ಹಣ ನೀಡಿದರೆ ಶೀಘ್ರ ನಿವೇಶನ

7

ಹಣ ನೀಡಿದರೆ ಶೀಘ್ರ ನಿವೇಶನ

Published:
Updated:

ಮಾಲೂರು: ಆಶ್ರಯ ಯೋಜನೆಯಡಿ ನಿವೇಶನ ಪಡೆಯಲು ಅರ್ಜಿ ಸಲ್ಲಿಸಿರುವ ಪರಿಶಿಷ್ಟ ಜಾತಿ-ಪಂಗಡದವರು 37,500 ಹಾಗೂ ಸಾಮಾನ್ಯ ವರ್ಗದ ಫಲಾನುಭವಿಗಳು 50 ಸಾವಿರ ರೂಪಾಯಿ ಪಾವತಿಸಿದರೆ ಶೀಘ್ರವಾಗಿ ಪುರಸಭೆ ವತಿಯಿಂದ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದೆಂದು ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ ತಿಳಿಸಿದರು.ಅವರು ಶನಿವಾರ ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ಲೋಕೋಪಯೋಗಿ ಇಲಾಖೆ ಕೈಗೊಂಡಿರುವ ಅಗ್ನಿ ಶಾಮಕ ಠಾಣೆ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.ಪಟ್ಟಣದ ಸಾರ್ವಜನಿಕರು ಈ ಹಿಂದೆ ನಿವೇಶನಗಳಿಗಾಗಿ ಅರ್ಜಿ ಸಲ್ಲಿಸಿ ಐದು ಸಾವಿರ ರೂಗಳನ್ನು ಪಾವತಿಸಿದ್ದರು. ಆದರೆ ಈಗ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಪರಿಶಿಷ್ಟ ಜಾತಿ-ಪಂಗಡದವರು ಬಡಾವಣೆಯ ಅಭಿವೃದ್ಧಿಗೆ 37,500 ರೂ ಹಾಗೂ ಸಾಮಾನ್ಯ ವರ್ಗದ ಜನತೆ 50,000 ರೂ ಪಾವತಿಸಬೇಕು. ಮೊದಲು ಪಾವತಿಸಿದವರಿಗೆ ಮೊದಲ ಆಧ್ಯತೆ ನೀಡಲಾಗುವುದು ಎಂದು ಅವರು ಹೇಳಿದರುಫಲಾನುಭವಿಗಳಿಗೆ ನಿವೇಶನಗಳಲ್ಲಿ ಮನೆ ನಿರ್ಮಾಣ ಮಾಡಲು ಪುರಸಭೆ ವತಿಯಿಂದ ರೂ.30ಸಾವಿರ, ರಾಜೀವಗಾಂಧಿ ವಸತಿ ಯೋಜನೆ ಯಡಿ ರೂ. 50 ಸಾವಿರ ಮತ್ತು ಬ್ಯಾಂಕಿನಿಂದ 50 ಸಾವಿರ ರೂಪಾಯಿ ಸಾಲ ನೀಡಲಾಗುವುದು ಎಂದು ತಿಳಿಸಿದರು.ಪಟ್ಟಣದಲ್ಲಿ 1.5 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾದ ಆಗ್ನಿ ಶಾಮಕ ಠಾಣೆಯನ್ನು ನಿರ್ಮಿಸಲಾಗುತ್ತಿದೆ. 15 ವಸತಿ ಗೃಹಗಳು ಮತ್ತು ಕಚೇರಿ ಒಳಗೊಂಡ ಈ ಕಟ್ಟಡವನ್ನು 13 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಕಟ್ಟಡದ ಕಾಮಗಾರಿಯ ಗುಣಮಟ್ಟವನ್ನು ಸಾರ್ವಜನಿಕರು ಪರಿಶೀಲಿಸಬೇಕು. ಕಾಮಗಾರಿ ಕಳಪೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.ಬೆಂಗಳೂರು-ಮಾಲೂರು ಮುಖ್ಯ ರಸ್ತೆಯ ಹಾರೋಹಳ್ಳಿ ಕ್ರಾಸ್‌ನಿಂದ ಹೋಸೂರು ಮುಖ್ಯ ರಸ್ತೆಯ ರೈಲ್ವೆ ಸೇತುವೆಯವರೆಗೆ 40 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ವಿಸ್ತರಣೆ, ವಿಭಜಕ ಹಾಗೂ ಜೋಡಿ ದೀಪಗಳ    ಅಳವಡಿಸುವ ಕಾಮಗಾರಿ ಪ್ರಾರಂಭಿಸಲಾಗಿದೆ. ರೈಲ್ವೆ ಸೇತುವೆ ಬಳಿ  ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದರು.ತಹಶೀಲ್ದಾರ್ ಜಿ.ವಿ.ನಾಗರಾಜ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸಿ.ಎಂ.ನಾರಾಯಣಗೌಡ, ಜಿ.ಪಂ. ಸದಸ್ಯರಾದ ಯಲ್ಲಮ್ಮ, ರಾಮಸ್ವಾಮಿರೆಡ್ಡಿ, ತಾ.ಪಂ. ಸದಸ್ಯರಾದ ಎಸ್.ಎಂ.ಲೋಕೇಶ್, ಪುಟ್ಟಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ವಿ.ವೇಮನ, ಪುರಸಭೆ ಅಧ್ಯಕ್ಷೆ ಗುಲಾಂ ಜಾನ್, ಉಪಾಧ್ಯಕ್ಷ ಎ.ರಾಜಪ್ಪ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ಆಂಜಿನಪ್ಪ,  ಎ.ಅಶ್ವತ್ಥರೆಡ್ಡಿ, ಎಂ.ಜಿ.ಮಧುಸೂಧನ್, ರಮೇಶ್, ಗುತ್ತಿಗೆದಾರ ರೂಪೇಶ್ ಮತ್ತು ಪುರಸಭಾ ಸದಸ್ಯರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry