ಬುಧವಾರ, ನವೆಂಬರ್ 13, 2019
21 °C

ಹಣ ಪಡೆಯಲು ನೂಕುನುಗ್ಗಲು !

Published:
Updated:

ನರಗುಂದ: ನಾಮಪತ್ರ ಸಲ್ಲಿಸುವ ಅಂತಿಮ ದಿನವಾದ ಬುಧವಾರ ಪಕ್ಷೇತರ ಅಭ್ಯರ್ಥಿ ವರ್ತೂರ ರಮಾನಂದರು ವಿವಿಧ ಹಳ್ಳಿಗಳಿಂದ ಜನರನ್ನು ಕರೆಯಿಸಿದ್ದರು. ಆದರೆ ಅವರಿಗೆ ಬಸವೇಶ್ವರ ಸಮುದಾಯ ಭವನದ ಎದುರು  ಅವರ ವಾಹನಗಳಿಗೆ ರಮಾನಂದ ಬೆಂಬಲಿಗರು ಬಾಡಿಗೆ ಹಣ ನೀಡುತ್ತಿರುವಾಗ ಬಾರಿ ನೂಕು ನುಗ್ಗಲು ಉಂಟಾದ ಘಟನೆ ನಡೆದಿದೆ.ವಿಷಯ ತಿಳಿದ ಚುನಾವಣಾ ನೀತಿ ಸಂಹಿತೆ ಅಧಿಕಾರಿ ಬಿ.ವಿ.ಪಾಟೀಲ, ಸಂಚಾರಿ ಅಧಿಕಾರಿ ವಿ.ವೈ.ಹುಣಸಿಕಟ್ಟಿ ಆಗಮಿಸಿ ಪರಿಶೀಲನೆ ನಡೆಸಿದರು. ನೂಕು ನುಗ್ಗಲು ಉಂಟಾದ ಘಟನೆ ಕುರಿತು ಇದೇ ಅಧಿಕಾರಿಗಳು  ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಸಿಪಿಐ ಪ್ರಶಾಂತ ಸಿದ್ದನಗೌಡ್ರ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.ಈ ಕುರಿತು ಮಾತನಾಡಿದ ಚುನಾವಣಾ ನೀತಿ ಸಂಹಿತೆ ಅಧಿಕಾರಿ ಬಿ.ವಿ.ಪಾಟೀಲ ` ವರ್ತೂರು ರಮಾನಂದರ ಬೆಂಬಲಿಗರು  ಬಾಡಿಗೆ ಹಣ ನೀಡುತ್ತಿರುವುದನ್ನು ಚಿತ್ರೀಕರಿಸಲಾಗಿದೆ. ಇದರ ಪ್ರತಿಯನ್ನು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ. ಎಂದರು.

ಪ್ರತಿಕ್ರಿಯಿಸಿ (+)