ಹಣ ಹೂಡಿಕೆಯ: ಆಕರ್ಷಕ ಯೋಜನೆ

7

ಹಣ ಹೂಡಿಕೆಯ: ಆಕರ್ಷಕ ಯೋಜನೆ

Published:
Updated:

ಹಣಕಾಸು ಉತ್ಪನ್ನಗಳ ಕೊಡುಗೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ವ್ಯಾಪಕ ಬದಲಾವಣೆಗಳು ಕಂಡು ಬರುತ್ತಿವೆ. ವಿಮೆ ನಿಯಂತ್ರಣ ಪ್ರಾಧಿಕಾರದ ಹೊಸ ನಿಯಮಾವಳಿಗೆ ಅನುಗುಣವಾಗಿ ಪಾಲಿಸಿಗಳನ್ನು ಬದಲಾಯಿಸಲಾಗುತ್ತಿದ್ದು, ಹಳೆಯ ಹಣಕಾಸು ಉತ್ಪನ್ನಗಳನ್ನು ಕೈಬಿಡಲಾಗುತ್ತಿದೆ. ಈ ವಿಷಯದಲ್ಲಿ ಜೀವ ವಿಮೆ ಉತ್ಪನ್ನಗಳು ಮುಂಚೂಣಿಯಲ್ಲಿ ಇವೆ. ಈ ಹಣಕಾಸು ಉತ್ಪನ್ನಗಳು ಕಡಿಮೆ ವೆಚ್ಚಕ್ಕೆ ದೊರೆಯುತ್ತಿವೆ. ಜೊತೆಗೆ ಹೂಡಿಕೆದಾರರ ಅನುಕೂಲಕ್ಕಾಗಿ ಇವುಗಳನ್ನು ಸಾಕಷ್ಟು ಸರಳಗೊಳಿಸಲಾಗಿದೆ. ಹೂಡಿಕೆದಾರರಿಗೆ ಹೆಚ್ಚು ಲಾಭ ತಂದುಕೊಡುವುದರತ್ತಲೂ ಗಮನ ಹರಿಸಲಾಗುತ್ತಿದೆ.ವಿಮೆ ಪಾಲಿಸಿಗಳನ್ನು ಈಗ ಮ್ಯೂಚುವಲ್ ಫಂಡ್‌ಗಳ ಜೊತೆ ಸ್ಪರ್ಧಿಸುತ್ತ ಬರೀ ಹೂಡಿಕೆ ಉತ್ಪನ್ನಗಳಂತೆ ಮಾರಾಟ ಮಾಡುತ್ತಿಲ್ಲ. ಅವುಗಳನ್ನು ಈಗ ನಿಜವಾಗಿಯೂ ವಿಮೆ ಪಾಲಿಸಿಗಳಂತೆಯೇ ಮಾರಾಟ ಮಾಡಲಾಗುತ್ತಿದೆ. ದೀರ್ಘಾವಧಿಯ ಉಳಿತಾಯ ಮತ್ತು  ನಷ್ಟದ ವಿರುದ್ಧ ರಕ್ಷಣೆಯನ್ನೂ ಒದಗಿಸುತ್ತಿವೆ.ಬದಲಾದ ಪರಿಸ್ಥಿತಿಗೆ ತಕ್ಕಂತೆ ‘ಐಎನ್‌ಜಿ ಲೈಫ್ ಇನ್ಶುರನ್ಸ್’ ಕೂಡ ಹೊಸ ಉತ್ಪನ್ನಗಳನ್ನು ಪರಿಚಯಿಸಿದೆ. ವಿಮೆ ಮತ್ತು ಪಿಂಚಣಿ ರಂಗದಲ್ಲಿ ಸಂಸ್ಥೆಯು ದೀರ್ಘಾವಧಿ ಉಳಿತಾಯ ಯೋಜನೆ ಜೊತೆಯಲ್ಲಿ ವಿಮೆ ಪಾಲಿಸಿಯ ಹಣ ಪಾವತಿಯಲ್ಲಿ ಸಾಕಷ್ಟು ಸರಳತೆ ಮತ್ತು ಆಯ್ಕೆ ಅವಕಾಶ ಒದಗಿಸಿದೆ. ಸಂಸ್ಥೆಯು ಹೊಸದಾಗಿ ಪರಿಚಯಿಸಿರುವ ‘ಐಎನ್‌ಜಿ ಏಸ್’ (ING ACE) ಮತ್ತು ಐಎನ್‌ಜಿ ಏಸ್ ಪೆನ್ಶನ್  (ING ACE Pension) -ಎರಡು ಹೊಸ ಕೊಡುಗೆಗಳು ಗ್ರಾಹಕರಿಗೆ ಹೆಚ್ಚು ಆಕರ್ಷಕವಾಗಿರಲಿವೆ.  ಈ ಹೂಡಿಕೆ ಯೋಜನೆಗಳು ಸರಳವಾಗಿದ್ದು ಗರಿಷ್ಠ ಪ್ರಮಾಣದ ಖಚಿತವಾದ ಲಾಭ ಒದಗಿಸಲಿದೆ. ಗ್ರಾಹಕರಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಿರಲಿವೆ.ವಿಮೆ ಇಳಿಸಿದ ಮೊತ್ತಕ್ಕೆ ವರಮಾನವು ಖಚಿತವಾಗಿ ಸೇರ್ಪಡೆಗೊಳ್ಳುತ್ತದೆ. ಹಣ ಹೂಡಿಕೆಯಲ್ಲಿ ಯಾವುದೇ ಬಗೆಯ ನಷ್ಟ ನಿರೀಕ್ಷಿಸಲು ಇಚ್ಛಿಸದವರಿಗೆ ಇದು ಹಿತಕರವಾಗಿರಲಿದೆ. ಎರಡೂ ಯೋಜನೆಗಳು 10 ವರ್ಷಗಳ ಅವಧಿಯದ್ದು ಆಗಿರುತ್ತವೆ. ದೀರ್ಘಾವಧಿಯ ಅಗತ್ಯಗಳಿಗಾಗಿ ಉಳಿತಾಯ ಮಾಡುವವರಿಗೆ ‘ಐಎನ್‌ಜಿ ಏಸ್ ಲೈಫ್’ ಉತ್ತಮ ಆಯ್ಕೆಯಾಗಿದೆ. ಮಕ್ಕಳ ಶಿಕ್ಷಣದ ವೆಚ್ಚ ಭರಿಸುವಂತಹ 10 ವರ್ಷಗಳ ನಂತರ ಎದುರಾಗುವ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಇದರಿಂದ ಸಾಧ್ಯ.ಕೇವಲ 3 ವರ್ಷಗಳವರೆಗೆ ಪ್ರೀಮಿಯಂ ಪಾವತಿಸಲು ಅವಕಾಶ ಇರುವುದರಿಂದ ಗ್ರಾಹಕರು ತಮ್ಮ ಸದ್ಯದ ಆದಾಯ ಆಧರಿಸಿ  ತಮ್ಮ ಹಣ ಪಾವತಿ ನಿರ್ಧರಿಸಬಹುದು. ಉದಾಹರಣೆಗೆ- 23 ವರ್ಷದ ಹೂಡಿಕೆದಾರ ವಾರ್ಷಿಕ ್ಙ 50 ಸಾವಿರದ ಪ್ರೀಮಿಯಂ ಆಯ್ಕೆ ಮಾಡಿಕೊಳ್ಳಬಹುದು. ಈ ಹೂಡಿಕೆಯು 80ಸಿ ಮತ್ತು ಸೆಕ್ಷನ್ 10 (10 ಡಿ)ಯಡಿ ಆದಾಯ ತೆರಿಗೆ ವಿನಾಯ್ತಿಯ ಲಾಭ ಪಡೆಯಲಿದೆ. ಇದರಿಂದ ಒಟ್ಟಾರೆ ಹೂಡಿಕೆಗೆ ಬರುವ ಲಾಭವು ಹೆಚ್ಚಲಿದೆ.ಹೂಡಿಕೆದಾರನೊಬ್ಬ ರೂ.50 ಸಾವಿರ ತೊಡಗಿಸಿದರೆ ಶೇ 30ರಷ್ಟು ತೆರಿಗೆ ಉಳಿತಾಯ ಸೇರಿದಂತೆ ವಾರ್ಷಿಕ ಶೇ 7.7ರಷ್ಟು ಲಾಭಾಂಶದೊಂದಿಗೆ ಹೂಡಿಕೆಯ ಪರಿಪಕ್ವತೆಯ  (ಮ್ಯಾಚುರಿಟಿ) ಮೊತ್ತವು ರೂ. 2 ಲಕ್ಷಕ್ಕಿಂತ ಹೆಚ್ಚಿಗೆ ಇರುತ್ತದೆ.ಪಿಂಚಣಿ ವಿಭಾಗದಲ್ಲಿ ಇತ್ತೀಚಿನ ಯೂಲಿಪ್ ಮಾರ್ಗದರ್ಶಿ ಸೂತ್ರದ ಅನ್ವಯ, ಒಟ್ಟು ಕೊಡುಗೆಗೆ ಪ್ರತಿಯಾಗಿ  ಶೇ 4.5ರಷ್ಟು ಖಾತರಿಯಾದ ಲಾಭ ನೀಡಬೇಕಾಗಿದೆ. ಪಿಂಚಣಿ ಯೋಜನೆ ಆಯ್ಕೆ ಅವಕಾಶ ನಿರ್ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ, ‘ಐಎನ್‌ಜಿ ಏಸ್ ಪೆನ್ಶನ್’ - ಇದೊಂದು ಸಾಂಪ್ರದಾಯಿಕ ಯೋಜನೆಯಾಗಿದ್ದು, ಆಕರ್ಷಕ ಸೌಲಭ್ಯಗಳನ್ನು ಒಳಗೊಂಡಿದೆ. ಮೂರು ವರ್ಷಗಳ ಪ್ರೀಮಿಯಂ ಅವಧಿ ಮತ್ತು 10 ವರ್ಷಗಳ ಅಂತ್ಯಕ್ಕೆ ಕೊನೆಗೊಳ್ಳಲಿದೆ.ಐಎನ್‌ಜಿ ಏಸ್ ಪೆನ್ಶನ್ ಯೋಜನೆಯಡಿ ಆಕಸ್ಮಿಕ ಸಾವು ಸಂಭವಿಸಿದ ಸಂದರ್ಭದಲ್ಲಿ  ವಿಮೆ ಇಳಿಸಿದ ಮೊತ್ತಕ್ಕೆ ಖಾತರಿ ನೀಡಿದ ಹೆಚ್ಚುವರಿ ಮೊತ್ತದ ಜತೆ ಅದುವರೆಗೆ ಪಾವತಿಸಿದ ಪ್ರೀಮಿಯಂನ ಎಲ್ಲ ಹಣವನ್ನು ಶೇ 3ರ ಬಡ್ಡಿ ದರದಲ್ಲಿ ಮರು ಪಾವತಿ ಮಾಡಲಾಗುವುದು. ನಿವೃತ್ತಿ ನಂತರದ ಬದುಕಿಗೆ ಆಸರೆಯಾಗಲು ಹಣದ ವ್ಯವಸ್ಥೆ ಮಾಡಿಕೊಳ್ಳಲು ಬಯಸುವವರಿಗೆ ಇದು ಉಪಯುಕ್ತ. ಇದುವರೆಗೆ ನಿವೃತ್ತಿ ಯೋಜನೆ ಕೈಗೊಳ್ಳದ ಹಿರಿಯ ನಾಗರಿಕರಿಗೆ ಇದು ಹೆಚ್ಚು ಪ್ರಯೋಜನಕಾರಿ.ಪ್ರೀಮಿಯಂ ಪಾವತಿಯನ್ನು 3 ವರ್ಷಗಳಿಗೆ ಮಾತ್ರ ಸೀಮಿತಗೊಳಿಸಿರುವುದರಿಂದ  45ರಿಂದ 55 ವರ್ಷದೊಳಗಿನವರೂ ಈ ಯೋಜನೆ ಪಡೆದುಕೊಳ್ಳಬಹುದು. ಪ್ರೀಮಿಯಂ ಪಾವತಿಸುವಾಗ  80ಸಿ ಸೆಕ್ಷನ್ ಅನ್ವಯ ಆದಾಯ ತೆರಿಗೆ ವಿನಾಯ್ತಿ ಮತ್ತು ಯೋಜನೆಯ ಅಂತ್ಯದಲ್ಲಿ  ಒಟ್ಟು ಮೊತ್ತದ ಒಂದು ಮೂರಾಂಶದಷ್ಟು ಮೊತ್ತವನ್ನು ತೆರಿಗೆ ಮುಕ್ತ ಮೊತ್ತವಾಗಿ ಇಲ್ಲವೇ ವರ್ಷಾಶನ ರೂಪದಲ್ಲಿ ಯೋಜನೆ ಅಂತ್ಯದ ಪೂರ್ಣ ಲಾಭ ಪಡೆದುಕೊಳ್ಳಬಹುದು.ಉದಾಹರಣೆಗೆ ರೂ.50 ಸಾವಿರ ಹೂಡಿಕೆ ಮಾಡಿದ್ದರೆ, ಮ್ಯಾಚುರಿಟಿ ಅಂತ್ಯದಲ್ಲಿ ಹೂಡಿಕೆಯ ಒಟ್ಟು ಮೊತ್ತವು ರೂ. 2.5ಲಕ್ಷಕ್ಕಿಂತ ಹೆಚ್ಚಾಗಿರುತ್ತದೆ. ಇದು ವಾರ್ಷಿಕ ಶೇ 9ರಷ್ಟು ಲಾಭದ ಭರವಸೆ ಮತ್ತು ಶೇ 30ರಷ್ಟು ತೆರಿಗೆ ಉಳಿತಾಯ ಒಳಗೊಂಡಿರುತ್ತದೆ. ಒಟ್ಟಾರೆ ಈ ಎರಡೂ ಉತ್ಪನ್ನಗಳು ಪಿಂಚಣಿ ಮತ್ತು ಜೀವ ವಿಮೆಯ ಆಕರ್ಷಕ ಸೌಲಭ್ಯಗಳನ್ನು ಒಳಗೊಂಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry