ಭಾನುವಾರ, ಮೇ 22, 2022
21 °C

ಹತಿಯಾ ವೀಕ್ಲಿ ಎಕ್ಸ್‌ಪ್ರೆಸ್ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ:  ಜಾರ್ಖಂಡ್‌ನ ರಾಂಚಿ ಜಿಲ್ಲೆಯ ಹತಿಯಾ-ಯಶವಂತಪುರ ನಡುವೆ ನೂತನ ವೀಕ್ಲಿ ಎಕ್ಸ್‌ಪ್ರೆಸ್ ರೈಲು ಇದೇ 4ರಿಂದ ಆರಂಭವಾಗಲಿದೆ.ಹತಿಯಾ ರೈಲು ನಿಲ್ದಾಣವನ್ನು ಗುರುವಾರ ಸಂಜೆ 6.20ಕ್ಕೆ ಬಿಡುವ ರೈಲು (ಸಂಖ್ಯೆ 18637/18638) ಶನಿವಾರ ಬೆಳಗಿನ ಜಾವ ಐದು ಗಂಟೆಗೆ ಯಶವಂತಪುರ ತಲುಪಲಿದೆ. ಮಂಗಳವಾರ ಮಧ್ಯಾಹ್ನ 12.30ಕ್ಕೆ ಯಶವಂತಪುರ ಬಿಟ್ಟು, ಗುರುವಾರ ಮಧ್ಯಾಹ್ನ 1.10ಕ್ಕೆ ಹತಿಯಾ ನಿಲ್ದಾಣ ತಲುಪಲಿದೆ. ಮಾರ್ಗಮಧ್ಯೆ ರೂರ್ಕೆಲಾ, ಜಾರ್ಸುಗುಡಾ ಜಂಕ್ಷನ್, ಸಂಬಲ್‌ಪುರ, ಬಾಲನಗಿರಿ, ತಿಟ್ಲಾಗರ್, ಕೆಸಿಂಗಾ, ರಾಯಗಡ, ಪಾರ್ವತಿಪುರಂ, ವಿಜಯನಗರಂ, ವಿಶಾಖಪಟ್ಟಣ, ಸಮಲ್‌ಕೋಟೆ, ರಾಜಮುಂಡ್ರಿ, ವಿಜಯವಾಡ, ನೆಲ್ಲೂರು, ಗುಡೂರು, ರೇಣಿಗುಂಟಾ, ತಿರುಪತಿ, ಪಾಕಾಳ, ಚಿತ್ತೂರು, ಕಟ್ಪಾಡಿ, ಜೋಲಾರ್‌ಪೇಟೆ ಮತ್ತು ಕೆ.ಆರ್.ಪುರಂ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.