ಹತ್ತಿ ಇಳುವರಿ ಶೇ 2 ಇಳಿಮುಖ

ಬುಧವಾರ, ಮೇ 22, 2019
29 °C

ಹತ್ತಿ ಇಳುವರಿ ಶೇ 2 ಇಳಿಮುಖ

Published:
Updated:

ನವದೆಹಲಿ (ಪಿಟಿಐ): ಕಳೆದ `ಬೆಳೆ ವರ್ಷ~ದಲ್ಲಿ ದೇಶದ ಹತ್ತಿ ಇಳುವರಿಯಲ್ಲಿ ಶೇ 2ರಷ್ಟು ಇಳಿಕೆಯಾಗಿದ್ದು, ಹೆಕ್ಟೇರ್‌ಗೆ 491 ಕೆ.ಜಿ. ಉತ್ಪಾದನೆ ಆಗಿದೆ. ಹಾಗಿದ್ದೂ ದೇಶದ ಒಟ್ಟಾರೆ ಹತ್ತಿ ಉತ್ಪಾದನೆ 3.52 ಕೋಟಿ ಬೇಲ್‌ಗಳಿಗೆ ಹೆಚ್ಚಿದೆ.2010ರ ಜುಲೈ-2011ರ ಜೂನ್‌ನಡುವಿನ ಅವಧಿಯ ಬೆಳೆ ವರ್ಷದಲ್ಲಿ ಪ್ರತಿ ಹೆಕ್ಟೇರ್‌ನಲ್ಲಿನ ಹತ್ತಿ ಇಳುವರಿ 499 ಕೆ.ಜಿ.ಯಷ್ಟು ಇದ್ದಿತು. ಆದರೆ, ಒಟ್ಟಾರೆ ಹತ್ತಿ ಉತ್ಪಾದನೆ ಕೇವಲ 3.30 ಕೋಟಿ ಬೇಲ್‌ನಷ್ಟಿದ್ದಿತು ಎಂಬ ಅಂಕಿ-ಅಂಶಗಳನ್ನು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಇತ್ತೀಚೆಗೆ ಸಂಸತ್ತಿನಲ್ಲಿ ಮಂಡಿಸಿದರು.ಹತ್ತಿ ಬೆಳೆಗೆ ರೈತರು ಮಾಡುವ ವೆಚ್ಚದಲ್ಲಿಯೂ ಭಾರಿ ಪ್ರಮಾಣದಲ್ಲಿ (ಶೇ 31ರಷ್ಟು) ಏರಿಕೆಯಾಗಿದೆ. 2009-10ರಲ್ಲಿ ಪ್ರತಿ ಕ್ವಿಂಟಲ್ ಹತ್ತಿ ಇಳುವರಿಗೆ ರೂ. 2111 ವೆಚ್ಚವಾಗಿದ್ದರೆ, 2012-13ರಲ್ಲಿ ರೂ. 2772ಕ್ಕೆ ಮುಟ್ಟಿದೆ ಎಂದು ಸಚಿವರು ವಿವರ ನೀಡಿದ್ದಾರೆ.ಹತ್ತಿ ಬೆಳೆ ಉತ್ತೇಜನಕ್ಕಾಗಿ ಕೃಷಿ ಸಚಿವಾಲಯ 13 ರಾಜ್ಯಗಳಲ್ಲಿ `ಮಿನಿ ಮಿಷನ್ 2 ಆನ್ ಕಾಟನ್~ ಯೋಜನೆ ಜಾರಿಗೊಳಿಸಿದ್ದು, ಬಿತ್ತನೆ ಬೀಜ, ಕೃಷಿ ಯಂತ್ರೋಪಕರಣಗಳು, ಕಡಿಮೆ ನೀರು ಬಳಸಲು ನೆರವಾಗುವ ಉಪಕರಣಗಳು, ಜೈವಿಕ ಕೀಟನಾಶಕ ಮೊದಲಾದ ಸವಲತ್ತು ವಿತರಿಸಲಾಗುತ್ತಿದೆ ಎಂದಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry