ಶುಕ್ರವಾರ, ಏಪ್ರಿಲ್ 23, 2021
28 °C

ಹಣದುಬ್ಬರ ದರ ಭಾಗಶಃ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಫೆಬ್ರುವರಿ ತಿಂಗಳಾಂತ್ಯಕ್ಕೆ ಒಟ್ಟಾರೆ ಹಣದುಬ್ಬರವು ಶೇ 8.31ಕ್ಕೆ ಏರಿಕೆ ಕಂಡಿದೆ.ಆಹಾರ ಮತ್ತು ಇಂಧನ ಬೆಲೆಗಳು ಏರಿಕೆ ಕಂಡಿದ್ದರಿಂದ ಹಣದುಬ್ಬರವು  ಜನವರಿ ತಿಂಗಳ ಶೇ 8.23ಕ್ಕೆ ಹೋಲಿಸಿದರೆ ಭಾಗಶಃ ಹೆಚ್ಚಳಗೊಂಡಿದೆ.  ಕಳೆದ ವರ್ಷದ ಫೆಬ್ರುವರಿ ತಿಂಗಳಲ್ಲಿ ಶೇ 9.42ರಷ್ಟಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೆ ಅಲ್ಪಾವಧಿ ಬಡ್ಡಿ ದರಗಳನ್ನು ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿದೆ.ಹಾಲು, ಖಾದ್ಯ ತೈಲ, ತರಕಾರಿ, ಹಣ್ಣು ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ  ಏರಿಕೆಯಾಗಿರುವುದೂ ಹಣದುಬ್ಬರ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ. ಜಪಾನ್‌ಗೆ ಸುನಾಮಿ ಅಪ್ಪಳಿಸಿದ ಪರಿಣಾಮವಾಗಿ ಈಗ  ಬೇಡಿಕೆ ಕುಸಿದು ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 99 ಡಾಲರ್‌ಗಳಿಗೆ ಇಳಿದಿರುವುದು ವಿಶ್ವದಾದ್ಯಂತ ಬೆಲೆ ಏರಿಕೆಗೆ ಕಡಿವಾಣ ವಿಧಿಸಲಿದೆ ಎಂದೂ ಊಹಿಸಲಾಗಿದೆ.ಒಟ್ಟಾರೆ ಸಗಟು ಬೆಲೆ ಸೂಚ್ಯಂಕ ಆಧರಿಸಿದ ಹಣದುಬ್ಬರದಲ್ಲಿ ಶೇ 14ರಷ್ಟು ಪಾಲು ಹೊಂದಿರುವ ಆಹಾರ ಹಣದುಬ್ಬರವು     ಫೆಬ್ರುವರಿ ತಿಂಗಳಲ್ಲಿ ವರ್ಷದಿಂದ ವರ್ಷಕ್ಕೆ ಶೇ 10.65ರಷ್ಟು ಹೆಚ್ಚಳಗೊಂಡಿತ್ತು. ಸಗಟು ಬೆಲೆ ಸೂಚ್ಯಂಕದ ಅಂಕಿ ಅಂಶಗಳ ಪ್ರಕಾರ, ಪ್ರಾಥಮಿಕ ಸರಕುಗಳಾದ ಆಹಾರ,  ಆಹಾರೇತರ ಪದಾರ್ಥಗಳು ಮತ್ತು ಖನಿಜಗಳ ಬೆಲೆಗಳು ಶೇ 14.79ರಷ್ಟು ಏರಿಕೆ ಕಂಡಿದ್ದರೆ, ಕೆಲ ಆಹಾರ ಪದಾರ್ಥಗಳ ಬೆಲೆಗಳು ಇಳಿಕೆ ದಾಖಲಿಸಿವೆ.ಗೋಧಿ ಶೇ 1.67ರಷ್ಟು, ಬೇಳೆಕಾಳು ಶೇ 5.10 ಮತ್ತು  ಆಲೂಗಡ್ಡೆ ಶೇ 11.28ರಷ್ಟು ಅಗ್ಗವಾಗಿವೆ.ತಿಂಗಳ ಲೆಕ್ಕಾಚಾರದಲ್ಲಿ ಜೋಳವು ಶೇ 9ರಷ್ಟು, ಬಾರ್ಲಿ ಶೇ 4, ಮಾಂಸ ಶೇ 3, ಗೋಧಿ ಶೇ 2 ಮತ್ತು ಹಾಲು, ಮೆಕ್ಕೆಜೋಳ, ಕೋಳಿ ಬೆಲೆ ಶೇ 1ರಷ್ಟು ತುಟ್ಟಿಯಾಗಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.