ಹಣ ಬಿಡುಗಡೆಗೆ ಒತ್ತಾಯ

6

ಹಣ ಬಿಡುಗಡೆಗೆ ಒತ್ತಾಯ

Published:
Updated:

ಮಧುರೆ: ಇಲ್ಲಿನ ಕರ್ನಾಟಕ ಸಂಘವು ಕಾಮರಾಜ ವಿಶ್ವವಿದ್ಯಾಲಯದ ಸಮೀಪದಲ್ಲಿ ನಿರ್ಮಿಸುತ್ತಿರುವ ಕಟ್ಟಡವು ಪೂರ್ಣಗೊಳ್ಳುವ ಹಂತ ತಲುಪಿದೆ. ಬಾಕಿ ಉಳಿದ ಕೆಲಸವು ಹಣದ ಕೊರತೆಯಿಂದ ಕುಂಟುತ್ತಾ ಸಾಗಿದೆ.

ಕರ್ನಾಟಕ ಸರ್ಕಾರದ ಕನ್ನಡ -ಸಂಸ್ಕೃತಿ ಇಲಾಖೆಯಿಂದ ಕರ್ನಾಟಕ ಸಂಘಕ್ಕೆ ಬಿಡುಗಡೆಯಾಗಬೇಕಾಗಿರುವ 10 ಲಕ್ಷ ರೂ.ಗಳಲ್ಲಿ 5 ಲಕ್ಷ ರೂ. ಬಿಡುಗಡೆಯಾಗಿದ್ದು ಇನ್ನೂ 5 ಲಕ್ಷ ರೂ.ಗಳನ್ನು ಶೀಘ್ರದಲ್ಲಿ ಬಿಡುಗಡೆ ಮಾಡಿದ್ದಲ್ಲಿ ಕಟ್ಟಡವನ್ನು ಬೇಗನೆ ಪೂರ್ಣಗೊಳಿಸಬಹುದು ಎಂದು ಕರ್ನಾಟಕ ಸಂಘದ ಅಧ್ಯಕ್ಷ ಡಾ. ವಿ. ಮೋಹನ್ ತಿಳಿಸಿದರು.

ಅವರು ಇಲ್ಲಿನ ಕರ್ನಾಟಕ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿ ಸಂಘದ ವಿವರ ನೀಡಿದರು.ಸಂಘದ ಕಾರ್ಯದರ್ಶಿ, ಮದುರೆ ಕಾಮರಾಜ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಂ.ಎನ್. ಮಹೇಶ ಅವರು ಉಪಸ್ಥಿತರಿದ್ದರು.  ಈ ಕೆಳಗಿನವರನ್ನು ನೂತನ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.  ಡಾ. ವಿ. ಮೋಹನ್ (ಅಧ್ಯಕ್ಷರು), ರಾಮಕೃಷ್ಣರಾವ್ (ಉಪಾಧ್ಯಕ್ಷರು)-  ಕೆ. ಕೃಷ್ಣ ಜೋಯಿಸ (ಖಜಾಂಚಿ), ಡಾ. ಎಂ.ಎನ್. ಮಹೇಶ (ಕಾರ್ಯದರ್ಶಿ), ಡಾ. ಎಸ್. ವಿರೂಪಾಕ್ಷ (ಜಂಟಿ ಕಾರ್ಯದರ್ಶಿ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry