ಹತ್ತಿ ಇಳುವರಿ ಶೇ 15 ಕುಸಿತ ಸಂಭವ: ಕೇಂದ್ರದ ಅಂದಾಜು

ಬುಧವಾರ, ಮೇ 22, 2019
33 °C

ಹತ್ತಿ ಇಳುವರಿ ಶೇ 15 ಕುಸಿತ ಸಂಭವ: ಕೇಂದ್ರದ ಅಂದಾಜು

Published:
Updated:

ಕೊಯಮತ್ತೂರು (ಪಿಟಿಐ): ಮುಂಗಾರು ಮಳೆ ಆರಂಭ ವೈಫಲ್ಯ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರದ ಚಟುವಟಿಕೆಯಲ್ಲಿ ಭಾರಿ ಹಿನ್ನಡೆಯಾಗಿದೆ. ಪ್ರಸಕ್ತ ಹಂಗಾಮಿನಲ್ಲಿ ದೇಶದ ಹತ್ತಿ ಎಕರೆವಾರು ಇಳುವರಿಯಲ್ಲಿ ಶೇ 10ರಿಂದ 15ರಷ್ಟು ಕುಸಿತವಾಗುವ ಸಂಭವವಿದೆ ಎಂದು ಕೇಂದ್ರ ಜವಳಿ ಸಚಿವಾಲಯ ಆಯುಕ್ತ ಎ.ಬಿ.ಜೋಷಿ ಹೇಳಿದ್ದಾರೆ.ಮಳೆ ವೈಫಲ್ಯದಿಂದಷ್ಟೇ ಹತ್ತಿ ಉತ್ಪಾದನೆ ಕಡಿಮೆ ಆಗುತ್ತಿಲ್ಲ. ಬೆಲೆ ಇಳಿಕೆ ಕಾರಣ ರೈತರೂ ಬೆಳೆ ಬದಲಿಸಿದ್ದಾರೆ. ಇದು ಸಹ ಉತ್ಪನ್ನ ಕುಸಿಯಲು ಕಾರಣವಾಗಿದೆ ಎಂದರು. ಹಾಗಿದ್ದೂ ಹತ್ತಿ ಆಧಾರಿತ ಜವಳಿ ಉದ್ಯಮವೇನೂ ಕಳವಳ ಪಡಬೇಕಾಗಿಲ್ಲ. ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಹತ್ತಿಯ ಲಭ್ಯತೆ ತಕ್ಕಮಟ್ಟಿಗೆ ಇದೆ ಎಂದು ಹೇಳಿದರು.`ಐಪಿಒ~ ಸುಧಾರಣೆಗೆ ಕ್ರಮ

ಜೈಪುರ (ಪಿಟಿಐ): ಆರಂಭಿಕ ಸಾರ್ವಜನಿಕ ಕೊಡುಗೆ(ಐಪಿಒ) ಕ್ಷೇತ್ರದ ಮಾರುಕಟ್ಟೆ ಸುಧಾರಣೆಗೆ ಸಂಬಂಧಿಸಿದಂತೆ  ಶೀಘ್ರದಲ್ಲೇ ಕೆಲವು ಕ್ರಮಗಳನ್ನು ಕೈಗೊಳ್ಳಲಿರುವುದಾಗಿ ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ (ಸೆಬಿ) ಹೇಳಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry