ಹತ್ತು ಬಾಕ್ಸರ್‌ಗಳು ಆಯ್ಕೆ

7

ಹತ್ತು ಬಾಕ್ಸರ್‌ಗಳು ಆಯ್ಕೆ

Published:
Updated:

ನವದೆಹಲಿ (ಪಿಟಿಐ): ಲಂಡನ್ ಒಲಿಂಪಿಕ್ ಕ್ರೀಡಾಕೂಟಕ್ಕೆ ಆರು ತಿಂಗಳು ಬಾಕಿ ಇರುವಂತೆಯೇ ಭಾರತದ ಬಾಕ್ಸರ್‌ಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಣಾಹಣಿ ನಡೆಸಿಯೇ ಅನುಭವ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ.ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸ್ವರ್ಣ ಪದಕ ಗೆದ್ದಿದ್ದ ಪರಮ್‌ಜಿತ್ ಸಮೋಟಾ ಸೇರಿದಂತೆ ದೇಶದ ಒಟ್ಟು ಹತ್ತು ಬಾಕ್ಸರ್‌ಗಳು ಕಿರ್ಗಿಸ್ತಾನದ ಅಲ್ಮಾಟಿಯಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

 

ಒಲಿಂಪಿಕ್‌ಗೆ ಮುನ್ನ ರಿಂಗ್‌ನಲ್ಲಿ ವಿದೇಶಿ ಬಾಕ್ಸರ್‌ಗಳನ್ನು ಎದುರಿಸುವುದು ಪ್ರಯೋಜನಕಾರಿ ಎಂದು ಸಮೋಟಾ ತಿಳಿಸಿದ್ದಾರೆ.

ತಂಡ ಇಂತಿದೆ: ಎಲ್. ದೇವೇಂದ್ರ ಸಿಂಗ್ (48 ಕೆ.ಜಿ.), ಸುನಿಲ್ ಕುಮಾರ್ (52 ಕೆ.ಜಿ.), ಛೋಟೆ ಲಾಲ್ ಯಾದವ್ (56 ಕೆ.ಜಿ.), ವಿನಯ್ ಕುಮಾರ್ (60 ಕೆ.ಜಿ.), ವಿಜಯ್ ಕುಮಾರ್ (69 ಕೆ.ಜಿ.), ಕುಲ್ದೀಪ್ ಸಿಂಗ್ (75 ಕೆ.ಜಿ.), ಸುಮಿತ್ ಸಂಗ್ವಾನ್ (81 ಕೆ.ಜಿ.), ಮನ್‌ಪ್ರೀತ್ ಸಿಂಗ್ (91 ಕೆ.ಜಿ.), ಪರಮ್‌ಜಿತ್ ಸಮೋಟಾ (+91 ಕೆ.ಜಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry