ಭಾನುವಾರ, ಮೇ 9, 2021
26 °C

ಹಣ್ಣು, ತರಕಾರಿ ಮಾರುಕಟ್ಟೆ ಇಂದು ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಳಬಾಗಲು: ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಸುತ್ತಮುತ್ತಲ ತಾಲ್ಲೂಕು ಹಾಗೂ ಜಿಲ್ಲೆಯ ರೈತರಿಗೆ ತರಕಾರಿ, ಹಣ್ಣುಗಳ ಸುಸಜ್ಜಿತ ಮಾರುಕಟ್ಟೆಯೊಂದು ಸಿದ್ಧಗೊಂಡಿದೆ. ರಸ್ತೆ, ಮೂಲಸೌಕರ್ಯ ಮತ್ತಿತರ ಅನುಕೂಲ ಇರುವ ಮಾರುಕಟ್ಟೆಯೊಂದು ಕಾರ್ಯಾರಂಭ ಮಾಡಬೇಕು ಎಂಬುದು ಈ ಭಾಗದ ರೈತರ ಬಹು ದಿನಗಳ ನಿರೀಕ್ಷೆಯಾಗಿತ್ತು.ತಾಲ್ಲೂಕಿನ ಕಪ್ಪಲಮೊಡಗು ಗ್ರಾಮದ ರಾಷ್ಟ್ರೀಯ ಹೆದ್ದಾರಿ ನಾಲ್ಕಕ್ಕೆ ಹೊಂದಿಕೊಂಡಂತಿರುವ `ಎಂಜಿ-6 ಹಣ್ಣು ಮತ್ತು ತರಕಾರಿ ಸಗಟು ಮಾರುಕಟ್ಟೆ' ಖಾಸಗಿಯವರಿಂದ ನಿರ್ಮಾಣವಾಗಿದ್ದು, ಇಂದಿನಿಂದ ಕಾರ್ಯಾರಂಭವಾಗಲಿದೆ. ಇಲ್ಲಿನ ವಹಿವಾಟಿಗೆ ಅನುಕೂಲವಾಗುವ ಸಲುವಾಗಿ ರಾಷ್ಟ್ರೀಕೃತ ಬ್ಯಾಂಕ್‌ವೊಂದು ತನ್ನ ಶಾಖೆ ಆರಂಭಿಸಲಿದೆ. ವಾಹನ ನಿಲುಗಡೆಗೆ ಸ್ಥಳಾವಕಾಶ ಮಾಡಿದ್ದು, ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಬಂದವರು ತಂಗಲು ವ್ಯವಸ್ಥೆ ಮಾಡಲಾಗಿದೆ. ತರಕಾರಿ ಬೆಲೆ ಏರುಪೇರಾದಾಗ ಅವುಗಳ ಸಂರಕ್ಷಣೆಗೆ ಶೀತಲೀಕರಣ ಘಟಕ ಸಹ ಮಾಡಲಾಗಿದೆ.500 ಅಡಿ ಉದ್ದ ಹಾಗೂ 210 ಅಡಿ ಅಗಲ ವ್ಯಾಪಿಸಿರುವ ಈ ಮಾರುಕಟ್ಟೆ ಪ್ರದೇಶದಲ್ಲಿ ಎಲ್ಲ ರೀತಿ ಮೂಲಸೌಲಭ್ಯ ಒದಗಿಸಲಾಗಿದೆ. `ರೈತರು ಟೊಮೆಟೊ, ತರಕಾರಿ, ಹಣ್ಣನ್ನು ನೇರವಾಗಿ ತಂದು ಇಲ್ಲಿ ಮಾರಾಟ ಮಾಡಬಹುದು. ಅದಕ್ಕೆ ಸೂಕ್ತ ಮಾರುಕಟ್ಟೆ ಒದಗಿಸಲಾಗುವುದು. ರೈತರು ಮತ್ತು ವರ್ತಕರು ಇಬ್ಬರಿಗೂ ಅನುಕೂಲವಾಗಬೇಕು ಎಂಬ ದೃಷ್ಟಿಯಿಂದಲೇ ಇಲ್ಲಿ ಮಾರುಕಟ್ಟೆ ಆರಂಭಿಸಲಾಗಿದೆ' ಎಂದು ಮಾರುಕಟ್ಟೆ ನಿರ್ದೇಶಕರಾದ ಟೊಮೆಟೊ ಗೋಪಾಲ್, ಗಂಗಿರೆಡ್ಡಿ ತಿಳಿಸಿದ್ದಾರೆ.ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಸಚಿವ ಯು.ಟಿ.ಖಾದರ್, ಸಚಿವರಾದ ಕೃಷ್ಣಬೈರೇಗೌಡ, ಶಾಮನೂರು ಶಿವಶಂಕರಪ್ಪ, ಶಾಸಕರಾದ ಕೆ.ಆರ್.ರಮೇಶ್‌ಕುಮಾರ್, ಜಿ.ಮಂಜುನಾಥ್ ಸಮಾರಂಭದಲ್ಲಿ ಭಾಗವಹಿಸುವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.