ಮಂಗಳವಾರ, ಅಕ್ಟೋಬರ್ 22, 2019
22 °C

ಹಣ ದುರುಪಯೋಗ: ಸಚಿನ್ ಮೀಗ ವಿರುದ್ಧ ದೂರು

Published:
Updated:

ಚಿಕ್ಕಮಗಳೂರು: ಕಳೆದ ಕೆಲವು ತಿಂಗಳ ಹಿಂದೆ ಶೃಂಗೇರಿ ಪಟ್ಟಣದಲ್ಲಿ ನಡೆದ ಗಲಾಟೆಯೊಂದರಲ್ಲಿ ಗಾಯಗೊಂಡಿದ್ದ ಕಾಂಗ್ರೆಸ್ ಮುಖಂಡರೊಬ್ಬರ ಚಿಕಿತ್ಸೆಗೆ ಹಣ ಬೇಕೆಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಬಳಿ ಪಡೆದಿರುವ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿ ಶೃಂಗೇರಿ ಯುವ ಕಾಂಗ್ರೆಸ್ ಮುಖಂಡರು ದೂರು ನೀಡಿದರು.ಗುರುವಾರ ಬೆಳಿಗ್ಗೆ ನಗರದಲ್ಲಿ ವಾಸ್ತವ್ಯ ಹೂಡಿದ್ದ ಡಾ.ಜಿ.ಪರಮೇಶ್ವರ್ ಭೇಟಿ ಮಾಡಿದ ಶೃಂಗೇರಿ ಯುವ ಕಾಂಗ್ರೆಸ್ ಮುಖಂಡರಾದ ನಿಖಿಲ್, ನಟರಾಜ್, ಸೌಭಾಗ್ಯ ಸೇರಿದಂತೆ ಹಲವು ಸ್ಥಳೀಯರು, ಜಿಲ್ಲೆಯ ಕಾಂಗ್ರೆಸ್ ಯುವ ಮುಖಂ ರೊಬ್ಬರು ಗಾಯಾಳು ಹೆಸರಿನಲ್ಲಿ ಪಡೆದಿರುವ ಹಣವನ್ನು ಪ್ರಮೋದ್‌ಗೆ ನೀಡಿಲ್ಲ ಎಂದು ದೂರು ನೀಡಿದ್ದಾರೆ.ಬಜರಂಗದಳ ಮತ್ತು ಯುವ ಕಾಂಗ್ರೆಸ್ ನಡುವೆ ನಡೆದ ಗಲಾಯಲ್ಲಿ ಪಕ್ಷದ ಕಾರ್ಯ ಕರ್ತ ಪ್ರಮೋದ್ ಕಣ್ಣಿಗೆ ಪೆಟ್ಟು ಬಿದ್ದಿತ್ತು. ಯುವ ಕಾಂಗ್ರೆಸ್ ಜಿಲ್ಲಾ ಘಟಕ ಮಾಜಿ ಅಧ್ಯಕ್ಷ ಸಚೀನ್ ಮೀಗಾ ಚಿಕಿತ್ಸೆಗಾಗಿ ಪರಮೇಶ್ವರ್ ಬಳಿ ಹಣ ಪಡೆದು, ಚಿಕಿತ್ಸೆಗೆ ನೀಡದೆ ಸತಾಯಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಶೃಂಗೇರಿ ಕಾಂಗ್ರೆಸ್ ಮುಖಂಡರ ಅಹವಾಲು ಆಲಿಸಿದ ಪರಮೇಶ್, ಈ ಬಗ್ಗೆ ಸಚೀನ್‌ಮೀಗಾ ಜತೆ ಚರ್ಚಿಸಿ, ಗಾಯಾಳು ಚಿಕಿತ್ಸೆಗೆ ಹಣ ನೀಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ, ಪರಿಸ್ಥಿತಿ ತಿಳಿಗೊಳಿಸಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)