ಹಣದುಬ್ಬರ: ಚಿದಂಬರಂ ಕಳವಳ

7

ಹಣದುಬ್ಬರ: ಚಿದಂಬರಂ ಕಳವಳ

Published:
Updated:

ಟೋಕಿಯೊ (ಪಿಟಿಐ):  `ಜಾಗತಿಕ ಆರ್ಥಿಕ ಅಸ್ಥಿರತೆ ಜತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಗರಿಷ್ಠ ಹಣದುಬ್ಬರ ದರ ದೇಶದ ಆರ್ಥಿಕ ಪ್ರಗತಿ ಮೇಲೆ ತೀವ್ರವಾದ ಪರಿಣಾಮ ಬೀರಿದೆ~  ಎಂದು ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದ್ದಾರೆ.`ಪ್ರವರ್ಧಮಾನಕ್ಕೆ ಬರುತ್ತಿರುವ ಹಲವು ದೇಶಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಗಗನಮುಖಿಯಾಗಿದೆ. ಇದರ ಜತೆಗೆ ಅಂತರರಾಷ್ಟ್ರೀಯ  ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚುತ್ತಿರುವುದು ಹಣದುಬ್ಬರ ಒತ್ತಡ ಹೆಚ್ಚುವಂತೆ ಮಾಡಿದೆ ಎಂದು ಅವರು ಇಲ್ಲಿ ನಡೆದ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)- ವಿಶ್ವಬ್ಯಾಂಕ್ ವಾರ್ಷಿಕ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದರು.ಹಣದುಬ್ಬರ ಭಾರತೀಯ ರಿಸರ್ವ್ ಬ್ಯಾಂಕ್ ಅಂದಾಜಿಸಿರುವ `ಹಿತಕರ ಮಟ್ಟ~ ಕ್ಕಿಂತಲೂ ಹೆಚ್ಚಿದೆ. ಇದರಿಂದ `ಆರ್‌ಬಿಐ~ ಕಳೆದ ಏಪ್ರಿಲ್‌ನಿಂದಲೂ ರೆಪೊ ದರ ತಗ್ಗಿಸದೆ ಶೇ8ರಷ್ಟು ಸರಾಸರಿ ಕಾಯ್ದುಕೊಂಡಿದೆ ಎಂದರು. ಕಳೆದ ಹಣಕಾಸು ವರ್ಷದಲ್ಲಿ `ಜಿಡಿಪಿ~ 9 ವರ್ಷಗಳ ಹಿಂದಿನ ಮಟ್ಟವಾದ ಶೇ 6.5ಕ್ಕೆ ಕುಸಿತ ಕಂಡಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ `ಜಿಡಿಪಿ~ ಶೇ 5.5ರಷ್ಟು ಪ್ರಗತಿ ಕಂಡಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry