ಮಂಗಳವಾರ, ಏಪ್ರಿಲ್ 20, 2021
32 °C

ಹತ್ತಿ ಕೈಮಗ್ಗ ನೇಕಾರರ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಜಿಲ್ಲೆಯ ಎಲ್ಲ ತಾಲ್ಲೂಕಿನಲ್ಲಿ ನೇಕಾರ ವೃತ್ತಿ ಮಾಡುತ್ತಿರುವವರ ಸಮಗ್ರ ಪಟ್ಟಿ ತಯಾರಿಸಿ ವರದಿ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕರ್ನಾಟಕ ರಾಜ್ಯ ಕೈಮಗ್ಗ ಅಭಿವದ್ಧಿ ನಿಗಮದ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ ಕೈಮಗ್ಗ ಮತ್ತು ಜವಳಿ ಇಲಾಖೆ ಅಧಿಕಾರಿಗೆ ಸೂಚಿಸಿದರು.

ಹೊಳಲ್ಕೆರೆ ತಾಲ್ಲೂಕಿನ ಮಲಾಡಿಹಳ್ಳಿಯಲ್ಲಿ ಗುರುವಾರ ನಡೆದ ಹತ್ತಿ ಕೈಮಗ್ಗ ನೇಕಾರರ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘದ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿ ನೇಕಾರರಿಗೆ ಅಗತ್ಯವಿರುವ ಮೂಲ ಸೌಕರ್ಯಗಳ ಪಟ್ಟಿ ಮಾಡಬೇಕು. ಬಿಪಿಎಲ್ ಅಥವಾ ಎಪಿಎಲ್ ಕುಟುಂಬದ ನೇಕಾರರು ಇ್ದದರೂ ಸಹ ಪಟ್ಟಿ ತಯಾರಿಸಬೇಕು ಹಾಗೂ ಇಲಾಖೆ ವತಿಯಿಂದ ನೇಕಾರರ ಮಕ್ಕಳಿಗೆ ವಿವಿಧ ರೀತಿಯ ತರಬೇತಿ ಗೌರವಧನ ನೀಡುವ ಮೂಲಕ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನೇಕಾರರ ಸಮಗ್ರ ಪಟ್ಟಿ ನೀಡಿದರೆ, ಸರ್ಕಾರದೊಂದಿಗೆ ಚರ್ಚಿಸಿ ತಮ್ಮ ನಿಗಮದ ಮೂಲಕ ನೇಕಾರರಿಗೆ ಉಚಿತ ಮಗ್ಗ, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ಮೂಲ ಸೌಕರ್ಯ, ಖಾಲಿ ನಿವೇಶನ ಇದ್ದರೆ ಮನೆ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು.

ಕೈಮಗ್ಗ ನಿಗಮದ ಅಧ್ಯಕ್ಷ ಸ್ಥಾನ ವಹಿಕೊಂಡ ಮೇಲೆ ಸುಮಾರು 16 ಸಾವಿರ ಮನೆ ನೇಕಾರರಿಗೆ ಮಂಜೂರು ಮಾಡಿಸಲಾಗಿದೆ. ಶೇ 90ಕ್ಕಿಂತ ಹೆಚ್ಚಿನ ಅಂಕ ಪಡೆದ ನೇಕಾರರ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಬಯಸಿದರೇ ಅಂತಹ ಮಕ್ಕಳನ್ನು ನೇಕಾರರ ಸಮುದಾಯಗಳ ಒಕ್ಕೂಟದಿಂದ ದತ್ತು ಪಡೆದು ಪೂರಕ ಜವಾಬ್ದಾರಿಯೊಂದಿಗೆ ಉನ್ನತ ಶಿಕ್ಷಣ ಕೊಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಮಾನವಲ್ಲಿರುವ ಶಕ್ತಿ ಜಾಗೃತವಾದಾಗ ಮಾತ್ರ ಜಡತ್ವ ಹೊಂದಿದ ಸಂಘ ಸಂಸ್ಥೆಗಳು ಜಾಗತವಾಗಿ ಕಾರ್ಯನಿರ್ವಹಿಸಲು ಸಾಧ್ಯ. ಇದರ ಮೂಲಕ ಸಾವಿರಾರು ಜನರಿಗೆ ಉದ್ಯೋಗ ಕೋಡಲು ಸಹಕಾರಿ ಆಗುತ್ತದೆ ಎಂದು ನುಡಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಟಿ. ರವಿಕುಮಾರ್ ಮಾತನಾಡಿ, ಹತ್ತಿ ಕೈಮಗ್ಗ ನೇಕಾರರ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘದ ಕಟ್ಟಡದ ಸುತ್ತಲೂ ಜಿಲ್ಲಾ ಪಂಚಾಯ್ತಿ ವತಿಯಿಂದ ಕಾಂಪೌಂಡ್ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಕೈಮಗ್ಗ ನಿಗಮದಿಂದ ನೇಕಾರರಿಗೆ ಹೆಚ್ಚಿನ ಸೌಲಭ್ಯ ನೀಡಬೇಕು ಎಂದು ಅಧ್ಯಕ್ಷರಿಗೆ ಮನವಿ ಮಾಡಿದರು.

ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಆಡಳಿತಾಧಿಕಾರಿ ರಾಘವೇಂದ್ರ ಪಾಟೀಲ ಮಾತನಾಡಿ, ರಾಜ್ಯದ ಎಲ್ಲ ತಾಲ್ಲೂಕುಮಟ್ಟಗಳಲ್ಲಿ ವೃತ್ತಿ ಕೌಶಲ ಕಲಿಸುವ ಕೇಂದ್ರಗಳನ್ನು ಆರಂಭಿಸಿದರೆ ಸಾಕಷ್ಟು ಯುವಕರಿಗೆ ಅನುಕೂಲ ಆಗಲಿದೆ ಎಂದರು.

ಕಾರ್ಯಕ್ರಮದ ನೇತೃತ್ವ ವಹಿಸ್ದಿದ ಹಂಪಿ ಹೇಮಕೂಟದ ದಯಾನಂದಪುರಿ ಸ್ವಾಮೀಜಿ ಮಾತನಾಡಿ, ಸಮಾಜದವರು  ಮನಸ್ತಾಪ ಬದಿಗೊತ್ತಿ ಸಮಾಜದ ಸಂಘಟನೆಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಪಿ.ಎ. ಗೋಪಾಲ್, ಜಿ.ಪಂ. ಉಪಾಧ್ಯಕ್ಷೆ ಭಾರತಿ ಕ್ಲಲೇಶ್, ಸದಸ್ಯರಾದ ಪಾರ್ವತಮ್ಮ, ಡಿ. ರಮೇಶ್, ತಾ.ಪಂ. ಸದಸ್ಯ ಸಿ. ರವಿ, ಗ್ರಾ.ಪಂ. ಅಧ್ಯಕ್ಷೆ ಸುರೈಯಾ ಪರ್ವಿನ್, ಮಲ್ಲಾಡಿಹಳ್ಳಿ ದೇವಾಂಗ ಸಮಾಜ ಅಧ್ಯಕ್ಷ ಆತ್ಮರಾಂ, ಬಿಇಒ ಮಂಜುನಾಥ್ ಇದ್ದರು.

ಶ್ರೀನಿವಾಸ್ ರಾಯಚೂರು ಪ್ರಾರ್ಥಿಸಿದರು. ಶಿಕ್ಷಕ ಇ.ಓ. ಗೋಪಾಲ್ ಸ್ವಾಗತಿಸಿದರು. ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕ ಜಿ.ಟಿ. ಕುಮಾರ್ ಪ್ರಾಸ್ತಾವಿಕ ಮಾತನಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.