ಹಣ್ಣು ಸಂರಕ್ಷಣಾ ತರಬೇತಿ

ಸೋಮವಾರ, ಜೂಲೈ 22, 2019
23 °C

ಹಣ್ಣು ಸಂರಕ್ಷಣಾ ತರಬೇತಿ

Published:
Updated:

ಬೆಂಗಳೂರು: ಲಾಲ್‌ಬಾಗ್‌ನಲ್ಲಿರುವ ತೋಟಗಾರಿಕೆ ಇಲಾಖೆಯು ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಇದೇ 7 ರಿಂದ 18 ವರೆಗೆ ಮಹಿಳೆಯರಿಗೆ ಹಣ್ಣು ಮತ್ತು ತರಕಾರಿ ಸಂರಕ್ಷಣಾ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.ತರಬೇತಿಯು ಕಚೇರಿ ದಿನಗಳಲ್ಲಿ ಮಾತ್ರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.30 ರವರೆಗೆ ನಡೆಯಲಿದ್ದು, ಜ್ಯೂಸ್, ಜಾಮ್, ಉಪ್ಪಿನಕಾಯಿ ಇತ್ಯಾದಿಗಳ ತಯಾರಿಕೆಯ ಬಗ್ಗೆ ತರಬೇತಿ ನೀಡಲಾಗುವುದು. ದೂರವಾಣಿ: 2656 4538.ಯೋಗ ಶಿಬಿರ

ಯೋಗ ಭಾರತಿ ಅಷ್ಟಾಂಗ ಯೋಗ ಶಿಕ್ಷಣ ಕೇಂದ್ರವು ಜೂನ್ 18 ಮತ್ತು 19 ರಂದು ಉಚಿತ ಮಾನಸಿಕ ಒತ್ತಡ ನಿರ್ವಹಣೆ ಕುರಿತ ವಿಶೇಷ ಯೋಗ ಶಿಬಿರವನ್ನು ಆಯೋಜಿಸಿದೆ.ಶಿಬಿರವು ಭಾರತಿ ವಿದ್ಯಾಲಯ ಆವರಣ, 5ನೇ ಮುಖ್ಯರಸ್ತೆ, ಆರ್.ಪಿ.ಸಿ.ಬಡಾವಣೆ, ವಿಜಯನಗರ ಇಲ್ಲಿ ಸಂಜೆ 6 ರಿಂದ 7.30 ರವರೆಗೆ ನಡೆಯಲಿದೆ. ಮೊಬೈಲ್ ಸಂಖ್ಯೆ: 94493 05546.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry