ಗುರುವಾರ , ಮೇ 13, 2021
16 °C

ಹಣಕಾಸು ಸೇವೆ ವೃತ್ತಿಪರರ ಕೌಶಲ ಕೊರತೆ: ಸಮೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಹಣಕಾಸು ಸೇವೆಗಳ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಶೇ 70ರಷ್ಟು ಉದ್ಯೋಗಿಗಳು ಸಂವಹನ ಸಾಮರ್ಥ್ಯ ಮತ್ತು ವ್ಯವಹಾರ ಕೌಶಲ ಕೊರತೆ ಎದುರಿಸುತ್ತಿದ್ದಾರೆ. ಕೌಶಲ ತರಬೇತಿಗಾಗಿಯೇ ಕಂಪೆನಿಗಳು ದೊಡ್ಡ ಪ್ರಮಾಣದಲ್ಲಿ ಹಣ ವ್ಯಯಿಸುತ್ತಿವೆ ಎಂದು ಹಣಕಾಸು ಮಾರುಕಟ್ಟೆ ಸಲಹಾ ಸಂಸ್ಥೆ `ಎಲಿಮೆಂಟ್ಸ್ ಅಕಾಡೆಮಿಯಾ' ಹೇಳಿದೆ.ಹಣಕಾಸು ಸೇವೆಗಳ ಕ್ಷೇತ್ರದಲ್ಲಿನ ಶೇ 70ರಿಂದ ಶೇ 90ರಷ್ಟು ವೃತ್ತಿಪರರಿಗೆ ವ್ಯವಹಾರ ಕೌಶಲದ ಕೊರತೆ ಇದೆ. ಇದರಿಂದ ಹಲವು ಯೋಜನೆಗಳು ಕೈತಪ್ಪುತ್ತಿದ್ದು, ಕಂಪೆನಿಗೆ ಗರಿಷ್ಠ ಮಟ್ಟದಲ್ಲಿ ವರಮಾನ ನಷ್ಟವಾಗುತ್ತಿದೆ ಎಂದೂ ಈ ಅಧ್ಯಯನ ಗಮನ ಸೆಳೆದಿದೆ.ಒಟ್ಟು 110 ಕಂಪೆನಿಗಳು ಮತ್ತು 100 ಲೆಕ್ಕಪರಿಶೋಧಕರು ಈ ಸಮೀಕ್ಷೆಯಲ್ಲಿ ಭಾಗವಹಿಸ್ದ್ದಿದರು. ಕೌಶಲ ಕೊರತೆ ಇರುವುದರಿಂದ ಶೇ 5ರಿಂದ ಶೇ 7ರಷ್ಟು ಹಣಕಾಸು ವೃತ್ತಿಪರರು ಮಾತ್ರ ತಮ್ಮ ಕಂಪೆನಿಯ ಪ್ರಮಖ ನಿರ್ಣಯಗಳಲ್ಲಿ ಭಾಗವಹಿಸುತ್ತಾರೆ ಎಂದು ಎಲಿಮೆಂಟ್ಸ್ ಅಕಾಡೆಮಿಯ `ಸಿಇಒ' ನಿಶಾಂತ್ ಸಕ್ಸೇನಾ ಹೇಳಿದ್ದಾರೆ.`ಹಣಕಾಸು ಸೇವೆಗಳ ವೃತ್ತಿಪರರು ಕಂಪೆನಿಯೊಂದರ ಆಂತರಿಕ ಹೂಡಿಕೆದಾರರಿದ್ದಂತೆ. ಆಡಳಿತ ಮಂಡಳಿಗೆ ಅಗತ್ಯ ಸಲಹೆ ಸೂಚನೆ ನೀಡುತ್ತಾ ಕಂಪೆನಿಯ ಆರ್ಥಿಕ ಪ್ರಗತಿಗೆ ಶ್ರಮಿಸಬೇಕು. ಆದರೆ, ಇಂತಹ ಮಹತ್ವದ ಪಾತ್ರ ನಿರ್ವಹಿಸಬೇಕಾದವರೇ ಸಂವಹನ ಸಮಸ್ಯೆ ಮತ್ತು ವ್ಯವಹಾರಿಕ ಕೌಶಲ ಕೊರತೆ ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.ಆದರೆ, ಹಲವು ಕಂಪೆನಿಗಳು ಈ ಸಮೀಕ್ಷೆ ವರದಿಯಲ್ಲಿನ ಅಂಶಗಳನ್ನು ನಿರಾಕರಿಸಿವೆ. ಹಣಕಾಸು ಸೇವಾ ವೃತ್ತಿಪರರು ಕೌಶಲ ಕೊರತೆಯನ್ನೇನೂ ಎದುರಿಸುತ್ತಿಲ್ಲ. ಆದರೆ, ಅವರಿಗೆ ತರಬೇತಿಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.