ಹಣದುಬ್ಬರ ಏರಿಕೆ

7

ಹಣದುಬ್ಬರ ಏರಿಕೆ

Published:
Updated:

ನವದೆಹಲಿ (ಪಿಟಿಐ): ಸಕ್ಕರೆ, ಖಾದ್ಯ ತೈಲ, ತರಕಾರಿ ಮತ್ತು ಸಿದ್ಧ ಉಡುಪುಗಳ ಬೆಲೆಯಲ್ಲಿ ಏರಿಕೆ ಆಗಿರುವುದರಿಂದ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರ ದರ ನವೆಂಬರ್ ತಿಂಗಳಲ್ಲಿ  ಶೇ 9.90ಕ್ಕೆ ಏರಿಕೆ ಕಂಡಿದೆ. ನವೆಂಬರ್‌ನಲ್ಲಿ ಪ್ರಮುಖವಾಗಿ ಖಾದ್ಯ ತೈಲದ ಬೆಲೆ ಶೇ 17.67ರಷ್ಟು ಹೆಚ್ಚಿದೆ. ಸಕ್ಕರೆ ಶೇ 17ರಷ್ಟು ತುಟ್ಟಿಯಾಗಿದೆ. ಬೇಳೆಕಾಳುಗಳ ಬೆಲೆ ಮಾತ್ರ ಶೇ 14ರಷ್ಟು ಕುಸಿದಿದೆ. ತರಕಾರಿ ಧಾರಣೆ ಶೇ 15ರಷ್ಟು ಹೆಚ್ಚಳವಾಗಿದೆ.  ಮೊಟ್ಟೆ, ಮೀನು ಮತ್ತು ಮಾಂಸದ ಧಾರಣೆ ಶೇ 11ರಷ್ಟು ಹೆಚ್ಚಿದೆ. ಈ ಅವಧಿಯಲ್ಲಿ ನಗರ ಹಣದುಬ್ಬರ ಶೇ 9.69ಕ್ಕೆ ಏರಿಕೆಯಾದರೆ, ಗ್ರಾಮೀಣ ಹಣದುಬ್ಬರ ಶೇ 9.97ಕ್ಕೆ ಕುಸಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry