ಹಣದುಬ್ಬರ ಅಲ್ಪ ಇಳಿಕೆ

7

ಹಣದುಬ್ಬರ ಅಲ್ಪ ಇಳಿಕೆ

Published:
Updated:

 ನವದೆಹಲಿ (ಪಿಟಿಐ):ಸತತ 2ನೇ ವಾರವೂ ಆಹಾರ ಹಣದುಬ್ಬರ  ಕುಸಿತ ದಾಖಲಿಸಿದ್ದರೂ, ತರಕಾರಿಗಳ ಬೆಲೆಗಳು ಏರುಗತಿಯಲ್ಲಿಯೇ ಇರುವುದರಿಂದ ಸರ್ಕಾರಕ್ಕೆ ಮತ್ತು ಜನಸಾಮಾನ್ಯರಿಗೆ ಯಾವುದೇ ಸಮಾಧಾನ ಉಂಟಾಗಿಲ್ಲ.ಜನವರಿ 8ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ, ಆಹಾರ ಹಣದುಬ್ಬರವು ಶೇ 16.91ರಿಂದ ಶೇ 1.39ರಷ್ಟು ಕಡಿಮೆಯಾಗಿ ಶೇ 15.52ಕ್ಕೆ ಇಳಿದಿದೆ.‘ಇದು ವಾರದ ಏರಿಳಿತವಾಗಿದೆ. ಕೆಲ ತರಕಾರಿ ಬೆಲೆಗಳು ಇನ್ನೂ ದುಬಾರಿ ಮಟ್ಟದಲ್ಲಿಯೇ ಇವೆ. ಇಳಿಕೆ ಪ್ರಮಾಣ ಗಮನಾರ್ಹವಾಗಿಲ್ಲ. ಆದರೆ, ಇಳಿಕೆ ಬೆಳವಣಿಗೆಯಂತೂ ಕಂಡು ಬರುತ್ತಿದೆ. ಸರ್ಕಾರವು ಪರಿಸ್ಥಿತಿ ಮೇಲೆ ನಿಗಾ ಇರಿಸಿದೆ. ಪೂರೈಕೆ ಸುಧಾರಣೆ ಸೇರಿದಂತೆ ಎಲ್ಲ ಬಗೆಯ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಪ್ರತಿಕ್ರಿಯಿಸಿದ್ದಾರೆ.ತರಕಾರಿ ಮತ್ತು ಈರುಳ್ಳಿ ಬೆಲೆಗಳು ಡಿಸೆಂಬರ್ ತಿಂಗಳ ಉದ್ದಕ್ಕೂ ಆಹಾರ ಬೆಲೆ ಏರಿಕೆಯು ಎರಡಂಕಿಯಲ್ಲಿಯೇ ಇರುವಂತೆ ಮಾಡಿವೆ. ತರಕಾರಿ ಬೆಲೆಗಳು  ಶೇ 65.39ರಷ್ಟು ಹೆಚ್ಚಳ ಕಂಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry