ಶುಕ್ರವಾರ, ಮೇ 14, 2021
35 °C

ಹಣ ಗಳಿಕೆ ಜೀವನದ ಮುಖ್ಯ ಗುರಿಯಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮದುರ್ಗ: ಹಣ ಗಳಿಕೆಯೊಂದೇ ಜೀವನದ ಗುರಿಯಲ್ಲ. ಆದರ್ಶ ದಂಪತಿ ಗಳಾಗಿ ನೆಮ್ಮದಿಯಿಂದ ಬದುಕುವುದೇ ನಿಜವಾದ ಜೀವನ ಎಂದು ಜೆ.ಸಿ.ಐ ವಲಯ ಅಧ್ಯಕ್ಷೆ ಡಾ. ಮಾಧವಿದೇವಿ ಹೇಳಿದರು.ಸ್ಥಳೀಯ ಜೆ.ಸಿ.ಐ. ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಆದರ್ಶ ದಂಪತಿ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜೀವನದಲ್ಲಿ ಸುಖ ದುಃಖ ಹಾಗೂ ಸರಸ ವಿರಸಗಳು ಸಾಮಾನ್ಯ. ಅವುಗ ಳನ್ನು ಸಮಾನವಾಗಿ ಸ್ವೀಕರಿಸಿದಾಗ ಮಾತ್ರ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಿದೆ. ಕಷ್ಟಪಟ್ಟು ದುಡಿದು ಜೀವನ ಸಾಗಿಸಿದರೆ ಸುಂದರ ಜೀವನ ನಡೆಸಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.ಅಂತರರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್,  ಸಿಂಡಿಕೇಟ್ ಬ್ಯಾಂಕಿನ ಅಶೋಕಕುಮಾರ ಶೆಟ್ಟಿ ಮಾತನಾಡಿ ದರು.ಜೆ.ಸಿ.ಐ. ಸ್ಥಳೀಯ ಘಟಕದ ಅಧ್ಯಕ್ಷ ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾ ಡಿದರು.

ಕಾರ್ಕಳ ಜೆ.ಸಿ.ಐ. ಪೂರ್ವಾಧ್ಯಕ್ಷ ಮಾಧವ ಎಂ.ಕೆ. ಹೊತಪೇಟ ಅಧ್ಯಕ್ಷ ಡಾ. ಕೇದರನಾಥ ದಂಡಿನ, ಡಾ. ಗುರುಬಸವರಾಜ ಉಪಸ್ಥಿತರಿದ್ದರು.ಸ್ಪರ್ಧೆಯಲ್ಲಿ 59 ದಂಪತಿ ಭಾಗವಹಿಸಿದ್ದರು. ಸುರೇಶ ಕಲ್ಲೂರ ದಂಪತಿ (ಪ್ರಥಮ ಪ್ರಶಸ್ತಿ), ಎಂ.ಎಸ್. ಧನ್ನೂರ (ದ್ವಿತೀಯ ಪ್ರಶಸ್ತಿ) ಹಾಗೂ  ಈರಣ್ಣ ತವಸಿ ದಂಪತಿ (ತೃತೀಯ) ಪ್ರಶಸ್ತಿ ಪಡೆದುಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.