ಸೋಮವಾರ, ಜೂನ್ 14, 2021
28 °C

ಹಣದುಬ್ಬರ ಸೂಚ್ಯಂಕ ಆಧರಿಸಿದ ಬಾಂಡ್‌ಗೆ ನೀರಸ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಪಿಟಿಐ): ಜನಸಾಮಾನ್ಯರ ಉಳಿತಾಯವನ್ನು ಹಣದುಬ್ಬರದಿಂದ ರಕ್ಷಿಸಲು ಭಾರ­ತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಡಿಸೆಂಬರ್‌ನಲ್ಲಿ ಮಾರು­ಕಟ್ಟೆಗೆ ಬಿಡುಗಡೆ ಮಾಡಿದ್ದ ‘ಹಣದುಬ್ಬರ ಸೂಚ್ಯಂಕ ಆಧರಿಸಿದ ಬಾಂಡ್‌’ಗಳಿಗೆ ಸಣ್ಣ ಹೂಡಿಕೆದಾ­ರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.ಈ ಬಾಂಡ್‌ಗಳು ಡಿಸೆಂಬರ್‌ನ ಲ್ಲಿಯೇ ಮಾರು­ಕಟ್ಟೆಗೆ ಬಿಡುಗಡೆಯಾಗಿ ದ್ದರೂ, ಈವರೆಗೂ ಹೂಡಿಕೆದಾರರನ್ನು ಸೆಳೆಯುವಲ್ಲಿ ಬಹುತೇಕ ವಿಫಲವಾಗಿವೆ.ಈ ಹಿನ್ನೆಲೆಯಲ್ಲಿ, ಇದೀಗ ಸಣ್ಣ ಹೂಡಿಕೆ ದಾರರನ್ನು ಸೆಳೆಯಲು ‘ಆರ್‌ಬಿಐ’ ಬ್ಯಾಂಕುಗಳಿಗೆ ಹೆಚ್ಚುವರಿ ಉತ್ತೇಜನ ಕೊಡುಗೆ ಪ್ರಕಟಿಸಿದೆ. ಮಾರ್ಚ್‌ ಅಂತ್ಯದ ವೇಳೆಗೆ ‘ರಾಷ್ಟ್ರೀಯ ಉಳಿ­ತಾಯ ಪತ್ರ’ಗಳ(ಎನ್‌ಎಸ್‌ಸಿ)  ಮೂಲಕ ₨100 ಕೋಟಿಗಿಂತ ಹೆಚ್ಚಿನ ಮೊತ್ತ ಸಂಗ್ರಹವಾದರೆ ಬ್ಯಾಂಕುಗಳಿಗೆ ಶೇ 0.5ರಷ್ಟು ಹೆಚ್ಚುವರಿ ಉತ್ತೇಜನ ಕೊಡುಗೆ ಲಭಿಸಲಿದೆ.ಮಾರ್ಚ್‌ 31 ಕೊನೆಯ ದಿನವಾಗಿದ್ದು, ಅದರೊಳಗೆ ಬ್ಯಾಂಕ್‌ ಶಾಖೆಗಳ ಮೂಲಕ ಸಾಧ್ಯವಾ­ದಷ್ಟು ಬಾಂಡ್‌ಗಳನ್ನು ಮಾರಾಟ ಮಾಡು­ವಂತೆ ಸೂಚಿಸಿದೆ.ಈ ಸಾಲ ಪತ್ರಗಳ ಮೇಲೆ ವಾರ್ಷಿಕ ಕನಿಷ್ಠ ₨5 ಸಾವಿರದಿಂದ ಗರಿಷ್ಠ ₨5 ಲಕ್ಷದವರೆಗೆ ಹೂಡಿಕೆ ಮಾಡಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.