ಮಂಗಳವಾರ, ಜೂನ್ 22, 2021
28 °C

ಹಣ ಹಿಂತಿರುಗಿಸಿದ ಆಟಗಾರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ವಿಶ್ವ ಹಾಕಿ ಸರಣಿಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಒಪ್ಪಂದ ಮಾಡಿಕೊಂಡು ಪಡೆದಿದ್ದ ಹಣವನ್ನು ಇಬ್ಬರು ಹಾಕಿ ಆಟಗಾರರು ಸಂಘಟಕರಿಗೆ ವಾಪಸ್ ನೀಡಿದ್ದಾರೆ.ತುಷಾರ್ ಖಾಂಡೇಕರ್ (60,000) ಹಾಗೂ ಶಿವೇಂದರ್ ಸಿಂಗ್ (90,000) ಹಣವನ್ನು ಸಂಘಟಕರಾದ ನಿಂಬಸ್ ಕಮ್ಯೂನಿಕೇಷನ್ ಅವರಿಗೆ ವಾಪಸ್ ಮಾಡಿದ್ದಾರೆ.ಆಟಗಾರರು ಯಾವುದೇ ಕಾರಣಕ್ಕೂ ಹಾಕಿ ಸರಣಿಯಲ್ಲಿ ಪಾಲ್ಗೊಳ್ಳಬಾರದು ಎಂದು ಹಾಕಿ ಇಂಡಿಯಾ ಎಚ್ಚರಿಗೆ ನೀಡಿತ್ತು. ಈ ಸರಣಿಗೆ ಭಾರತ ಹಾಕಿ ಫೆಡರೇಷನ್ ಸಹಭಾಗಿತ್ವ ವಹಿಸಿದ್ದು ಇದಕ್ಕೆ ಕಾರಣವಾಗಿತ್ತು.

`ಸರಣಿಯಲ್ಲಿ ಪಾಲ್ಗೊಳ್ಳುವ ಬಗ್ಗೆ ಸರಣಿಯ ಸಂಘಟಕರಿಗೆ ತಿಳಿಸಿದ್ದೆ.ಆದರೆ, ಇತರ ಪಂದ್ಯಗಳ ವೇಳಾಪಟ್ಟಿಯೂ ಇದೇ ವೇಳೆ ಬಂದ ಕಾರಣ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಆದ್ದರಿಂದ ಹಣವನ್ನು ವಾಪಸ್ ಮಾಡಿದ್ದೇನೆ. ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ~ ಎಂದು ತುಷಾರ್ ಹಾಗೂ ಸಿಂಗ್ ಪತ್ರದಲ್ಲಿ ಬರೆದಿದ್ದಾರೆ.ಮಾರ್ಚ್ 15ರಂದು ಹಣ ಹಿಂತಿರುಗಿಸಿದ್ದೇವೆ ಎಂದೂ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.