ಹಣ ಗಳಿಸಿ, ಉಳಿಸಿ, ಸತ್ಕಾರ‌್ಯಕ್ಕೆ ಬಳಸಿ: ಸುತಾರ

ಶನಿವಾರ, ಜೂಲೈ 20, 2019
24 °C

ಹಣ ಗಳಿಸಿ, ಉಳಿಸಿ, ಸತ್ಕಾರ‌್ಯಕ್ಕೆ ಬಳಸಿ: ಸುತಾರ

Published:
Updated:

ನರಗುಂದ:  ಕಾಯಕವು ತನ್ನದೇ ಆದ ಮಹತ್ವ ಪಡೆಯುವ ಮೂಲಕ ಜೀವನ ನಡೆಸಲು ಅವಶ್ಯವಾಗಿದೆ. ಇದರಿಂದ ಗಳಿಸಿದ ಹಣದಲ್ಲಿ ಸ್ವಲ್ಪವಾದರೂ ಉಳಿಸಿ ಅದನ್ನು ಸತ್ಕಾರ‌್ಯಕ್ಕೆ ಬಳಸಿದಾಗ ಜೀವನ  ಸಾರ್ಥಕವಾಗುತ್ತದೆ ಎಂದು ಮಹಾಲಿಂಗಪೂರ ಸೂಫಿ  ಸಂತ ಇಬ್ರಾಹಿಂ ಸುತಾರ ಹೇಳಿದರು.  ಬುಧವಾರ ರಾತ್ರಿ ಪತ್ರಿವನಮಠದ  ಶರಣಬಸವದೇವರ ಪಟ್ಟಾಧಿಕಾರ ಮಹೋತ್ಸವದ ಉದ್ಘಾಟನಾ  ಸಮಾರಂಭದ ನೇತೃತ್ವ ವಹಿಸಿ  ಅವರು ಮಾತನಾಡಿದರು.  ಸರ್ವಜ್ಞ ಹೇಳಿದಂತೆ ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ  ಎಂಬುದು ಚಿರಂತನ ಸತ್ಯ. ಆದ್ದರಿಂದ   ದಾನ ಮಾಡುವ ಮೂಲಕ ಧರ್ಮ ಸಂಪಾದಿಸಿ ಮೋಕ್ಷ ಪಡೆದು ಶ್ರೇಷ್ಠರಾಗಬೇಕಾಗಿದೆ.  ಇಸ್ಲಾಂ ಧರ್ಮ ದಲ್ಲಿ ಜಕಾತ್ ಈ ರೂಪದಲ್ಲಿದ್ದು ಹಕ್ಕಿ ನಂತೆ ದಾನ ಮಾಡಲಾಗುತ್ತದೆ. ಇದರಿಂದ ಸಮಾಜ ಸೇವೆಯಂತಾಗಿ ಸಾರ್ಥಕ ಬದುಕು ನಡೆಸಲು ಸಾಧ್ಯ ಎಂದು ಹೇಳಿದರು.ಸಮಾರಂಭ ಉದ್ಘಾಟಿಸಿದ ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀ ಜಯಬಸವ ಮೃತ್ಯುಂಜಯ ಸ್ವಾಮೀಜಿ,  ವಿಶಿಷ್ಟ ಸಂಸ್ಕೃತಿ ಹೊಂದುವ ಮೂಲಕ ತನ್ನದೇ ಆದ ಕೊಡುಗೆ ನೀಡಿರುವ ಭಾರತವು ಧರ್ಮ ಸಂಪಾದನೆಯ ನೆಲೆವೀಡಾಗಿದೆ. ಸ್ವಾಮೀಜಿಗಳಾದವರು ಸಮಾಜದ ಮಕ್ಕಳಿದ್ದಂತೆ. ಅವರ ಪಾಲನೆ ಪೋಷಣೆ ಸರ್ವಜನರ ಮೇಲಿದೆ ಎಂದರು. ಪತ್ರಿವನ ಮಠವು ಸರ್ವಧರ್ಮದ ಸಮನ್ವಯ ಕೇಂದ್ರ ಎಂದು ಶ್ಲಾಘಿಸಿದರು.ಸಾನ್ನಿಧ್ಯ ವಹಿಸಿದ್ದ ಕಿಲ್ಲಾ  ತೋರಗಲ್ ಮಠದ ಚನ್ನಮಲ್ಲ ಶಿವಾಚಾರ‌್ಯರು, ಶರಣುದೇವರು, ಅವರಾದಿಯ ಮೃತ್ಯುಂಜಯ ಸ್ವಾಮೀಜಿ, ನವಲಗುಂದದ ಬಸವಲಿಂಗ ಸ್ವಾಮೀಜಿ ಮಾತನಾಡಿದರು. ಕಳೆದ 21 ದಿನಗಳಿಂದ ಪ್ರಭುಲಿಂಗಲೀಲೆ ಪ್ರವಚನ ಹೇಳಿದ ಬೆಟಗೇರಿಯ ಕುಮಾರ ವಿರುಪಾಕ್ಷ ಸ್ವಾಮೀಜಿ ಪ್ರವಚನದ ಮಂಗಲ ನುಡಿಯನ್ನಾಡಿದರು.ಕಾಡರಕೊಪ್ಪದ ದಯಾನಂದ ಸರಸ್ವತಿ ಸ್ವಾಮೀಜಿ, ಹುಬ್ಬಳ್ಳಿಯ ವಾಸುದೇವಾನಂದ ಸ್ವಾಮೀಜಿ, ಮಲ್ಲಾಪುರದ ಚಿದಾನಂದ ಸ್ವಾಮೀಜಿ, ಚಿಕ್ಕುಂಬಿಯ ನಾಗಲಿಂಗ ಸ್ವಾಮೀಜಿ, ಮುಗಳಕೋಡ ಮಠದ ಬಸವರಾಜ ಸ್ವಾಮೀಜಿ ನೇತೃತ್ವ ವಹಿಸಿದ್ದರು.  ಮಹಾದ್ವಾರ ನಿರ್ಮಾಣಕ್ಕೆ ಕೊಡುಗೆ ನೀಡಿದ ಗುತ್ತಿಗೆದಾರ ಬಿ. ಎನ್. ಪಾಟೀಲ, ಪುರಸಭೆ ಸದಸ್ಯ  ಪ್ರಕಾಶ ಪಟ್ಟಣಶೆಟ್ಟಿ ಹಾಗೂ ಫಕೀರಪ್ಪ ಮುಳ್ಳೂರವರನ್ನು ಸನ್ಮಾನಿಸಲಾಯಿತು.ತುಲಾಭಾರ: ತಲೆ ಮೊರಬದ ಅಕ್ಕನ ಬಳಗದವರಿಂದ ತುಲಾಭಾರ ಸೇವೆ ನೆರವೇರಿತು.

ಗುರುನಾಥ ಶಾಸ್ತ್ರಿಗಳು ನಿರೂಪಿಸಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry