ಬುಧವಾರ, ಮೇ 12, 2021
26 °C

ಹತ್ತಿ: ಉತ್ಪಾದನೆ ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ ದಾಖಲೆ ಪ್ರಮಾಣದ 36 ದಶಲಕ್ಷ ಟನ್ ಮೂಟೆಗಳಷ್ಟು  ಹತ್ತಿ ಉತ್ಪಾದನೆ ನಿರೀಕ್ಷಿಸಲಾಗಿದೆ.ಪ್ರತಿ ಮೂಟೆ 170 ಕೆ.ಜಿ ತೂಕ ಹೊಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟು ಉತ್ಪಾದನೆ ಈಗಾಗಲೇ ನಿಗದಿಪಡಿಸಿರುವ ಅಂದಾಜನ್ನು ಮೀರುವ ಸಾಧ್ಯತೆಗಳಿವೆ. ಕಳೆದ ವರ್ಷಕ್ಕಿಂತಲೂ ಶೇ 9ರಷ್ಟು ಹೆಚ್ಚಿನ ಉತ್ಪಾದನೆಯನ್ನು ಕೇಂದ್ರ ಹತ್ತಿ ಒಕ್ಕೂಟ ಅಂದಾಜಿಸಿದೆ. ಹತ್ತಿ ಸಲಹಾ ಮಂಡಳಿ ಪ್ರಸಕ್ತ ವರ್ಷ 35 ದಶಲಕ್ಷ ಟನ್‌ಗಳಷ್ಟು ಹತ್ತಿ ಉತ್ಪಾದನೆ ನಿರೀಕ್ಷಿಸಿದೆ. ಆದರೆ, ಭಾರತದ ಹತ್ತಿ ಒಕ್ಕೂಟ (ಸಿಎಐ) ಮಾಡಿರುವ ಅಂದಾಜು ಇದಕ್ಕಿಂತಲೂ ಹೆಚ್ಚಿದೆ.2010-11ನೇ ಸಾಲಿನಲ್ಲಿ ಒಟ್ಟು 33 ದಶಲಕ್ಷ ಟನ್‌ಗಳಷ್ಟು ಹತ್ತಿ ಉತ್ಪಾದನೆ ಮಾಡಲಾಗಿತ್ತು. ದೇಶದ ಸುಮಾರು 12 ದಶಲಕ್ಷ ಹೇಕ್ಟರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗುತ್ತಿದ್ದು, ಒಟ್ಟು ಉತ್ಪಾದನೆ ಶೇ 10ರಷ್ಟು ಹೆಚ್ಚುವ ನಿರೀಕ್ಷೆ ಇದೆ ಎಂದು  `ಸಿಎಐ~ ಅಧ್ಯಕ್ಷ ಧಿರೆನ್ ಸೇಠ್ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.