ಹಣದುಬ್ಬರ ನಿಯಂತ್ರಣ: ಮತ್ತೆ ಬಡ್ಡಿ ದರ ಹೆಚ್ಚಳ

7

ಹಣದುಬ್ಬರ ನಿಯಂತ್ರಣ: ಮತ್ತೆ ಬಡ್ಡಿ ದರ ಹೆಚ್ಚಳ

Published:
Updated:

ನವದೆಹಲಿ (ಐಎಎನ್ಎಸ್): ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಣಾ ಕ್ರಮವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಕ್ಷಣದಿಂದ ಜಾರಿಗೆ ಬರುವಂತೆ ಮಂಗಳವಾರ 13ನೇ ಬಾರಿ ಅಲ್ಪಾವಧಿ ಬಡ್ಡಿ ದರಗಳಾದ ರೆಪೊ ಮತ್ತು ರಿವರ್ಸ್ ರೆಪೊ ದರಗಳನ್ನು ಶೇ 0.25ರಷ್ಟು ಹೆಚ್ಚಿಸಿದೆ.ಅಲ್ಪಾವಧಿ ಬಡ್ಡಿ ದರ ಹೆಚ್ಚಳದ ಹಿನ್ನೆಲೆಯಲ್ಲಿ, ಗೃಹ, ವಾಣಿಜ್ಯ, ವಾಹನ ಮತ್ತು ಕಾರ್ಪೊರೇಟ್  ಮೊದಲಾದ ಸಾಲಗಳು ಮತ್ತಷ್ಟು ತುಟ್ಟಿಯಾಗಿ ಜನತೆಗೆ ಹೊರೆಯಾಗಿದೆ. ಜೊತೆಗೆ ಸಾಲ ಪಡೆದವರ ಮಾಸಿಕ ಕಂತುಗಳು (ಇಎಂಐ) ಹೆಚ್ಚಲಿದೆ.ಪರಿಷ್ಕೃತ ದರದಂತೆ ಬ್ಯಾಂಕುಗಳು `ಆರ್‌ಬಿಐ`ನಿಂದ ಪಡೆಯುವ ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ದರ `ರೆಪೊ` ಶೇ 8.25  ರಿಂದ 8.50ಕ್ಕೆ ಮತ್ತು `ರಿವರ್ಸ್ ರೆಪೊ` ದರ ಶೇ 7.25 ರಿಂದ 7.50 ಏರಿದೆ.

ಕಳೆದ ಮಾರ್ಚ್ 2010ರಿಂದ 13ನೇ ಬಾರಿ ಹಾಗೂ ಪ್ರಸಕ್ತ ಹಣಕಾಸು ವರ್ಷದಲ್ಲಿ ಐದನೇ ಬಾರಿ `ಆರ್‌ಬಿಐ` ಬಡ್ಡಿ ದರ ಏರಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry