೆ ಇದೊಂದು ವಿದ್ಯಾ ಕೇಂದ್ರವಾಯಿತು.ಶತಮಾನೋತ್ಸವದ ಸಮಾರಂಭ ಇದೇ 11ರಂದು ನಡೆಯಲಿದ್ದು, ಶಾಸಕ ಮಂಕಾಳ ಎಸ್.ವೈದ್ಯ ಉದ್ಘಾಟನೆ ನೆರವೇರಿಸುವರು.ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಾಲಿನಿ ನಾಯ್ಕ ಅಧ್ಯಕ್ಷತೆ ವಹಿಸುವರು. ತಾ.ಪಂ. ಅಧ್ಯಕ್ಷೆ ಹರ್ಷಿಣಿ ಗೌಡ, ಸದಸ್ಯೆ ಸುಜಾತಾ ಹೆಗಡೆ, ಜಿ.ಪಂ. ಸದಸ್ಯ ಕೃಷ್ಣ ಗೌಡ, ಗ್ರಾ.ಪಂ. ಸದಸ್ಯರಾದ ಕೇಶವ ನಾಯ್ಕ ಸರೋಜಾ ಹೆಗಡೆ, ಸುಶೀಲಾ ಹಳ್ಳೀರ, ತಾ.ಪಂ. ಇಒ ಆರ್.ಡಿ. ನಾಯ್ಕ, ಬಿಇಒ ಜಿ.ಎಸ್. ಭಟ್ಟ, ಧರ್ಮಗುರು ಸಾಲ್ವದೋರ್ ಗೊನ್ಸಾಲ್ವಿಸ್ ಅತಿಥಿಗಳಾಗಿ ಭಾಗವಹಿಸುವರು.12ರಂದು ಬೆಳಿಗ್ಗೆ 10ರಿಂದ ವಿಚಾರ ಗೋಷ್ಠಿಗಳು ನಡೆಯಲಿದ್ದು ಜಿ.ಎಸ್. ಭಟ್ಟ ಅಗ್ನಿ ಹಾಗೂ ಡಾ. ಸತೀಶ ಭಟ್ಟ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 3.30ಕ್ಕೆ ನಡೆಯುವ ಸಮಾರೋಪ ಮತ್ತು ಸನ್ಮಾನ ಸಮಾರಂಭದಲ್ಲಿ ಸಂಸದ ಅನಂತಕುಮಾರ ಹೆಗಡೆ, ಡಾ. ಕೆ.ಎಸ್. ಭಟ್ಟ, ಡಿಡಿಪಿಐ ರೇವಣ­ಸಿದ್ದಪ್ಪ, ಬಿಇಒ ಜಿ.ಎಸ್. ಭಟ್ಟ, ಹವ್ಯಕ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಹೆಗಡೆ ಮೂರ್ತಿ, ನಿವೃತ್ತ ಪ್ರಾಧ್ಯಾಪಕ ಜಿ.ಐ. ಹೆಗಡೆ, ಶಿವರಾಮ ಹೆಗಡೆ ಭಾಗವಹಿಸುವರು.ವಿದ್ಯಾರ್ಥಿ ಪ್ರತಿಭಾ ಪ್ರದರ್ಶನ, ಹನ್ಮಿ ಗೌಡ ಅವರಿಂದ ಜನಪದ ಹಾಡು, ವಿ.ಆರ್. ಭಟ್ಟ ಬಳಗದವರಿಂದ ಭಕ್ತಿ ಸಂಗೀತ, ಊರ ಹಾಗೂ ಅತಿಥಿ ಕಲಾ­ವಿದರಿಂದ ಯಕ್ಷಗಾನ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry