ಗುರುವಾರ , ಮೇ 13, 2021
16 °C

`ಹತ್ತಿ ಉದ್ದಿಮೆ: ವಿವರ ಸಲ್ಲಿಕೆ ಕಡ್ಡಾಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಹತ್ತಿ ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಘಟಕಗಳು ಹಾಗೂ ಹತ್ತಿ ವ್ಯಾಪಾರಸ್ಥರು ನಿಗದಿತ ನಮೂನೆಯಲ್ಲಿ ತಮ್ಮ ಘಟಕದ ವಿವರ, ವ್ಯವಹಾರ, ದಾಸ್ತಾನು ಕುರಿತ ಅಂಕಿ ಅಂಶಗಳ ವಿವರವನ್ನು ಜುಲೈ 15  ರೊಳಗೆ ಸಲ್ಲಿಕೆ ಮಾಡಬೇಕು ಎಂದು ಬೆಂಗಳೂರಿನ ಜವಳಿ ಆಯುಕ್ತರ ಕ್ಷೇತ್ರೀಯ ಕಾರ್ಯಾಲಯದ ಸಹಾಯಕ ನಿರ್ದೇಶಕ ಎನ್.ಎಸ್ ಕೃಷ್ಣಪ್ರಸಾದ್ ಹೇಳಿದರು.ಇಲ್ಲಿನ ಗಂಜ್ ಕಲ್ಯಾಣ ಮಂಟಪದಲ್ಲಿ ಗುರುವಾರ ಬೆಂಗಳೂರಿನಲ್ಲಿರುವ ಕೇಂದ್ರ ಜವಳಿ ಸಚಿವಾಲಯದ ಜವಳಿ ಆಯುಕ್ತರ ಕ್ಷೇತ್ರೀಯ ಕಾರ್ಯಾಲಯ ಹಾಗೂ ರಾಯಚೂರು ಗಂಜ್ ಮರ್ಚಂಟ್ಸ್ ಅಸೋಸಿಯೇಶನ್ ಸಂಯುಕ್ತ ಆಶ್ರಯದಲ್ಲಿ ಹತ್ತಿ ವ್ಯಾಪಾರಸ್ಥರು, ಜಿನ್ನಿಂಗ್ ಘಟಕ, ಪ್ರೆಸ್ಸಿಂಗ್ ಘಟಕ ಮಾಲೀಕರಿಗೆ ಆಯೋಜಿಸಿದ್ದ `ಅಂಕಿ ಅಂಶಗಳ ಸಲ್ಲಿಕೆ' ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ನೈಜ ಆಯವ್ಯಯ ತಃಖ್ತೆ  (ಬ್ಯಾಲೆನ್ಸ್ ಶೀಟ್) ತಯಾರಿಕೆ ಮತ್ತು ರಾಷ್ಟ್ರೀಯ ಹತ್ತಿ ವಿತರಣಾ ಯೋಜನೆ ನಿಗದಿಪಡಿಸುವ ಸಲುವಾಗಿ ಅಂಕಿ ಅಂಶ ಸಂಗ್ರಹಣೆ-2008 ಕಾಯ್ದೆಯಡಿ ಹತ್ತಿ ಜಿನ್ನಿಂಗ್ ಘಟಕ, ಪ್ರೆಸ್ಸಿಂಗ್ ಘಟಕ, ಹತ್ತಿ ವ್ಯಾಪಾರಸ್ಥರು ಅಂಕಿ ಅಂಶ ಸಲ್ಲಿಕೆ ಕಡ್ಡಾಯವಾಗಿದೆ. ಹೀಗಾಗಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂಕಿ ಅಂಶ ಸಲ್ಲಿಕೆಯಿಂದ ಯಾವುದೇ ರೀತಿ ಬಾಧಕವಿಲ್ಲ. ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಹತ್ತಿ ಬೆಳೆಗಾರರು, ಉದ್ದಿಮೆದಾರರ ನಡುವೆ ಸಮನ್ವಯತೆ ಬೆಳೆಸುವ ಉದ್ದೇಶವೂ ಇದಾಗಿದೆ ಎಂದು ಸ್ಪಷ್ಟಪಡಿಸಿದರು.ಗಂಜ್ ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಯು ವೆಂಕಟರಮಣರೆಡ್ಡಿ, ಆರ್ ಕುರುಮಾರೆಡ್ಡಿ, ಸಿಸಿಐ ಹುಬ್ಬಳ್ಳಿ ವಲಯ ಸಹ ವ್ಯವಸ್ಥಾಪಕ ಸಂಜಯ ತ್ರಿವೇದಿ, ಅಶೋಕ ಕುಮಾರ ವರ್ಮಾ ಇದ್ದರು. ಸಿದ್ದನಗೌಡ ಸ್ವಾಗತಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.